ಇಸ್ಲಾಮಿಕ್ ಸ್ಟೇಟ್ ಸಂಘಟನೆಯಲ್ಲಿದ್ದಾರೆ 66 ಮಂದಿ ಭಾರತೀಯರು: ಅಮೆರಿಕ

ವಾಷಿಂಗ್ಟನ್, ಡಿಸೆಂಬರ್ 18: ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯಲ್ಲಿ 66 ಮಂದಿ ಭಾರತೀಯರಿದ್ದಾರೆ ಎಂದು ಅಮೆರಿಕದ ಸರ್ಕಾರಿ ಇಲಾಖೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ನವೆಂಬರ್ ತಿಂಗಳವರೆಗೆ ಗುರುತಿಸಲ್ಪಟ್ಟ 66 ಭಾರತೀಯ ಮೂಲದ ಮಂದಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯನ್ನು ಸೇರಿದ್ದಾರೆ ಎಂದು ವಿದೇಶದಿಂದ ಭಯೋತ್ಪಾದಕ ಫೈಟರ್ (ಎಫ್ ಟಿಎಫ್) ಗಳನ್ನು ಭಾರತಕ್ಕೆ 2020 ರಲ್ಲಿ ಕಳಿಸಲಾಗಿಲ್ಲ ಎಂದು ಅಮೆರಿಕ ತನ್ನ ವರದಿಯಲ್ಲಿ ತಿಳಿಸಿದೆ.

ಭಯೋತ್ಪಾದಕ ಶಕ್ತಿಗಳನ್ನು ಸಕ್ರಿಯಾವಾಗಿ ಪತ್ತೆ ಮಾಡಿ ನಾಶ ಮಾಡುತ್ತಿರುವ ಎನ್ಐಎ ಸೇರಿದಂತೆ ಭಾರತದ ಭಯೋತ್ಪಾದನಾ ನಿಗ್ರಹ ಪಡೆಗಳ ಶ್ರಮವನ್ನು ಅಮೆರಿಕ ಮೆಚ್ಚುತ್ತದೆ ಎಂದು ವರದಿಯಲ್ಲಿ ತಿಳಿಸಿದೆ.

Terrorism

ವಿವಿಧ ದೇಶಗಳಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದಂತೆ 2020 ನೇ ಸಾಲಿನ ವರದಿಗಳನ್ನು ಅಮೆರಿಕದ ರಾಜ್ಯ ಕಾರ್ಯದರ್ಶಿ ಆಂಟೋನಿ ಬ್ಲಿನ್ಕೆನ್ ಪ್ರಕಟಿಸಿದ್ದು, UNSCR 2309 ಅನ್ನು ಕಾರ್ಯಗತಗೊಳಿಸುವುದಕ್ಕೆ ಹಾಗೂ ವಿಮಾನ ನಿಲ್ದಾಣದ ಸ್ಥಳಗಳಲ್ಲಿ ಕಾರ್ಗೋ ಸ್ಕ್ರೀನಿಂಗ್‌ಗಾಗಿ ಡ್ಯುಯಲ್-ಸ್ಕ್ರೀನ್ ಎಕ್ಸ್-ರೇ ಆದೇಶದ ಅನುಸರಣೆಯನ್ನು ಜಾರಿಗೊಳಿಸುವುದಕ್ಕೆ ಭಾರತದೊಂದಿಗೆ ಸಹಯೋಗ ನೀಡುತ್ತಿದೆ ಎಂದು ಹೇಳಿದ್ದಾರೆ.

ಯುಎಸ್​ ಸ್ಟೇಟ್​ ಡಿಪಾರ್ಟ್ಮೆಂಟ್​​​ 'ಭಯೋತ್ಪಾದನೆ 2020' ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಆ ವರದಿಯಲ್ಲಿ ಪಾಕಿಸ್ತಾನವು ಭಯೋತ್ಪಾದಕರಿಗೆ ಆರ್ಥಿಕ ಬೆಂಬಲ ನೀಡುತ್ತಿದೆ ಎನ್ನುವ ವಿಷಯ ಬಹಿರಂಗಗೊಂಡಿದೆ.

ಜೈಷ್-ಎ-ಮೊಹಮ್ಮದ್ (ಜೆಇಎಂ) ಸಂಸ್ಥಾಪಕ ಮಸೂದ್ ಅಜರ್ ಮತ್ತು 2008ರ ಮುಂಬೈ ದಾಳಿಯ ಮಾಸ್ಟರ್​ ಮೈಂಡ್ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಾಜಿದ್ ಮಿರ್‌ನಂತಹ ಭಯೋತ್ಪಾದಕ ನಾಯಕರನ್ನು ವಿಚಾರಣೆಗೆ ಒಳಪಡಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದೆ.

