ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ 3 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ, ಮಕ್ಕಳು ಸೇರಿ 13 ಮಂದಿ ಸಾವು

|
Google Oneindia Kannada News

ಫಿಲಿಡೆಲ್ಫಿಯಾ, ಜನವರಿ 06: ಅಮೆರಿಕಾದ ಫಿಲಿಡೆಲ್ಫಿಯಾದಲ್ಲಿ ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಮಕ್ಕಳು ಸೇರಿ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ.

ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗೆ ಸುಮಾರು 50 ನಿಮಿಷ ಬೇಕಾಯಿತು. ಆದರೆ ಕಟ್ಟಡದಲ್ಲಿ ನಾಲ್ಕು ಸ್ಮೋಕ್ ಡಿಟೆಕ್ಟರ್‌ಗಳಿದ್ದರೂ, ಅವು ವಿಫಲಗೊಂಡ ಕಾರಣ ಮಕ್ಕಳು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಗ್ನಿ ಶಾಮಕ ದಳ ತಿಳಿಸಿದೆ.

ಭದ್ರಾವತಿ; ಭಾರೀ ಅಗ್ನಿ ಅವಘಡ, 8 ಗಂಟೆ ಬಳಿಕ ಹತೋಟಿಗೆ ಬಂದ ಬೆಂಕಿ ಭದ್ರಾವತಿ; ಭಾರೀ ಅಗ್ನಿ ಅವಘಡ, 8 ಗಂಟೆ ಬಳಿಕ ಹತೋಟಿಗೆ ಬಂದ ಬೆಂಕಿ

ಈ ಕ್ರಮದಲ್ಲಿ ಏಳು ಮಕ್ಕಳು ಸೇರಿದಂತೆ ಎಂಟು ಜನರು ಎರಡು ನಿರ್ಗಮನ ಮಾರ್ಗಗಳ ಮೂಲಕ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಫಿಲಡೆಲ್ಫಿಯಾ ಉಪ ಅಗ್ನಿಶಾಮಕ ಆಯುಕ್ತ ಕ್ರೇಗ್ ಮರ್ಫಿ ಹೇಳಿದ್ದಾರೆ.

Philadelphia Fire: Eight Children Among 13 Dead In Apartment Blaze

ಈವರೆಗೆ ತಾವು ನೋಡಿದ ಅತ್ಯಂತ ಭಯಾನಕ ಅಗ್ನಿ ಅವಘಡವಾಗಿದೆ ಮೇಯರ್ ಜಿಮ್ ಕೆನ್ನಿ ಹೇಳಿದ್ದಾರೆ. ಕಟ್ಟಡವನ್ನು ಎರಡು ಕುಟುಂಬಗಳಿಗೆ ಅನುಕೂಲವಾಗುವಂತೆ ಪರಿವರ್ತಿಸಲಾಗಿದ್ದು, ಸುಮಾರು 26 ಮಂದಿ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಗ್ನಿಶಾಮಕ ಆಯುಕ್ತ ಕ್ರೇಗ್ ಮರ್ಫಿ ಹೇಳಿದ್ದಾರೆ.

ಸಾರ್ವಜನಿಕ ವಸತಿ ಪ್ರಾಧಿಕಾರ ಒಡೆತನದ ನಗರದ ಫೇರ್‌ಮೌಂಟ್ ಪರಿಸರದಲ್ಲಿದ್ದ ಮೂರು ಅಂತಸ್ತಿನ ಕಟ್ಟಡದ ಎರಡನೇ ಮಹಡಿಯಲ್ಲಿ ಬೆಂಕಿ ಅವಘಡ ನಡೆದಿದ್ದು, ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು.

Recommended Video

Rishab Pantಗೆ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳಾರತಿ | Oneindia Kannada

English summary
13 people have been killed and several more have been injured after a fire broke out in an apartment building in the US city of Philadelphia.Eight children are among the dead, an official from the Philadelphia Fire Department told reporters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X