• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುಎಸ್‌ನಲ್ಲಿ ದೀಪಾವಳಿ ಫೆಡರಲ್‌ ರಜೆ ಘೋಷಣೆಗೆ ಮಸೂದೆ ಮಂಡಿಸಲು ಶಾಸಕಿ ಸಜ್ಜು

|
Google Oneindia Kannada News

ವಾಷಿಂಗ್ಟನ್‌, ನವೆಂಬರ್‌ 02: ದೀಪಾವಳಿಯಂದು ಅಮೆರಿಕದಲ್ಲಿ ಫೆಡರಲ್‌ ರಜೆಯನ್ನು ಘೋಷಣೆ ಮಾಡಬೇಕೆಂಬ ಉದ್ದೇಶದಿಂದಾಗಿ ಯುಎಸ್‌ನ ಸಂಸದೀಯ ಸದಸ್ಯ ಕ್ಯಾರೊಲಿನ್‌ ಮಲೋನಿ ಯುಎಸ್‌ ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡನೆ ಮಾಡಲು ಸಿದ್ದರಾಗಿದ್ದಾರೆ.

ಈ ಮಸೂದೆಯನ್ನು ಅಮೆರಿಕ ಸಂಸತ್ತಿನಲ್ಲಿ ಕ್ಯಾರೊಲಿನ್‌ ಮಲೋನಿ ಮಂಡನೆ ಮಾಡಿದ ಬಳಿಕ ಈ ಮಸೂದೆಯು ಸಂಸತ್ತಿನ ಅನುಮೋದನೆಯನ್ನು ಪಡೆದರೆ, ಯುಎಸ್‌ನಲ್ಲಿ ದೀಪಾವಳಿಯನ್ನು ಆಚರಿಸುವ ಲಕ್ಷಾಂತರ ಭಾರತೀಯ ಅಮೆರಿಕನ್ನರ ಸಾಂಸ್ಕೃತಿಕ ಪರಂಪರೆಗೆ ಯುಎಸ್‌ ನೀಡುವ ಗೌರವದ ಪ್ರತೀಕವಾಗಲಿದೆ. ಅನುಮೋದನೆ ದೊರೆತರೆ ಯುಎಸ್‌ನ ಭಾರತೀಯರು ರಜಾ ದಿನದಂದು ದೀಪಾವಳಿಯನ್ನು ನಡೆಸಲು ಅವಕಾಶ ನೀಡಿದಂತೆ ಆಗುತ್ತದೆ.

ಬಂದಿದೆ ದೀಪಾವಳಿ: ರಂಗೋಲಿಯ ಅಲಂಕಾರಕ್ಕೆ ಇಲ್ಲಿದೆ ಟಿಪ್ಸ್‌ಬಂದಿದೆ ದೀಪಾವಳಿ: ರಂಗೋಲಿಯ ಅಲಂಕಾರಕ್ಕೆ ಇಲ್ಲಿದೆ ಟಿಪ್ಸ್‌

ಬುಧವಾರ ನ್ಯೂಯಾರ್ಕ್‌ನ ಡೆಮಾಕ್ರೆಟಿ‌ಕ್‌ನ ಸಂಸಂದೀಯ ಸದಸ್ಯ ಕ್ಯಾರೊಲಿನ್‌ ಮಲೋನಿ ಜೊತೆಗೆ ಈ ಮಸೂದೆಯ ಮಂಡನೆಗೆ ಸಂಸತ್ತಿನ ರೋ ಖನ್ನಾ, ರಾಜಾ ಕೃಷ್ಣಮೂರ್ತಿ ಮತ್ತು ಇತರ ವಕೀಲರು ಸೇರಿದಂತೆ ಹಲವಾರು ಭಾರತೀಯರು ಜೊತೆಯಾಗಲಿದ್ದಾರೆ.

