ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್ ಕೊನೆಯದ್ದಲ್ಲ, ಮತ್ತಷ್ಟು ರೂಪಾಂತರಿಗಳು ಬರಬಹುದು: WHO

|
Google Oneindia Kannada News

ವಾಷಿಂಗ್ಟನ್, ಜನವರಿ 25: ಕೊರೊನಾ ವೈರಸ್‌ನ ರೂಪಾಂತರಿ ಓಮಿಕ್ರಾನ್ ಕೊನೆಯ ರೂಪಾಂತರಿಯಲ್ಲ, ಮತ್ತಷ್ಟು ಬರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಲಸಿಕೆ ಪ್ರಾರಂಭವಾದಾಗಿನಿಂದ ಪ್ರಪಂಚದಾದ್ಯಂತ ನಿರ್ವಹಿಸಲಾದ 10 ಶತಕೋಟಿ ಡೋಸೇಜ್ಗಳ ಲಸಿಕೆಗಳಲ್ಲಿ ಇನ್ನೂ ಮೂರು ಬಿಲಿಯನ್ ಜನರು ಇನ್ನೂ ಮೊದಲ ಡೋಸ್ ಅನ್ನು ಪಡೆಯಬೇಕಾಗಿದೆ. ಅಂದರೆ ನಮ್ಮಲ್ಲಿ ಕೊರೊನಾ ಸೋಂಕಿಗೆ ಒಳಗಾಗುವ ಜನಸಂಖ್ಯೆ ಯಥೇಚ್ಛವಾಗಿದೆ ಮತ್ತು ಕೆಲವು ದೇಶಗಳು ಮುಂದೆ ಇದ್ದರೂ ಸಹ ನಾವು ಈ ಜಾಗತಿಕ ಸಮಸ್ಯೆಯನ್ನು ಜಾಗತಿಕ ಪರಿಹಾರಗಳೊಂದಿಗೆ ಪರಿಗಣಿಸಬೇಕಾಗಿದೆ.

ಲಸಿಕೆ ಹಾಕಿಸಿಕೊಳ್ಳದವರಿಗೆ ಕೋವಿಡ್‌ನಿಂದ ಹೆಚ್ಚು ಅಪಾಯ: WHOಲಸಿಕೆ ಹಾಕಿಸಿಕೊಳ್ಳದವರಿಗೆ ಕೋವಿಡ್‌ನಿಂದ ಹೆಚ್ಚು ಅಪಾಯ: WHO

ಓಮಿಕ್ರಾನ್ ಕೊನೆಯ ರೂಪಾಂತರ ಮತ್ತು ರೋಗಲಕ್ಷಣಗಳು ಸೌಮ್ಯವಾಗಿರುತ್ತವೆ ಎಂಬ ಊಹಾಪೋಗಳು ಎದ್ದಿವೆ. ಆದರೆ ಓಮಿಕ್ರಾನ್ ಸೌಮ್ಯ ಲಕ್ಷಣ ಹೊಂದಿಲ್ಲ. ಇದು ಡೆಲ್ಟಾಕ್ಕಿಂತ ಕಡಿಮೆ ತೀವ್ರವಾಗಿದೆ ಎಂದರು.

Omicron Will Not Be Last Covid-19 Variant, Future Mutations Could Be Adept At Surviving: WHO

ಭವಿಷ್ಯದ ರೂಪಾಂತರಗಳ ತೀವ್ರತೆ ಕಡಿಮೆಯಾಗಿರುತ್ತವೆ ಎಂದು ತಿಳಿದು ಬಂದಿದೆ. ಆದರೆ ಇನ್ನೂ ಖಚಿತವಾಗಿಲ್ಲ. ಓಮಿಕ್ರಾನ್ ಗಿಮತಲೂ ಹೆಚ್ಚು ವಿಕಸನಗೊಂಡಿರುವ ಹೆಚ್ಚಿನ ರೂಪಾಂತರಗಳು ಹೊರಹೊಮ್ಮುತ್ತವೆ ಎಂಬ ನಿರೀಕ್ಷೆಯಿದೆ. ಅವುಗಳ ತೀವ್ರತೆಯೂ ಕಡಿಮೆಯಾಗಿರುತ್ತದೆ ಎಂಬುದಕ್ಕೂ ನಿಖರತೆ ಇಲ್ಲ. ವಿಕಸನಗೊಂಡ ಗುಣಲಕ್ಷಣಗಳು ನಮ್ಮ ಲಸಿಕೆಗಳನ್ನು ನಿಷ್ಪರಿಣಾಮಕಾರಿಯಾಗಿಸಬಹುದು ಎಂದು ಹೇಳಿದರು.

