• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವಲ್ಲಿ ಸ್ಪೇಸ್‌ಎಕ್ಸ್ ಯಶಸ್ವಿ

|

ವಾಷಿಂಗ್ಟನ್, ಮೇ 31: ಅಮೆರಿಕದ ಖಾಸಗಿ ರಾಕೆಟ್ ಕಂಪನಿ ಸ್ಪೇಸ್‌ಎಕ್ಸ್‌ ಇಬ್ಬರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದೆ.

ಸ್ಪೇಸ್‌ ಎಕ್ಸ್ ಡೆಮೋ-2 ಮಿಶನ್ ಎನ್ನುವುದು ನಾಸಾದ ವ್ಯಾವಹಾರಿಕ ಮಾನವ ಸಹಿತ ಗಗನಯಾನ ಯೋಜನೆಯಾಗಿದೆ. ರಾಬರ್ಟ್ ಬೆಹೆನ್ಕೆನ್ ಹಾಗೂ ಡೌಗ್ಲಾಸ್ ಹರ್ಲಿ ಎಂಬುವವರು ಇಬ್ಬರು ಈ ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ ಎಕ್ಸ್‌ ಫಾಲ್ಕಾನ್ 9 ರಾಕೆಟ್ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಕಾಲಮಾನ ರಾತ್ರಿ 12.15 ಗಂಟೆಗೆ ಉಡಾವಣೆಯಾಗಿದೆ.

ಗಗನಯಾತ್ರಿ ಸಹಿತ ರಾಕೆಟ್ ಹಾರಾಟಕ್ಕೆ ಸಮಯ ನಿಗದಿಗೊಳಿಸಿದ ನಾಸಾ

ಶನಿವಾರ ರಾತ್ರಿ ಫ್ಲೋರಿಡಾದ ಇಬ್ಬರು ನಾಸಾ ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ ಎಕ್ಸ್ ಉಡಾವಣೆಯಾಗಿದೆ. 9 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎಲಾನ್ ಮಸ್ಕ್ ಅವರ ಮಾಲೀಕತ್ವದ ಖಾಸಗಿ ರಾಕೆಟ್ ಕಂಪನಿ ಮಾನವ ಸಹಿತ ಗಗನಯಾನ ಕೈಗೊಂಡಿರುವ ಕಾರಣ ಇದು ವಿಶೇಷವೆನಿಸಿದೆ.

2011ರ ನಂತರ ಅಮೆರಿಕ ನೆಲದಿಂದ ಬಾಹ್ಯಾಕಾಶ ಯಾತ್ರೆ ಕೈಗೊಂಡಿರಲಿಲ್ಲ. 9 ವರ್ಷಗಳ ಬಳಿಕ ಇದು ಮೊದಲ ಯಾನವಾಗಿರುವ ಕಾರಣಕ್ಕೆ ವಿಶ್ವದ ಗಮನ ಸೆಳೆದಿದೆ.

19 ತಾಸುಗಳ ಪ್ರಯಾಣದ ಬಳಿಕ ಗಗನಯಾತ್ರಿಗಳು ಅಮತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಲಿದ್ದಾರೆ.

ಕಳೆದ 9 ವರ್ಷಗಳಲ್ಲಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ರಷ್ಯಾ ಮೇಲೆ ಅಮೆರಿಕ ಅವಲಂಬಿತವಾಗಿತ್ತು. ಪ್ರತಿಯಾನಕ್ಕೆ ರಷ್ಯಾ 650 ಕೋಟಿ ರೂ ವಿಧಿಸುತ್ತಿತ್ತು. ಆದರೆ ಸ್ಪೇಸ್‌ಎಕ್ಸ್ 415 ಕೋಟಿ ರೂ. ಪಡೆಯಲಿದೆ.

ಕ್ರೂ ಡ್ರ್ಯಾಗನ್‌ಗಾಗಿ ಸ್ಪೇಸ್‌ಎಕ್ಸ್ ಪೂರ್ಣಗೊಳಿಸಬೇಕಾದ ಕೊನೆಯ ಪರೀಕ್ಷೆಗಳಲ್ಲಿ ಒಂದಾದ ಮಾರ್ಕ್ 3 ಪ್ಯಾರಾಚೂಟ್ ಸಿಸ್ಟಮ್ ಅಂತಿಮ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ಕಂಪನಿಯು ಮೇ 1 ರಂದು ಘೋಷಿಸಿದ್ದು ಒಟ್ಟಾರೆ 27 ಪರೀಕ್ಷೆಗಳನ್ನು ನಡೆಸಿತ್ತು.

ಅಮೆರಿಕದ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಸಾಗಿಸಲು ಖಾಸಗಿ ಬಾಹ್ಯಾಕಾಶ ನೌಕೆಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ನಾಸಾದ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮವು ಬರಾಕ್ ಒಬಾಮರ ಅಡಿಯಲ್ಲಿ ಪ್ರಾರಂಭವಾಗಿತ್ತು.

ಕಳೆದ 2011ರಲ್ಲಿ ಬಾಹ್ಯಾಕಾಶ ನೌಕೆಯ ನಿವೃತ್ತಿ ಆದಾಗಿನಿಂದಲೂ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ರವಾನಿಸಲು ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾ, ರಷ್ಯಾದ ರಾಕೆಟ್‌ಗಳನ್ನು ಬಳಸಿಕೊಳ್ಳುತ್ತಿದೆ.

ಬುಧವಾರ ಮೊದಲ ಬಾರಿಗೆ ಇಬ್ಬರು ಗಗನಯಾತ್ರಿಗಳನ್ನು ಹೊಂದಿರುವ ರಾಕೆಟ್ ನ್ನು ನಾಸಾ ಮತ್ತು ಸ್ಪೇಸ್ ಎಕ್ಸ್ ಬಾಹ್ಯಾಕಾಶಕ್ಕೆ ಹಾರಿತ್ತು.

ನಾಸಾ ವಿಜ್ಞಾನಿಗಳ ಪರಿಶ್ರಮಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಧನ್ಯವಾದ ತಿಳಿಸಿದ್ದು, ಶನಿವಾರ ನಡೆಸುವ ನಿಮ್ಮ ಪ್ರಯತ್ನಕ್ಕೆ ಫಲಿಸಲಿ ಎಂದು ಟ್ವೀಟ್ ಮಾಡಿದ್ದರು.

English summary
A SpaceX rocket carrying two veteran NASA astronauts was headed for the International Space Station on Saturday on the first ever crewed flight by a private company, ushering in a new era in space travel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X