• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ನನಗೆ ಆತ್ಮೀಯ ಸ್ನೇಹಿತ, ಭಾರತೀಯರು ಖಂಡಿತವಾಗಿ ನನಗೆ ಮತ ಹಾಕುತ್ತಾರೆ: ಟ್ರಂಪ್

|

ವಾಷಿಂಗ್ಟನ್, ಸೆಪ್ಟೆಂಬರ್ 05: ಭಾರತದ ಪ್ರಧಾನಿ ಮೋದಿ ನನಗೆ ಆತ್ಮೀಯ ಸ್ನೇಹಿತ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕದಲ್ಲಿರುವ ಭಾರತೀಯರು ನನಗೇ ಮತ ಹಾಕುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಈ ವರ್ಷ ಫೆಬ್ರವರಿಯಲ್ಲಿ ಪತ್ನಿ ಮಲೆನಿಯಾ ಟ್ರಂಪ್ ಜೊತೆಗೆ ಭಾರತಕ್ಕೆ ಭೇಟಿ ನೀಡಿದ್ದರ ಬಗ್ಗೆ ಮಾತನಾಡಿದ ಟ್ರಂಪ್, ಭಾರತವು ಶ್ರೇಷ್ಠ ರಾಷ್ಟ್ರವಾಗಿದೆ, ಅಲ್ಲಿ ನಾವು ಉತ್ತಮ ಸಮಯವನ್ನು ಕಳೆದಿದ್ದೇವೆ ಎಂದು ಹಳೆಯ ನೆನಪು ಮೆಲುಕು ಹಾಕಿದರು. ಅಮೆರಿಕದಲ್ಲಿರುವ ಭಾರತೀಯರು ನನಗೆ ಮತ ಹಾಕುತ್ತಾರೆ ಎನ್ನುವ ಭರವಸೆ ಇದೆ ಎಂದರು.

ಮೋದಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ನೀವು ಓರ್ವ ಸರ್ವಶ್ರೇಷ್ಠ ನಾಯಕ ಮತ್ತು ಶ್ರೇಷ್ಠ ವ್ಯಕ್ತಿಯನ್ನು ಪಡೆದಿದ್ದೀರಿ, ಹೌಡಿ ಮೋದಿ ಸಮಾರಂಭದ ಕುರಿತು ಮಾತನಾಡಿ, ನಾವು ಹ್ಯೂಸ್ಟನ್ ನಗರದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದೆವು. ಅದು ಅದ್ಭುತವಾಗಿತ್ತು.

ನಾವು ಭಾರತದಿಂದ ಮತ್ತು ಪ್ರಧಾನಿ ಮೋದಿ ಅವರಿಂದ ದೊಡ್ಡ ಮಟ್ಟದ ಬೆಂಬಲವನ್ನು ಪಡೆದುಕೊಂಡಿದ್ದೇವೆ. ಭಾರತದವರು ಟ್ರಂಪ್‌ಗಾಗಿ ಮತ ಚಲಾಯಿಸಲಿದ್ದಾರೆ ಎನಿಸುತ್ತದೆ ಎಂದು ಭರವಸೆಯ ಮಾತುಗಳನ್ನಾಡಿದರು.

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್‌ಗೆ ಭಾರಿ ಮುಖಭಂಗ

ಅಮೆರಿಕದ ಚುನಾವಣೆಯೆಲ್ಲಿ ಭಾರತೀಯರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಪೆನ್ಸಿಲ್‌ವೇನಿಯಾ, ಓಹಿಯೋದಲ್ಲಿ ಒಂದೊಂದು ಮತ ಪಡೆಯಲು ಸಾಕಷ್ಟು ಸಾಹಸಪಡಬೇಕಿದೆ ಎಂದು ಹೇಳಿದರು.

English summary
Highlighting the great relationship that he has developed with Indian Americans and Prime Minister Narendra Modi, US President Donald Trump said that he would think that Indian Americans will vote for him in the November 3 presidential election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X