ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ಗೆಲ್ಲುವ ಕುರಿತು ಅನುಮಾನವಿಲ್ಲ; ಜೋ ಬೈಡೆನ್

|
Google Oneindia Kannada News

ವಾಷ್ಟಿಂಗ್ಟನ್, ನವೆಂಬರ್ 06 : ವಿಶ್ವದ ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕೀಯ ಚುನಾವಣೆ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಜೋ ಬೈಡೆನ್ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಕೆಲವು ರಾಜ್ಯಗಳ ಮತ ಎಣಿಕೆ ಇನ್ನೂ ಬಾಕಿ ಉಳಿದಿದೆ.

ಜೋ ಬೈಡೆನ್ ಈ ಕುರಿತು ಮಾತನಾಡಿದ್ದು, "ಅಧ್ಯಕೀಯ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ತಾವು, ಕಮಲಾ ಹ್ಯಾರೀಸ್ ಗೆದ್ದಿರುವುದಾಗಿ ಘೋಷಣೆಯಾಗಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ" ಎಂದು ಹೇಳಿದರು.

ಟ್ರಂಪ್ ಮೊಕದ್ದಮೆ ವಜಾಗೊಳಿಸಿದ ಜಾರ್ಜಿಯಾ ನ್ಯಾಯಾಧೀಶರುಟ್ರಂಪ್ ಮೊಕದ್ದಮೆ ವಜಾಗೊಳಿಸಿದ ಜಾರ್ಜಿಯಾ ನ್ಯಾಯಾಧೀಶರು

"ಈಗ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಸೆನೆಟರ್‌ಗಳು ಮತ್ತು ತಾವು ಸಂತೋಷಗೊಂಡಿದ್ದೇವೆ. ಮತ ಎಣಿಕೆ ಮುಗಿಯುತ್ತಿದ್ದಂತೆ ನಾವು ಗೆದ್ದೆ ಬಗ್ಗೆ ಘೋಷಣೆಯಾಗಲಿದೆ. ಅಮೆರಿಕ ಜನರು ಯಾವುದೇ ಗೊಂದಲ ಮಾಡಿಕೊಳ್ಳದೆ ಕಾಯಿರಿ" ಎಂದು ಜೋ ಬೈಡೆನ್ ಕರೆ ನೀಡಿದರು.

ಅರಿಝೋನಾ: ತಗ್ಗಿದ ಬೈಡೆನ್-ಟ್ರಂಪ್ ಮತಗಳ ಅಂತರ ಅರಿಝೋನಾ: ತಗ್ಗಿದ ಬೈಡೆನ್-ಟ್ರಂಪ್ ಮತಗಳ ಅಂತರ

Joe Biden

"ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲಿಯೇ ಈ ಪ್ರಕ್ರಿಯೆ ಪೂರ್ಣಗೊಂಡು ಸಂಪೂರ್ಣ ಫಲಿತಾಂಶ ಹೊರಬರಲಿದೆ. ನಿಮ್ಮ ಎಲ್ಲಾ ತಾಳ್ಮೆಗೆ ಧನ್ಯವಾದಗಳು" ಎಂದು ಬೈಡೆನ್ ಹೇಳಿಕೆ ನೀಡಿದ್ದಾರೆ.

ಗೆದ್ದರೆ ಮೋದಿ ಜತೆ ವ್ಯವಹರಿಸಲಿರುವ ಮೂರನೇ ಅಧ್ಯಕ್ಷ ಎನಿಸಲಿದ್ದಾರೆ ಬೈಡೆನ್ ಗೆದ್ದರೆ ಮೋದಿ ಜತೆ ವ್ಯವಹರಿಸಲಿರುವ ಮೂರನೇ ಅಧ್ಯಕ್ಷ ಎನಿಸಲಿದ್ದಾರೆ ಬೈಡೆನ್

ಅಮೆರಿಕ ಅಧ್ಯಕೀಯ ಚುನಾವಣೆಯ ಮತ ಎಣಿಕೆ ಇನ್ನೂ ಪೂರ್ಣಗೊಂಡಿಲ್ಲ. ಕೆಲವು ರಾಜ್ಯಗಳ ಫಲಿತಾಂಶ ಶುಕ್ರವಾರ ಹೊರಬರಲಿದೆ. ರಾಷ್ಟ್ರೀಯ ವಾಹಿನಿಯೊಂದರ ಪ್ರಕಾರ ಬೈಡೆನ್ ಡೊಲಾಲ್ಡ್ ಟ್ರಂಪ್ ಅವರಿಗಿಂತ 40 ಪಾಯಿಂಟ್ ಲೀಡ್‌ ಅನ್ನು ಪಡೆದಿದ್ದಾರೆ.

ಅಧ್ಯಕ್ಷರಾಗುವವರು 538 ಪ್ರತಿನಿಧಿಗಳ ಪೈಕಿ 270 ಸದಸ್ಯರ ಬೆಂಬಲವನ್ನು ಪಡೆಯಬೇಕು. ಬೈಡೆನ್ ಪರವಾಗಿ ಪ್ರಸ್ತುತ 253 ಸದಸ್ಯರಿದ್ದಾರೆ. ಹಾಲಿ ಅಧ್ಯಕ್ಷ ಟ್ರಂಪ್ ಪರವಾಗಿ 213 ಸದಸ್ಯರಿದ್ದಾರೆ.

English summary
Democratic presidential nominee Joe Biden said that No doubt we will be declared winners when vote count ends. Counting process will come to end very soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X