ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಸೂದ್ ಒಬ್ಬ ಜಾಗತಿಕ ಉಗ್ರ ಅಮೆರಿಕದಿಂದ ಘೋಷಣೆ ಮಾತ್ರ ಬಾಕಿ

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 13: ಪುಲ್ವಾಮಾ ಉಗ್ರ ದಾಳಿ ರೂವಾರಿ ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ಗುರುತಿಸಲಾಗಿದ್ದು ಅಮೆರಿಕದ ಘೋಷಣೆ ಮಾತ್ರ ಬಾಕಿ ಇದೆ.

ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಸಂಸ್ಥಾಪಕ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಿ ಪಾಕಿಸ್ತಾನ ಮತ್ತು ಚೀನಕ್ಕೆ ಅಮೆರಿಕ ಶಾಕ್ ನೀಡಿದೆ. ಪುಲ್ವಾಮಾದಲ್ಲಿ ಫೆ.14ರಂದು ನಡೆದ ಆತ್ಮಾಹುತಿ ದಾಳಿಯಲ್ಲಿ ಭಾರತ ಸೇನೆಯ 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು.

ನೂರಾರು ಜೈಷ್ ಉಗ್ರರು ಹತ್ಯೆಯಾಗಿದ್ದಕ್ಕೆ ಸಿಕ್ಕಿದೆ ಬಲವಾದ ಸಾಕ್ಷ್ಯ!ನೂರಾರು ಜೈಷ್ ಉಗ್ರರು ಹತ್ಯೆಯಾಗಿದ್ದಕ್ಕೆ ಸಿಕ್ಕಿದೆ ಬಲವಾದ ಸಾಕ್ಷ್ಯ!

ಮಸೂದ್ ಜಾಗತಿಕ ಭಯೋತ್ಪಾದಕ ಎಂಬ ಹಣಪಟ್ಟಿಗೆ ಅರ್ಹನಾಗಿದ್ದು, ಪ್ರಾದೇಶಿಕ ಸ್ಥಿರತೆ ಹಾಗೂ ಶಾಂತಿಗೆ ಆತ ಅಪಾಯಕಾರಿಯಾಗಿದ್ದಾನೆ ಎಂದು ಅಮೆರಿಕ ಹೇಳಿದೆ.

Masood Azhar A Global Terrorist, Says US

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಪ್ರಸ್ತಾವದ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಬೇಕಿದೆ ಎಂದು ಹೇಳಿದೆ.

ಆದರೆ ಚೀನಾದ ತಡೆಯಿಂದಾಗಿ ಅಜರ್‌ಗೆ ಜಾಗತಿಕ ಉಗ್ರನೆಂಬ ಹಣೆಪಟ್ಟಿ ಘೋಷಣೆ ಸಾಧ್ಯವಾಗಿಲ್ಲ. ಭದ್ರತಾ ಮಂಡಳಿಯ ಐದು ವೀಟೋ ರಾಷ್ಟ್ರಗಳ ಪೈಕಿ ಚೀನಾವೂ ಒಂದು. ಪ್ರತಿಬಾರಿ ಅಜರ್‌ ವಿರುದ್ಧ ಪ್ರಸ್ತಾವ ಮಂಡನೆಯಾದಾಗೆಲ್ಲ ಚೀನಾ ವೀಟೋ ಚಲಾಯಿಸಿ ನಿರ್ಣಯವನ್ನು ಹಾಳುಗೆಡವುತ್ತಿದೆ.

3-4 ದಿನದಲ್ಲಿ ಪುಲ್ಮಾಮಾ ಶೈಲಿಯ ಮತ್ತೊಂದು ದಾಳಿಗೆ ಸಂಚು? ಗುಪ್ತಚರ ಮಾಹಿತಿ3-4 ದಿನದಲ್ಲಿ ಪುಲ್ಮಾಮಾ ಶೈಲಿಯ ಮತ್ತೊಂದು ದಾಳಿಗೆ ಸಂಚು? ಗುಪ್ತಚರ ಮಾಹಿತಿ

ಪುಲ್ವಾಮಾ ದಾಳಿ ಬಳಿಕ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಮೂರು ಖಾಯಂ ಸದಸ್ಯರಾದ ಅಮೆರಿಕ, ಬ್ರಿಟನ್‌ ಮತ್ತು ಫ್ರಾನ್ಸ್‌ ಅಜರ್‌ ನನ್ನು ಜಾಗತಿಕ ಉಗ್ರನೆಂದು ಘೋಷಿಸಬೇಕೆಂಬ ಪ್ರಸ್ತಾಪವನ್ನು ಮತ್ತೊಮ್ಮೆ ಮುಂದಿಟ್ಟಿವೆ.

English summary
Masood Azhar meets the criteria to be designated as a global terrorist and not doing so is against regional stability and peace, the US said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X