ಭಾರತೀಯ ಅಮೇರಿಕನ್ ಸಮುದಾಯದ ಸದಸ್ಯರನ್ನು ಪ್ರತಿನಿಧಿಸುವ, ಇಂಡಿಯಾಸ್ಪೊರಾದ ಕಾರ್ಯನಿರ್ವಾಹಕ ನಿರ್ದೇಶಕ ಸಂಜೀವ್‌ ಜೋಶಿಪುರ, ಕೂಡಾ ಜೊತೆಯಾಗಲಿದ್ದಾರೆ. ದೇಶದ ವಕೀಲರೊಂದಿಗೆ ಕಾರ್ಯ ನಿರ್ವಹಣೆ ಮಾಡಿ, ಚರ್ಚೆ ಸಭೆ ನಡೆಸಿ ಈ ಮಸೂದೆಯನ್ನು ಯುಎಸ್‌ನ ಸಂಸದೀಯ ಸದಸ್ಯ ಕ್ಯಾರೊಲಿನ್‌ ಮಲೋನಿ ಸಿದ್ದಪಡಿಸಿದ್ದಾರೆ. ದೀಪಾವಳಿಯ ಸಂದರ್ಭದಲ್ಲಿ ರಜೆಯನ್ನು ಘೋಷಣೆ ಮಾಡಬೇಕು ಎಂದು ಈ ಮಸೂದೆಯಲ್ಲಿ ಉಲ್ಲೇಖ ಮಾಡಲಾಗಿದೆ. "ಈ ಸಣ್ಣ ಕ್ರಮದಿಂದ ಲಕ್ಷಾಂತರ ಮಂದಿಗೆ ಒಂದು ಉತ್ತಮ ಅರ್ಥವನ್ನು ನೀಡಲಿದೆ," ಎಂದು ಉಲ್ಲೇಖ ಮಾಡಿದ್ದಾರೆ.

ದೀಪಾವಳಿ; ಜಾನಪದ ಲೋಕದ ಮಣ್ಣಿನ ಹಣತೆಗೆ ಬಹು ಬೇಡಿಕೆದೀಪಾವಳಿ; ಜಾನಪದ ಲೋಕದ ಮಣ್ಣಿನ ಹಣತೆಗೆ ಬಹು ಬೇಡಿಕೆ

ಇನ್ನು ಈ ಹಿಂದೆ ಅಮೆರಿಕದಲ್ಲಿ ದೀಪಾವಳಿ ಆಚರಣೆಯ ಬಗ್ಗೆ ಮಾತನಾಡಿದ ಯುಎಸ್‌ ಶಾಸಕಿ, "ಹಿಂದೂ-ಅಮೆರಿಕನ್ನರ ಸಂಸ್ಕೃತಿಯು ಅಮೆರಿಕ ಹಾಗೂ ವಿಶ್ವವನ್ನು ಶ್ರೀಮಂತಗೊಳಿಸಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಶಾಸಕರು, ಆಡಳಿತದ ಸದಸ್ಯರು, ಸಮುದಾಯದ ಪ್ರಮುಖ ನಾಯಕರು ದೇಶದ ಬೇರೆ ಬೇರೆ ಕಡೆಗಳಿಂದ ಭಾಗಿಯಾಗುತ್ತಾರೆ. ಈ ಬಾರಿ ಕೊರೊನಾ ವೈರಸ್‌ ಸೋಂಕು ಹಿನ್ನೆಲೆಯಿಂದಾಗಿ ಕಾರ್ಯಕ್ರಮಕ್ಕೆ ಕೆಲವು ನಿರ್ಬಂಧಗಳು ಇದೆ, ಆದರೆ ಈ ಕಾರ್ಯಕ್ರಮವು ನೇರ ಪ್ರಸಾರವಾಗಲಿದೆ," ಎಂದು ಹೇಳಿದ್ದಾರೆ.

