ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯ್ಯಯ್ಯೋ.. ಮಾತ್ರೆ ಎಂದು ತಪ್ಪಾಗಿ ಏರ್‌ಪಾಡ್ ನುಂಗಿಬಿಟ್ಟೆ!

|
Google Oneindia Kannada News

ಬೋಸ್ಟನ್‌, ನವೆಂಬರ್ 19: ನಮ್ಮ ಸುತ್ತಲ ಕೆಲ ಘಟನೆಗಳು ಆಕಸ್ಮಿಕವಾಗಿ ನಡೆಯುತ್ತಿರುತ್ತವೆ. ಕೆಲ ಬಾರಿ ಗೊತ್ತಿದ್ದೋ ಗೊತ್ತಿಲ್ದೆನೋ ನಡೆದ ಘಟನೆಗಳ ಬಗ್ಗೆ ಜನ ಮರುಕ ವ್ಯಕ್ತಪಡಿಸುವುದುಂಟು. ಇಲ್ಲೊಬ್ಬ ಮಹಿಳೆ ಇಂಥದ್ದೇ ತಪ್ಪು ಮಾಡಿ ನಂತರ ಪೇಚಾಡಿದ್ದಾಳೆ. ನೋವು ನಿವಾರಕ ಮಾತ್ರೆ ಎಂದು ತಪ್ಪಾಗಿ ಭಾವಿಸಿದ ಮಹಿಳೆ ಆಪಲ್ ಏರ್‌ಪಾಡ್‌ಗಳಲ್ಲಿ ಒಂದನ್ನು ಆಕಸ್ಮಿಕವಾಗಿ ನುಂಗಿದ್ದಾಳೆ. ಬಳಿಕ ತಾನು ತಪ್ಪು ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಯುಎಸ್‌ನ ಬೋಸ್ಟನ್‌ನಲ್ಲಿ ವಾಸಿಸುವ 27 ವರ್ಷದ ಕಾರ್ಲಿ ಬೆಲ್ಲರ್ ಟಿಕ್‌ಟಾಕ್ ವಿಡಿಯೊಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಇವರು ಆಕಸ್ಮಿಕವಾಗಿ ಏರ್‌ಪಾಡ್ ನುಗ್ಗಿದ್ದಾಳೆ. ಬಳಿಕ ತನ್ನ ತಪ್ಪನ್ನು ಅರಿತುಕೊಂಡು ಸ್ವತಃ ದುಃಖಿಸುವ ವಿಡಿಯೊವನ್ನು ಟಿಕ್‌ಟಾಕ್ನಲ್ಲಿ ಹಂಚಿಕೊಂಡಿದ್ದಾಳೆ. ವಿಡಿಯೊದಲ್ಲಿ ಕಾರ್ಲಿ, "ನಾನು ನನ್ನ ಮಾತ್ರೆ ಬದಲಿಗೆ ಏರ್‌ಪಾಡ್ ಅನ್ನು ತಿಂದಿದ್ದೇನೆ. ಅದನ್ನು ಹೊರಗೆ ತೆಗೆಯಲು ಪ್ರಯತ್ನಿಸಿ ಸುಸ್ತಾಗಿದ್ದೇನೆ. ಅದು ಹೊರಬರುತ್ತಿಲ್ಲ. ಹಾಗಾಗಿ ನನ್ನ ಮನಸ್ಸಸ್ಥಿತಿ ಹಾಳಾಗುತ್ತಿದೆ" ಎಂದು ಹೇಳಿದ್ದಾರೆ. ಫಾಲೋ-ಅಪ್ ವಿಡಿಯೊಗಳಲ್ಲಿ ಅವರು ಏರ್‌ಪಾಡ್ ಅನ್ನು ನೋವು ನಿವಾರಕ ಐಬುಪ್ರೊಫೇನ್ ಎಂದು ಹೇಗೆ ತಪ್ಪಾಗಿ ಗ್ರಹಿಸಿದರು ಎಂಬುದನ್ನು ವಿವರಿಸಿದ್ದಾರೆ.

"ನನ್ನ ಒಂದು ಕೈಯಲ್ಲಿ ಐಬುಪ್ರೊಫೇನ್ ಮಾತ್ರ ಇತ್ತು. ನನ್ನ ಕೈಯಲ್ಲಿ ಏರ್‌ಪಾಡ್ ಕೂಡ ಇತ್ತು. ಮತ್ತು ನಾನು ಐಬುಪ್ರೊಫೇನ್ ಮಾತ್ರೆ ತೆಗೆದುಕೊಳ್ಳಲು ಹೋದೆ. ಅದನ್ನು ತೆಗೆದುಕೊಂಡೆ ಕೂಡ. ಬಳಿಕ ನಾನು ನನ್ನ ಕೈಯಲ್ಲಿ ಐಬುಪ್ರೊಫೇನ್ ಮಾತ್ರ ನೋಡಿ ಗಾಬರಿಯಾದೆ. ನಾನು ಮಾತ್ರೆ ನುಗ್ಗಿರಲಿಲ್ಲ ಬದಲಿಗೆ ಏರ್‌ಪಾಡ್‌ನ್ನು ನುಂಗಿದ್ದೆ. ಆ ಕ್ಷಣ ನನಗೆ ಮಾನಸಿಕವಾದಂತೆ ಭಾಸವಾಯಿತು. 'ಗಾಬರಿಗೊಂಡು ತಕ್ಷಣ ಅದನ್ನು ಹೊರತೆಗೆಯಲು ಪ್ರಯತ್ನಿಸಿದೆ. ಆದರೆ ಅದು ಹೊರಬರಲಿಲ್ಲ" ಎಂದು ಕಾರ್ಲಿ ಹೇಳಿದ್ದಾರೆ. ನಂತರ ಅವಳು ಧ್ವನಿಯನ್ನು ರೆಕಾರ್ಡ್ ಮಾಡಲು ಪ್ರಯತ್ನಿಸಿದಳು. ಅವಳ ಹೊಟ್ಟೆಯಲ್ಲಿ ಏರ್‌ಪಾಡ್ ಸಂಪರ್ಕಗೊಂಡಿದೆ. ಅವಳ ಹೊಟ್ಟೆ ಒಳಗಿನಿಂದ ಧ್ವನಿ ರವಾನೆಯಾಗಿದೆ. ಜೊತೆಗೆ ಅವಳ ಧ್ವನಿ ರೆಕಾರ್ಡ್ ಆಗಿರುವುದು ಪ್ಲೈ ಮಾಡಿ ಕೇಳಿದಾಗ ಅದು ಸ್ವಷ್ಟವಾಗಿರಲಿಲ್ಲ ಎಂದು ಭಯದಿಂದ ಕಾರ್ಲಿ ಹೇಳಿದ್ದಾರೆ.