ಅಲ್ಲದೆ, ಅಫ್ಘಾನಿಸ್ತಾನವನ್ನು ಗುರಿಯಾಗಿಸಿಕೊಂಡ ಗುಂಪುಗಳು, ಆಫ್ಘನ್ ತಾಲಿಬಾನ್ ಮತ್ತು ಅಂಗಸಂಸ್ಥೆ ಹಕ್ಕಾನಿ ನೆಟ್‌ವರ್ಕ್ ಹಾಗೆಯೇ ಭಾರತವನ್ನು ಗುರಿಯಾಗಿಸಿವೆ. ಎಲ್‌ಇಟಿ ಮತ್ತು ಅದರ ಅಂಗಸಂಸ್ಥೆ ಫ್ರಂಟ್​​ ಆರ್ಗನೈಜೇಷನ್​​ ಹಾಗೂ ಜೆಎಂ ಪಾಕಿಸ್ತಾನದ ಭೂಪ್ರದೇಶದಿಂದ ಕಾರ್ಯಾಚರಣೆಯನ್ನು ಮುಂದುವರೆಸಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಅದರಲ್ಲಿ ವಿಷಕಾರಿ ರಾಷ್ಟ್ರ ಪಾಕಿಸ್ತಾನ ಭಯೋತ್ಪಾದನೆಯಲ್ಲಿ ತನ್ನ ಸೀಮಿತ ಪ್ರಗತಿ ಸಾಧಿಸಿದೆ ಎಂದು ತಿಳಿಸಿದೆ. ಪಾಕಿಸ್ತಾನವು 2020ರಲ್ಲಿ ತನ್ನ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಕ್ರಿಯಾ ಯೋಜನೆಯನ್ನು ಪೂರ್ಣಗೊಳಿಸುವ ಮೂಲಕ ಹೆಚ್ಚುವರಿ ಪ್ರಗತಿಯನ್ನು ಸಾಧಿಸಿದೆ.

ಆದರೆ, ಎಫ್‌ಎಟಿಎಫ್ 'ಗ್ರೇ ಲಿಸ್ಟ್' ಅನ್ನು ಪೂರ್ಣಗೊಳಿಸಲಿಲ್ಲ. ಸರ್ಕಾರ ಮತ್ತು ಮಿಲಿಟರಿ ಪಡೆ ಭಯೋತ್ಪಾದಕತೆಗೆ ಸಹಕಾರ ನೀಡುವ ರೀತಿ ವರ್ತಿಸುತ್ತಿದೆ. ಭಯೋತ್ಪಾದನೆ ಅಳಿವಿಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ತಿಳಿಸಿದೆ.

ಆಫ್ಘಾನಿಸ್ತಾನವನ್ನು ಗುರಿಯಾಗಿಸಿಕೊಂಡ ಗುಂಪುಗಳು, ಆಫ್ಘನ್ ತಾಲಿಬಾನ್ ಮತ್ತು ಅಂಗಸಂಸ್ಥೆ ಹಕ್ಕಾನಿ ನೆಟ್‌ವರ್ಕ್ ಹಾಗೆಯೇ ಭಾರತವನ್ನು ಗುರಿಯಾಗಿಸಿವೆ. ಎಲ್‌ಇಟಿ ಮತ್ತು ಅದರ ಅಂಗಸಂಸ್ಥೆ ಫ್ರಂಟ್​​ ಆರ್ಗನೈಜೇಷನ್​​ ಹಾಗೂ ಜೆಎಂ ಪಾಕಿಸ್ತಾನದ ಭೂಪ್ರದೇಶದಿಂದ ಕಾರ್ಯಾಚರಣೆಯನ್ನು ಮುಂದುವರೆಸಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

2018ರ ಜೂನ್​ನಲ್ಲಿ ಎಫ್​ಎಟಿಎಫ್​ನ ಗ್ರೇ ಲಿಸ್ಟ್​ಗೆ ಪಾಕಿಸ್ತಾನವನ್ನು ಮೂರನೇ ಬಾರಿಗೆ ಸೇರಿಸಲಾಯಿತು. ಹಣಕಾಸು ದುರ್ಬಳಕೆ ಮತ್ತು ಭಯೋತ್ಪಾದನೆಗೆ ಹಣದ ಸಹಾಯ ಮಾಡುವ ಕಾರ್ಯಗಳನ್ನ ನಿಲ್ಲಿಸುವ ನಿಟ್ಟಿನಲ್ಲಿ ಪಾಕಿಸ್ತಾನಕ್ಕೆ 27 ಅಂಶಗಳ ಕಾರ್ಯ ಯೋಜನೆಯನ್ನ ನೀಡಿತು.

ಆ ಎಲ್ಲಾ 27 ಅಂಶಗಳನ್ನೂ ಜಾರಿಗೆ ತರುವಂತೆ 2019ರ ಅಂತ್ಯದವರೆಗೂ ಗಡುವು ನೀಡಿತು. ಆದರೆ, ಈ ವರ್ಷದ ಆರಂಭದಲ್ಲಿ ಕೋವಿಡ್ ಸಾಂಕ್ರಾಮಿಕ ಸಂಕದಷ್ಟ ಉದ್ಭವಿಸಿದ ಹಿನ್ನೆಲೆಯಲ್ಲಿ ಗಡುವನ್ನು ವಿಸ್ತರಿಸಲಾಗಿತ್ತು.

ಈಗ ಈ ಕಾರ್ಯಯೋಜನೆಯನ್ನು ಎಷ್ಟರ ಮಟ್ಟಿಗೆ ಜಾರಿಗೊಳಿಸಲಾಗಿದೆ ಎಂದು ಇವತ್ತಿನ ಎಫ್​ಎಟಿಎಫ್ ಸಭೆಯಲ್ಲಿ ವಿಮರ್ಶಿಸಲಾಯಿತು. 21 ಅಂಶಗಳು ಮಾತ್ರ ಜಾರಿಯಾಗಿವೆ. ಉಳಿದ 6 ಅಂಶಗಳ ಪಾಲನೆಯಾಗಿಲ್ಲ. ಹೀಗಾಗಿ, ಗ್ರೇ ಪಟ್ಟಿಯಲ್ಲಿ ಪಾಕ್ ಹೆಸರು ಮುಂದುವರಿಯುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+