ಐಕಾನಿಕ್ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ದೀಪಾವಳಿ

ಇನ್ನು ಈ ಬಾರಿ ನ್ಯೂಯಾರ್ಕ್ ನಗರದ ಐಕಾನಿಕ್ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ 'ಆಲ್ ಅಮೇರಿಕನ್ ದೀಪಾವಳಿ' ಕಾರ್ಯಕ್ರಮ ನಡೆಸುವ ಮೂಲಕ ದೀಪಾವಳಿಯನ್ನು ಆಚರಣೆ ಮಾಡಲು ನ್ಯೂಜೆರ್ಸಿ ಮೂಲದ ಕ್ರಿಪ್ಟೋ ಎಕ್ಸ್‌ಚೇಂಜ್ ಕಂಪನಿ ಕ್ರಾಸ್‌ಟವರ್‌ ಸಂಸ್ಥೆಯು ಸೌತ್ ಏಷ್ಯನ್ ಎಂಗೇಜ್‌ಮೆಂಟ್ ಫೋರಂನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕ್ರಾಸ್‌ಟವರ್‌ನ ಸಹ-ಸಂಸ್ಥಾಪಕ ಆದ ಕಪಿಲ್ ರತಿ, "9/11 ದಾಳಿಯ 20 ನೇ ವಾರ್ಷಿಕೋತ್ಸವದ ವರ್ಷದಲ್ಲಿ ನ್ಯೂಯಾರ್ಕ್ ಸಿಟಿ ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆಯನ್ನು ಗೌರವಿಸಲು ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮೂರು ದಿನಗಳ ದೀಪಾವಳಿ ಆಚರಣೆಯು ನವೆಂಬರ್ 2 ರಿಂದ ನವೆಂಬರ್ 4 ರವರೆಗೆ ವರ್ಲ್ಡ್ ಟ್ರೇಡ್ ಸೆಂಟರ್‌ನ ವೇದಿಕೆಯ ಮೇಲೆ ನಡೆಯಲಿದೆ. ಈ ಸಂದರ್ಭದಲ್ಲಿ ಅದ್ಭುತವಾದ ಡಿಜಿಟಲ್ ಮ್ಯೂರಲ್ ನಡೆಯಲಿದೆ. ಹಡ್ಸನ್ ನದಿಯ ಮೇಲೆ ಪಟಾಕಿಗಳನ್ನು ಸಿಡಿಸುವ ಪ್ರದರ್ಶನ ನಡೆಯಲಿದೆ.

ದೀಪಾವಳಿ 2021: ಈ 5 ವಸ್ತುಗಳು ಲಕ್ಷ್ಮಿಯ ಆಗಮನದ ಸಂಕೇತದೀಪಾವಳಿ 2021: ಈ 5 ವಸ್ತುಗಳು ಲಕ್ಷ್ಮಿಯ ಆಗಮನದ ಸಂಕೇತ

"ಕ್ರಾಸ್‌ಟವರ್‌ ಮೊಟ್ಟಮೊದಲ ಬಾರಿಗೆ ಎಲ್ಲಾ ಅಮೇರಿಕನ್ ದೀಪಾವಳಿ ಆಚರಣೆಯ ಪಾಲುದಾರರಾಗಲು ಅವಕಾಶ ಹೊಂದಿದೆ. ಅಮೆರಿಕದಲ್ಲಿ 2.7 ಮಿಲಿಯನ್‌ ಭಾರತೀಯರು ಇದ್ದಾರೆ. ಈ ಕಾರ್ಯಕ್ರಮವು ಅಮೇರಿಕನ್ ಸಂಪ್ರದಾಯವನ್ನು ಭಾರತೀಯ ಹಬ್ಬದೊಂದಿಗೆ ನಾವು ಕೂಡಿಸುತ್ತೇವೆ. ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಯುಎಸ್ ಮತ್ತು ಭಾರತವನ್ನು ಒಟ್ಟುಗೂಡಿಸಿ ದೊಡ್ಡ ಹಬ್ಬಗಳಲ್ಲಿ ಒಂದಾದ ದೀಪಾವಳಿ ಆಚರಣೆಗೆ ಅನುವು ಮಾಡಿಕೊಡಲಾಗುತ್ತದೆ, " ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕ್ರಾಸ್‌ಟವರ್‌ನ ಸಹ-ಸಂಸ್ಥಾಪಕ ಆದ ಕಪಿಲ್ ರತಿ ಹೇಳಿದರು.

(ಒನ್‌ಇಂಡಿಯಾ ಸುದ್ದಿ)

English summary
Lawmaker to introduce bill to make Diwali federal holiday in US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X