oh my god: mistakenly thought the pill and swallowed the Airpod

ಬಳಿಕ ಏರ್‌ಪಾಡ್ ತನ್ನ ಜೀರ್ಣಾಂಗವ್ಯೂಹದ ಮೂಲಕ ಹಾದುಹೋಗುವವರೆಗೆ ಅವಳು ಕಾದಿದ್ದಾಳೆ. ಜೊತೆಗೆ ಮರುದಿನ ಅದು ತನ್ನೊಳಗೆ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಎಕ್ಸ್-ರೇ ಮಾಡಿಸಿಕೊಂಡಳು. "ನಾನು ಅದನ್ನು ಪಾಸ್ ಮಾಡಿದ್ದೇನೆ ಎಂಬ ಖಾತರಿ ಇತ್ತು. ಆದರೆ ಅದು ಹಾದುಹೋಗಿದೆ ಎಂದು ನನಗೆ ತಿಳಿಯಲು ನಾನು ಎಕ್ಸ-ರೇ ಮಾಡಿಸಿಕೊಂಡೆ" ಎಂದು ಹೇಳಿದ್ದಾಳೆ. ಕಾರ್ಲಿಯ ಕಥೆಯನ್ನು ಕೇಳಿದ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಅವರನ್ನು ಅಪಹಾಸ್ಯ ಮಾಡಿದರೆ, ಇನ್ನೂ ಕೆಲವರು ಕಾಳಜಿ ತೋರಿದ್ದಾರೆ.

ಕಾರ್ಲಿ ಅವರ ವಿಡಿಯೋಕ್ಕೆ ಹಲವಾರು ಜನ ಕಳವಳ ವ್ಯಕ್ತಪಡಿಸಿದರೆ ಇನ್ನೂ ಹಲವರು ಹಾಸ್ಯಾಸ್ಪದ ಪ್ರತಿಕ್ರಿಯೇ ನೀಡಿದ್ದಾರೆ. ಕಾರ್ಲಿ ಅವರ ಕಥೆ ಕೇಳಿದ ನೆಟ್ಟಿಗ ಆಕೆ ತನ್ನೊಳಗೆ ಏರ್‌ಪಾಡ್‌ನೊಂದಿಗೆ ಸಂಗೀತವನ್ನು ನುಡಿಸಬೇಕು ಎಂದು ಸಲಹೆ ನೀಡಿದ್ದಾನೆ. ಇನ್ನೋಬ್ಬ ಪ್ರತಿಕ್ರಿಯಿಸಿ, "ನನ್ನ ಗಂಟಲು ನನಗೆ AirPod ಮಾತ್ರೆ ನುಂಗಲು ಅವಕಾಶ ನೀಡುವುದಿಲ್ಲ" ಎಂದಿದ್ದಾರೆ. ಇನ್ನೊಬ್ಬರು, "ನೀವು ಐಬುಪ್ರೊಫೇನ್ ಮತ್ತು ಏರ್‌ಪಾಡ್ ಅನ್ನು ಹೇಗೆ ಮಿಶ್ರಣ ಮಾಡುತ್ತೀರಿ?" ಎಂದು ಪ್ರಶ್ನೆ ಮಾಡಿದ್ದಾರೆ.

ಇದೇ ಫೆಬ್ರವರಿಯಲ್ಲಿ ಬ್ರಾಡ್‌ಫೋರ್ಡ್ ಗೌಥಿಯರ್ ಎಂಬ ವ್ಯಕ್ತಿ ತಾನು ಮಲಗಿದ್ದಾಗ ಆಕಸ್ಮಿಕವಾಗಿ ತನ್ನ ಏರ್‌ಪಾಡ್ ಅನ್ನು ನುಂಗಿ ಉಸಿರುಗಟ್ಟಿದಂತಾಗಿತ್ತು. ಬಳಿಕ ಆತ ನುಂಗಿದ್ದ ಏರ್‌ಪಾಡ್ ಅನ್ನು ಅನ್ನನಾಳದಿಂದ ಶಸ್ತ್ರಚಿಕಿತ್ಸೆಯಿಂದ ಹೊರತೆಗೆಯಲಾಯಿತು. ಶಸ್ತ್ರ ಚಿಕಿತ್ಸೆ ಬಳಿಕ ಆತನಿಗೆ ಏರ್‌ಪಾಡ್ ಹಸ್ತಾಂತರಿಸಲಾಗಿದೆ. ಆದರೆ ಕಾರ್ಲಿ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿಲ್ಲ.

English summary
A woman has shared how she accidentally swallowed one of her Apple AirPods after mistaking it for a painkiller.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X