ಪ್ರಪಂಚದಾದ್ಯಂತ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ವಿಶ್ವ ಆರೋಗ್ಯ ಸಂಸ್ಥೆಯು ಜನರು ಲಸಿಕೆಯನ್ನು ಪಡೆದುಕೊಳ್ಳಲು ಮತ್ತು ಮಾಸ್ಕ್ ಬಳಕೆ ಮುಂದುವರೆಸಲು ಹೇಳಿದೆ.

ಈ ವೈರಸ್ ಇನ್ನೂ ವಿಕಸನಗೊಳ್ಳುತ್ತಿದೆ, ಬದಲಾಗುತ್ತಿದೆ ಮತ್ತು ಅದಕ್ಕೆ ತಕ್ಕಂತೆ ನಾವು ಬದಲಾಗಬೇಕು ಮತ್ತು ನಮ್ಮನ್ನು ನಾವು ಸರಿದೂಗಿಸಿಕೊಳ್ಳಬೇಕಾಗಿದೆ. ನಾವು ಪ್ರಪಂಚದಾದ್ಯಂತ ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಪರಿವರ್ತನೆ ತರಲು ಪ್ರಯತ್ನಿಸಬೇಕು. ಇದು ಓಮಿಕ್ರಾನ್ ತರಂಗದಿಂದ ಕೊನೆಗೊಳ್ಳುವುದಿಲ್ಲ ಎಂದು ಹೇಳಿದರು.

ಈ ವೈರಸ್ ನಿಜವಾಗಿಯೂ ತೀವ್ರವಾಗಿ ಹರಡುತ್ತಿದೆ, ಹರಡುವಿಕೆಯನ್ನು ಕಡಿಮೆ ಮಾಡಲು ಅಗತ್ಯವಿರುವ ಕ್ರಮಗಳೊಂದಿಗೆ ಸಮರ್ಪಕವಾಗಿ ಮುನ್ನಡೆಯುವುದು ನಮ್ಮ ಮುಂದಿರುವ ಸವಾಲು. ನಾವು ಬಹಳ ಜಾಗರೂಕರಾಗಿರಲು ಜನರ ಬಳಿ ಮನವಿ ಮಾಡುತ್ತೇವೆ ಎಂದು ಹೇಳಿದರು.

ಲಸಿಕೆಯ ಹಾಕಿಸಿಕೊಳ್ಳದವರಿಗೆ ಕೊರೊನಾ ಸೋಂಕಿನಿಂದ ಹೆಚ್ಚು ಅಪಾಯವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಎಲ್ಲರಿಗೂ ಓಮಿಕ್ರಾನ್​ ಹರಡಿದೆ ಎಂಬುದು ನಿಜವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಕೆರ್ಕೋವ್​, ಓಮಿಕ್ರಾನ್​ ಡೆಲ್ಟಾಗಿಂತ ವೇಗವಾಗಿ ಹರಡುತ್ತಿರುವುದು ನಿಜ. ಆದರೆ ಇದು ಪ್ರತಿಯೊಬ್ಬರಿಗೂ ಹರಡುತ್ತದೆ ಎಂದು ಅರ್ಥವಲ್ಲ ಎಂದೂ ಅವರು ಇದೇ ವೇಳೆ, ಸ್ಪಷ್ಟಪಡಿಸಿದ್ದಾರೆ. ಓಮಿಕ್ರಾನ್​ ತೊಲಗಿಸಲು ಮತ್ತು ನಿಯಂತ್ರಿಸಲು ವಾಕ್ಸಿನೇಷನ್​​ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತೀವ್ರತರವಾದ ರೋಗ ಮತ್ತು ಸಾವಿನ ವಿರುದ್ಧ ವ್ಯಾಕ್ಸಿನೇಷನ್ ನಂಬಲಾಗದಷ್ಟು ರಕ್ಷಣಾತ್ಮಕವಾಗಿದೆ. ಆದರೆ, ಇದು ಸೋಂಕು ಹಾಗೂ ಸೋಂಕಿನ ವ್ಯಾಪಕ ಪ್ರಸರಣ ತಡೆಯುತ್ತದೆ. ಆದರೆ, ಸೋಂಕುಗಳು ಮತ್ತು ಪ್ರಸರಣ ತಡೆಗಟ್ಟುವಲ್ಲಿ ಇದು ಸಂಪೂರ್ಣ ಪರಿಪೂರ್ಣ ಎಂದು ಭಾವಿಸುವುದು ತಪ್ಪು. ಹೀಗಾಗಿಯೇ ಜನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕೆರ್ಕೋವ್ ಹೇಳಿದ್ದಾರೆ.

