ದೇಶವನ್ನು ಉದ್ದೇಶಿಸಿ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಭಾಷಣ

ವಾಷಿಂಗ್ಟನ್, ನವೆಂಬರ್ 08 : ಅಮೆರಿಕ ಅಧ್ಯಕೀಯ ಚುನಾವಣೆಯಲ್ಲಿ ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಗೆಲುವು ಸಾಧಿಸಿದ್ದಾರೆ. ಅಮೆರಿಕದ 46ನೇ ನಿಯೋಜಿತ ಅಧ್ಯಕ್ಷ ಜೋ ಬೈಡನ್ ದೇಶವನ್ನು ಉದ್ದೇಶಿಸಿ ಮಾತನಾಡಿದರು.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಡೆಮಾಕ್ರಟ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಜೋ ಬೈಡನ್ ಮತ್ತು ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರೀಸ್ ದೇಶವನ್ನು ಉದ್ದೇಶಿಸಿ ಮಾತನಾಡಿದರು, ಹಲವಾರ ವಿಚಾರಗಳನ್ನು ಹಂಚಿಕೊಂಡರು.

"ದೇಶದ ಜನರು ಮಾತನಾಡಿದ್ದಾರೆ, ಅವರು ನಮಗೆ ಪರಿಪೂರ್ಣ ಗೆಲುವನ್ನು ನೀಡಿದ್ದಾರೆ. ಹಿಂದಿನ ಎಲ್ಲಾ ಚುನಾವಣೆಗಿಂತ ಅತ್ಯಧಿಕ ಮತಗಳನ್ನು ನಾವು ಪಡೆದಿದ್ದೇವೆ" ಎಂದು ನಿಯೋಜಿ ಅಧ್ಯಕ್ಷ ಜೋ ಬೈಡೆನ್ ಹೇಳಿದರು.

Joe Biden

"ನಾನು ಅಧ್ಯಕ್ಷನಾಗಿ ಪ್ರಮಾಣ ಮಾಡುತ್ತೇನೆ ನಮಗೆ ಒಗ್ಗಟ್ಟು ಮತ್ತು ಒಕ್ಕೂಟ ವ್ಯವಸ್ಥೆ ಬೇಕು. ಅಧ್ಯಕ್ಷರು ಕೆಂಪು ರಾಜ್ಯಗಳು, ನೀಲಿ ರಾಜ್ಯಗಳು ಎಂದು ನೋಡುವುದಿಲ್ಲ. ಅಮೆರಿಕವಾಗಿ ನೋಡುತ್ತೇವೆ" ಎಂದರು.

"ಪ್ರಜಾಪ್ರಭುತ್ವವನ್ನು ಕಾಪಾಡುವಾಗ ಹಲವಾರು ಅಡೆತಡೆಗಳು ಎದುರಾಗುತ್ತವೆ. ಕೆಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಆದರೆ, ಅಲ್ಲಿಯೂ ಒಂದು ಸಂತೋಷ ಅಡಗಿದೆ. ಏಕೆಂದರೆ ನಾವು ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡುತ್ತಿದ್ದೇವೆ" ಎಂದು ಕಮಲಾ ಹ್ಯಾರೀಸ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+