ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದ ಸ್ಮಾರಕ ಉತ್ಸವದ ವೇಳೆ ಗುಂಡಿನ ದಾಳಿ, 1 ಸಾವು, 10 ಮಂದಿ ಗಾಯ

|
Google Oneindia Kannada News

ವಾಷಿಂಗ್ಟನ್, ಮೇ 30: ಅಮೆರಿಕದಲ್ಲಿ ಒಂದರ ಹಿಂದೆ ಒಂದರಂತೆ ಗುಂಡು ಹಾರಿಸುವ ಘಟನೆಗಳು ನಡೆಯುತ್ತಿದ್ದು ನಿಲ್ಲುವಂತೆ ಕಾಣಿಸುತ್ತಿಲ್ಲ. ಅಮೆರಿಕದಲ್ಲಿ ನಡೆಯುತ್ತಿರುವ ಸರಣಿ ಗುಂಡಿನ ದಾಳಿಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿವೆ. ಇಂದು ಮತ್ತೊಮ್ಮೆ ಅಮೆರಿಕದಲ್ಲಿ ಗುಂಡಿನ ದಾಳಿಯ ಸುದ್ದಿ ಮುನ್ನೆಲೆಗೆ ಬಂದಿದೆ. ವರದಿಗಳ ಪ್ರಕಾರ, ಓಕ್ಲಹಾಮಾದಲ್ಲಿ ನಡೆದ ಸ್ಮಾರಕ ಉತ್ಸವದ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ.

ಉತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದ ಜನರು ಮಧ್ಯರಾತ್ರಿ ವಾಗ್ವಾದಕ್ಕಿಳಿದಾಗ ಗುಂಡಿನ ಚಕಮಕಿ ನಡೆದಿದೆ. ವಾದ-ವಿವಾದದ ನಂತರ ವಾತಾವರಣ ಮತ್ತಷ್ಟು ಹದಗೆಟ್ಟು ಗುಂಡಿನ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಶಂಕಿತ ದಾಳಿಕೋರನು ಸ್ವತಃ ಮಸ್ಕೋಗಿ ಕೌಂಟಿ ಪೊಲೀಸ್ ಕಚೇರಿಗೆ ಆಗಮಿಸಿದ್ದಾನೆ ಎಂದು ಸ್ಟೇಟ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಹೇಳಿದೆ. ಆದರೆ ಅವನ ವಿರುದ್ಧ ಇನ್ನೂ ಆರೋಪಗಳು ಕೇಳಿ ಬಂದಿಲ್ಲ. ಜೊತೆಗೆ ಯಾವುದೇ ದೂರು ದಾಖಲಾಗಿಲ್ಲ.

ಘಟನೆಯ ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲಾ ಗಾಯಾಳುಗಳ ಪ್ರಾಣ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆ ನಡೆದ ಸಂದರ್ಭದಲ್ಲಿ ಸುಮಾರು 1500 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದರು. ಇತ್ತೀಚೆಗೆ ಟೆಕ್ಸಾಸ್‌ನಲ್ಲಿರುವ ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆದಿದ್ದು, ಹತ್ತಾರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ ಇತ್ತೀಚೆಗೆ ನ್ಯೂಯಾರ್ಕ್‌ನ ಬಫಲೋ ಮಾರ್ಕೆಟ್‌ನಲ್ಲಿ ಗುಂಡಿನ ದಾಳಿಯ ಘಟನೆಯೂ ವರದಿಯಾಗಿದೆ.

Shooting during memorial festival in Oklahoma, US, 1 killed, 10 injured

Recommended Video

RCB ಡ್ರೆಸ್ಸಿಂಗ್ ರೂಮ್ ನಲ್ಲಿ ಕೊನೇ ಕ್ಷಣ ಕಳೆದ ದಿನೇಶ್ ಕಾರ್ತಿಕ್‌ ಭಾವುಕರಾಗಿ ಹೇಳಿದ್ದೇನು? | OneIndia Kannada

ಎರಡು ದಿನಗಳಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ 13 ಮಂದಿ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ. ವಿಸ್ಕಾನ್ಸಿನ್‌ನ ಮಿಲ್ವಾಕಿಯಲ್ಲಿರುವ ಬಾಸ್ಕೆಟ್‌ಬಾಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಶನಿವಾರ ಸಂಜೆ, ಬಂದೂಕುಧಾರಿಯೊಬ್ಬ ನ್ಯೂಯಾರ್ಕ್‌ನ ಬಫಲೋ ಸೂಪರ್‌ಮಾರ್ಕೆಟ್‌ಗೆ ನುಗ್ಗಿ ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಹತ್ತು ನಾಗರಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

English summary
Today once again the news of firing in America has come to the fore. According to reports, the shooting took place during the Memorial Festival in Oklahoma. One person has lost his life in this firing while 10 people have been injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X