ಡಾ ಕೆರ್ಕೋವ್ ವಿಶ್ಲೇಷಣೆ ಪ್ರಕಾರ, ವಿಶ್ವದ ಕೊರೊನಾ ಪೀಡಿತರ ಸಂಖ್ಯೆ 34.8 ಕೋಟಿಗೆ ತಲುಪಿದೆ. ಸಾವುಗಳ ಸಂಖ್ಯೆ ಕೂಡಾ 55 ಲಕ್ಷದ ಗಡಿ ದಾಟಿದೆ. ಇನ್ನು 900 ಕೋಟಿ ಡೋಸ್​ಗಳನ್ನು ಈಗಾಗಲೇ ಜನರಿಗೆ ನೀಡಲಾಗಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಹೇಳಿದೆ ಎಂಬುದನ್ನು ಅವರು ಇದೇ ವೇಳೆ ಉಲ್ಲೇಖಿಸಿದ್ದಾರೆ.

ಇನ್ನೂ ಲಸಿಕೆ ಹಾಕಿಸಿಕೊಳ್ಳದ ಜನರು ಓಮಿಕ್ರಾನ್​ ಸೋಂಕಿಗೆ ಒಳಗಾದ ಬಳಿಕ ಕೋವಿಡ್​​ನಿಂದ ಹೆಚ್ಚಿನ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್​ ತಾಂತ್ರಿಕ ಮುಖ್ಯಸ್ಥ ಡಾ ಮರಿಯಾ ವ್ಯಾನ್​​ ಕೆರ್ಕೋವ್​​​, ಹೊಸ ರೂಪಾಂತರಿ ಒಮಿಕ್ರಾನ್​ ಅದೊಂದು ಸೌಮ್ಯ ಸ್ವಭಾವದ್ದು ಎಂದು ಪರಿಗಣಿಸುವುದು ಭಾರಿ ಅಪಾಯಕಾರಿ ಎಂದು ಎಚ್ಚರಿಕೆ ನೀಡಿದ್ದಾರೆ.

ಒಮಿಕ್ರಾನ್ ಸೋಂಕಿಗೆ ಒಳಗಾದ ಜನರು ರೋಗದ ಸಂಪೂರ್ಣ ಲಕ್ಷಣಗಳನ್ನು ಹೊಂದಿರುತ್ತಾರೆ, ಲಕ್ಷಣ ರಹಿತ ಸೋಂಕಿನಿಂದ ಹಿಡಿದು ತೀವ್ರತರವಾದ ಕಾಯಿಲೆ ಮತ್ತು ಸಾವಿನ ತನಕವೂ ಇರುತ್ತದೆ. ನಾವು ಕಲಿಯುತ್ತಿರುವ ವಿಷಯವೆಂದರೆ ಲಸಿಕೆ ಹಾಕಿಸಿಕೊಳ್ಳದ ಜನರು ಓಮಿಕ್ರಾನ್ ತಗುಲಿದ ಬಳಿಕ ಕೋವಿಡ್​ ಸಂಕಷ್ಟಕ್ಕೆ ಸಿಲುಕುತ್ತಾರೆ. ಮತ್ತು ಹೆಚ್ಚಿನವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಬಹುದು.

English summary
With the Omicron cases surging across the world, the World Health Organisation (WHO) has been cautioning people to get vaccinated and continue the use of masks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X