ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಅಮೇರಿಕಾದಲ್ಲಿ 1400 ಮಂದಿ ಬಂಧನ.!

|
Google Oneindia Kannada News

ವಾಷಿಂಗ್ಟನ್, ಮೇ 31: ''ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ'', ''ನನ್ನನ್ನು ಕೊಲ್ಲಬೇಡಿ'' ಎಂದು ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಬೇಡಿಕೊಳ್ಳುತ್ತಿದ್ದರೂ, 'ವೈಟ್' ಪೊಲೀಸ್ ಮಾನವೀಯತೆ ಮರೆಯಲಿಲ್ಲ. ಎಂಟು ನಿಮಿಷಕ್ಕೂ ಅಧಿಕ ಕಾಲ ಜಾರ್ಜ್ ಫ್ಲಾಯ್ಡ್ ಕುತ್ತಿಗೆ ಮೇಲೆ 'ಬಿಳಿ' ಪೊಲೀಸ್ ಬಲವಾಗಿ ಮಂಡಿಯೂರಿ ವಿಕೃತಿ ಪ್ರದರ್ಶಿಸಿದ್ದರು. ಪರಿಣಾಮ, ಜಾರ್ಜ್ ಫ್ಲಾಯ್ಡ್ ಪ್ರಾಣ ಬಿಟ್ಟಿದ್ದರು.

Recommended Video

ಚೀನಾ ಭಾರತ ಗಡಿ ವಿವಾದ ಬಗೆಹರಿಸಲು ಮುಂದಾದ ಅಮೇರಿಕಾ | Oneindia Kannada

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಮಿನ್ನಿಯಾಪೊಲಿಸ್ ಸೇರಿದಂತೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ 17 ನಗರಗಳಲ್ಲಿ ಪ್ರತಿಭಟನೆ ಆರಂಭವಾಯಿತು.

ಅಮೇರಿಕಾದಲ್ಲಿ ಅಮಾನವೀಯ ಘಟನೆ: ಬಿಳಿ ಪೊಲೀಸರ ಅಟ್ಟಹಾಸಕ್ಕೆ ಬಲಿಯಾದ ಕಪ್ಪು ವರ್ಣೀಯಅಮೇರಿಕಾದಲ್ಲಿ ಅಮಾನವೀಯ ಘಟನೆ: ಬಿಳಿ ಪೊಲೀಸರ ಅಟ್ಟಹಾಸಕ್ಕೆ ಬಲಿಯಾದ ಕಪ್ಪು ವರ್ಣೀಯ

ಕಳೆದ ಐದು ದಿನಗಳಿಂದಲೂ ಪ್ರತಿಭಟನೆ ನಡೆಯುತ್ತಿದ್ದು, ಹಿಂಸಾಚಾರಕ್ಕೆ ತಿರುಗಿದೆ. ವಾಣಿಜ್ಯ ಮಳಿಗೆ, ಹೋಟೆಲ್ ಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಅಪರಿಚಿತನ ಗುಂಡೇಟಿಗೆ ಓರ್ವ ಬಲಿಯಾಗಿದ್ದಾನೆ.

Protest Against George Floyd Death In Minneapolis: 1400 arrested in 17 cities

ಇನ್ನೂ ಹಲವರು ಪ್ರತಿಭಟನೆಯನ್ನೇ ನೆಪವಾಗಿಟ್ಟುಕೊಂಡು, ದುಬಾರಿ ವಸ್ತುಗಳ ಅಂಗಡಿಗಳನ್ನು ಲೂಟಿ ಹೊಡೆಯುತ್ತಿದ್ದಾರೆ. ಮಿನ್ನಿಯಾಪೊಲಿಸ್ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪ್ರತಿಭಟನೆ ಸಂಬಂಧ 17 ನಗರಗಳಲ್ಲಿ ಇಲ್ಲಿಯವರೆಗೂ ಬರೋಬ್ಬರಿ 1400 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.

ಅಮೇರಿಕಾದಲ್ಲಿ ಹಿಂಸಾತ್ಮಕ ಪ್ರತಿಭಟನೆ: ಧಗ ಧಗ ಹೊತ್ತಿಯುರಿದ ಭಾರತೀಯ ಹೋಟೆಲ್!ಅಮೇರಿಕಾದಲ್ಲಿ ಹಿಂಸಾತ್ಮಕ ಪ್ರತಿಭಟನೆ: ಧಗ ಧಗ ಹೊತ್ತಿಯುರಿದ ಭಾರತೀಯ ಹೋಟೆಲ್!

ಬ್ಲಾಕ್ ಮ್ಯಾನ್ ಜಾರ್ಜ್ ಫ್ಲಾಯ್ಡ್ ಮೇಲೆ ಮೃಗೀಯ ವರ್ತನೆ ತೋರಿದ ಪೊಲೀಸರನ್ನು ಸದ್ಯ ಬಂಧಿಸಲಾಗಿದ್ದು, ಕೆಲಸದಿಂದ ವಜಾಗೊಳಿಸಲಾಗಿದೆ.

English summary
Protest Against George Floyd Death In Minneapolis: 1400 arrested in 17 cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X