2ನೇ ವಿಶ್ವಯುದ್ಧದ ಯೋಧನಿಗೆ ಮಂಡಿಯೂರಿ ನಮಿಸಿದ ಸಾಂತಾಕ್ಲಾಸ್

ವಾಷಿಂಗ್ಟನ್ ಡಿಸಿ, ಡಿಸೆಂಬರ್ 13 : ಕ್ರಿಸ್ಮಸ್ ಹತ್ತಿರ ಬರುತ್ತಿದ್ದಂತೆ ವಿಶಿಷ್ಟ ವೇಷ ತೊಟ್ಟುಕೊಂಡು ಸಾಂತಾ ಕ್ಲಾಸ್ ನೋಡುಗರನ್ನು ರಂಜಿಸುವುದು, ಉಡುಗೊರೆ ಕೊಡುವುದು ಸರ್ವೇಸಾಮಾನ್ಯ. ಆದರೆ, 93 ವರ್ಷದ ವಯೋವೃದ್ಧರಿಗೆ ಸಾಂತಾ ಕ್ಲಾಸ್ ನೀಡಿದ ವಿಶಿಷ್ಟ ಉಡುಗೊರೆ ನೋಡುಗರನ್ನು ಮಾತ್ರವಲ್ಲ, ವಯಸ್ಕರಲ್ಲೂ ಅಚ್ಚರಿ ಮೂಡಿಸಿತು.

ಆ ವಿಶೇಷವಾದ ಉಡುಗೊರೆ ಮತ್ತಾವುದೂ ಅಲ್ಲ, ಸಾಂತಾ ಕ್ಲಾಸ್ ಆ ವಯಸ್ಕರ ಮುಂದೆ ಮಂಡಿಯೂರಿ ಗೌರವ ಸಲ್ಲಿಸಿದರು. ಆ ವಯಸ್ಕ ಮತ್ತಾರೂ ಅಲ್ಲ ಎರಡನೇ ವಿಶ್ವಯುದ್ಧದಲ್ಲಿ ಪಾಲ್ಗೊಂಡಿದ್ದ ಬಾಬ್ ಸ್ಮೈಲೀ. ಯುದ್ಧದಲ್ಲಿ ತನ್ನ ದೇಶಕ್ಕಾಗಿ ತನ್ನನ್ನೇ ಸಮರ್ಪಿಸಿಕೊಳ್ಳುವ ಯೋಧನಿಗೆ ಧನ್ಯವಾದ ಸಮರ್ಪಿಸುವುದಕ್ಕಿಂತ ಉತ್ತಮವಾದ ಗೌರವ ಇನ್ನೇನಿದೆ?

ಈ ಘಟನೆ ನಡೆದಿದ್ದು ಡೆಲ್ವೇರ್ ನ ಕಾನ್ ಕಾರ್ಡ್ ಮಾಲ್ ನಲ್ಲಿ. ಎರಡನೇ ಮಹಾಯುದ್ಧದಲ್ಲಿ ಸೈನಿಕ ನೀಡಿದ ಸೇವೆಗಾಗಿ ಸಾಂತಾ ಕ್ಲಾಸ್ ವೇಷಧಾರಿ ತೋರಿಸಿದ ಗೌರವ ನೋಡುಗರೆಲ್ಲರನ್ನೂ ಮೂಕವಿಸ್ಮಿತ ಮಾಡಿತು. ಕೆಲವರು ಭಾವುಕರಾದರೆ, ಎಲ್ಲರೂ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಯೋಧನಲ್ಲಿ ಸಾರ್ಥಕತೆ ಮನೆಮಾಡಿತ್ತು.

Santa Claus goes down on knees to salute WWII veteran

ಗಿನಾ ವಿಲ್ಬರ್ ಎಂಬುವವರು ಸಾಂತಾ ಕ್ಲಾಸ್ ನ ಫೋಟೋ ತೆಗೆಯಬೇಕೆಂದು ಕಾಯುತ್ತಿದ್ದವರು, ವಿಶಿಷ್ಟ ಅನುಭೂತಿ ಮೂಡಿಸಿದ ಈ ಘಟನೆಯ ಚಿತ್ರವನ್ನೂ ತೆಗೆಯಲು ಮರೆತಿಲ್ಲ. ಈ ಚಿತ್ರವನ್ನು ಜೆನ್ ಫ್ರೆಡೆರಿಕ್ ಎಂಬುವವರು ಇನ್‌ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಕ್ರಿಸ್ಮಸ್ ಹಬ್ಬ ಜೀಸಸ್ ಕ್ರಿಸ್ತನ ಹುಟ್ಟುಹಬ್ಬದ ಸಂಭ್ರಮ ಮಾತ್ರವಲ್ಲ, ಸಂತಸ ಹಂಚಿಕೊಳ್ಳುವ, ಧನ್ಯವಾದ ಸಮರ್ಪಿಸುವ, ರಜಾ ದಿನಗಳಲ್ಲಿ ಮಜಾ ಮಾಡುವ ಸಮಯವೂ ಹೌದು. ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಕ್ಕಾಗಿ ಕಾನ್ ಕಾರ್ಡ್ ಮಾಲ್ ಕೂಡ ಚಿತ್ರ ತೆಗೆದ ಗಿನಾ ವಿಲ್ಬರ್ ಅವರಿಗೆ ಧನ್ಯವಾದ ಹೇಳಿದೆ.

ಮತ್ತೊಂದು ಅಚ್ಚರಿಯ ಸಂಗತಿಯೆಂದರೆ, ಸಂತಾ ಪಾತ್ರಧಾರಿ ಕೂಡ ಬಾಬ್ ಸ್ಮೈಲೀ ಜೊತೆ, ಜನರಲ್ ಜಾರ್ಜ್ ಪ್ಯಾಟನ್ ಅಡಿಯಲ್ಲಿ ಎರಡನೇ ವಿಶ್ವಯುದ್ಧದಲ್ಲಿ ಸೇವೆ ಸಲ್ಲಿಸಿದ್ದರು. ಇಬ್ಬರು ಫಿಲಡೆಲ್ಫಿಯಾದಲ್ಲಿ ಭೇಟಿಯಾಗಿದ್ದರು. ತಾವು ಹೀಗೆ ಮಂಡಿಯೂರಿ ಗೌರವ ಸಲ್ಲಿಸಿದ್ದಕ್ಕೆ ಕಾರಣವನ್ನೂ ಸಾಂತಾ ಪಾತ್ರಧಾರಿ ವಿವರಿಸಿದ್ದಾರೆ. ದೇಶಕ್ಕೆ ಸೇವೆ ಸಲ್ಲಿಸಿದ್ದು ನನ್ನ ಕರ್ತವ್ಯ ಎಂದು ಬಾಬ್ ಸ್ಮೈಲೀ ವರು ಸ್ಮೈಲ್ ಮಾಡಿಕೊಂಡು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+