ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ವಾಟೆಮಾಲಾದಲ್ಲಿ ಭೂಕುಸಿತ: 50 ಮಂದಿ ಸಾವು, ಹಲವರು ನಾಪತ್ತೆ

|
Google Oneindia Kannada News

ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಭಾರಿ ಮಳೆಯಿಂದಾಗಿ ಹಲವೆಡೆ ಭೂ ಕುಸಿತ ಸಂಭವಿಸಿದ್ದು, 50 ಮಂದಿ ಮೃತಪಟ್ಟಿದ್ದು, ಹಲವರು ಕಾಣೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಧ್ಯ ಗ್ವಾಟೆಮಾಲಾದಲ್ಲಿ ಗುಡ್ಡ ಕುಸಿತದಿಂದ 25 ಮನೆಗಳು ನೆಲಸಮವಾಗಿದ್ದು, ಹಲವಾರು ಮಂದಿ ಅವಶೇಷದಡಿ ಸಿಲುಕಿದ್ದಾರೆ ಎಂದು ಅಧ್ಯಕ್ಷ ಅಲ್‌ಜಂಡ್ರೊ ಗಿಯಾಮಟೈ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ತೂಫಾನ್ ಅಬ್ಬರದಿಂದ ಭೂ ಕುಸಿತ: ಕನಿಷ್ಠ 35 ಸಾವುತೂಫಾನ್ ಅಬ್ಬರದಿಂದ ಭೂ ಕುಸಿತ: ಕನಿಷ್ಠ 35 ಸಾವು

ಮಧ್ಯ ಅಮೆರಿಕದಲ್ಲಿ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಗ್ವಾಟೆಮಾಲದಿಂದ ಪನಾಮಾವರೆಗೂ ಅನೇಕ ಭೂಕುಸಿತಗಳು ಸಂಭವಿಸಿವೆ ಎಂದು ತಿಳಿದುಬಂದಿದೆ.

Storm Eta: Guatemala Landslide Kills At Least 50

ವಿವಿಧೆಡೆ ಗುಡ್ಡ ಕುಸಿತಗಳು ಸಂಭವಿಸಿದ್ದು, ಇಲ್ಲಿನ ಸ್ಯಾನ್‌ ಕ್ರಿಸ್ಟೊಬಾಲ್‌ ವೆರಪಾಜ್‌ ನಗರದಲ್ಲೂ ಭಾರಿ ಭೂಕುಸಿತವಾಗಿದೆ.

ಮನೆಗಳು ಗುಡ್ಡದಡಿ ಸಿಲುಕಿದ್ದು, 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಹಾಗೆಯೇ ಮಧ್ಯ ಅಮೆರಿಕದಲ್ಲಿ ಮಳೆಯಿಂದಾಗಿ 23 ಮಂದಿ ಮೃತಪಟ್ಟಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಎಟಾ ಚಂಡಮಾರುತದ ಪರಿಣಾಮ ಮಧ್ಯ ಅಮೆರಿಕದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭಾರಿ ಅವಾಂತರ ಸೃಷ್ಟಿಯಾಗಿದ್ದು, ನೀರಿನ ಪ್ರವಾಹ ಮತ್ತು ಭೂಕುಸಿತದಿಂದಾಗಿ ಕನಿಷ್ಟ 50 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

English summary
Guatemalan President Alejandro Giammattei said around half the deaths were in a single town where a hillside collapse buried some 20 houses under thick mud.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X