ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ, ಹವಾಮಾನ ವೈಪರೀತ್ಯ ವಿರುದ್ಧ ಭಾರತ-ಅಮೆರಿಕ ಜಂಟಿ ಸಮರ

|
Google Oneindia Kannada News

ವಾಷಿಂಗ್ಟನ್, ಜನವರಿ 11:ಕೊರೊನಾ, ಹವಾಮಾನ ವೈಪರೀತ್ಯದ ವಿರುದ್ಧ ಭಾರತ-ಅಮೆರಿಕ ಜಂಟಿ ಸಮರ ಸಾರಲು ಸಿದ್ಧವಾಗಿದೆ.

ಈ ವರ್ಷ ಭಾರತ ಮತ್ತು ಅಮೆರಿಕ ಕೊರೊನಾ ಸಾಂಕ್ರಾಮಿಕ, ಹವಾಮಾನ ಬದಲಾವಣೆ ವಿರುದ್ಧದ ಹೋರಾಟ, ಕ್ವಾಡ್​ ವಿಸ್ತರಣೆ, ಹೊಸ ತಂತ್ರಜ್ಞಾನಗಳ ಅಳವಡಿಕೆಯಲ್ಲಿ ಪಾಲುದಾರರಾಗಲಿದ್ದೇವೆ ಎಂದು ಶ್ವೇತಭವನ ಪತ್ರಿಕಾ ಕಾರ್ಯದರ್ಶಿ ಜೆನ್​ ಸಾಕಿ ತಿಳಿಸಿದ್ದಾರೆ.

ಹವಾಮಾನ ವೈಪರೀತ್ಯದಿಂದ ಭಾರತ, ಚೀನಾ ಬಹಳಷ್ಟು ಬಳಲಿದೆ: ವಿಶ್ವಸಂಸ್ಥೆ ವರದಿಹವಾಮಾನ ವೈಪರೀತ್ಯದಿಂದ ಭಾರತ, ಚೀನಾ ಬಹಳಷ್ಟು ಬಳಲಿದೆ: ವಿಶ್ವಸಂಸ್ಥೆ ವರದಿ

ಭಾರತ - ಚೀನಾ ಗಡಿ ವಿವಾದದಲ್ಲಿ ಭಾರತದ ಪರ ನಿಲ್ಲುವುದಾಗಿ ತಿಳಿಸಿರುವ ಅಮೆರಿಕ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಬಗ್ಗೆಯೂ ಮಾತನಾಡಿದೆ. ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಟ ಉಭಯ ರಾಷ್ಟ್ರಗಳ ಮೊದಲ ಆದ್ಯತೆಯಾಗಿರಲಿದೆ. ಇದಲ್ಲದೇ, ಕ್ವಾಡ್​(ಭದ್ರತೆ) ಮೂಲಕ ಪರಸ್ಪರ ಸಹಕಾರ, ಹವಾಮಾನ ಬದಲಾವಣೆ ವಿರುದ್ಧ ಹೋರಾಟ, ವ್ಯಾಪಾರ, ವಿದೇಶಾಂಗ ನೀತಿಗಳ ವಿಸ್ತರಣೆಯಲ್ಲಿ ಉನ್ನತ ಮಟ್ಟದ ಬದಲಾವಣೆಗೆ ಎರಡೂ ರಾಷ್ಟ್ರಗಳು ಮುಂದಾಗಲಿವೆ ಎಂದು ಜೆನ್​ ಸಾಕಿ ಹೇಳಿದರು.

India, US Expected To Move Forward On Set Of Initiatives In 2022

ಹೂಡಿಕೆ, ವ್ಯಾಪಾರ - ವಹಿವಾಟಿನಲ್ಲಿ ಈ ವರ್ಷ ಮಹತ್ತರ ಬದಲಾವಣೆ ಕಾಣಲಿದೆ. ಸೈಬರ್​ ಮತ್ತು ಹೊಸ, ಉದಯೋನ್ಮುಖ ತಂತ್ರಜ್ಞಾನಗಳ ಅಳವಡಿಕೆಯೂ ಈ ವರ್ಷದ ಮಾರ್ಗಸೂಚಿಗಳಲ್ಲಿ ಇದೆ ಎಂದು ಶ್ವೇತಭವನ ತಿಳಿಸಿದೆ.

ಕಳೆದ ವರ್ಷದ ಸೆಪ್ಟೆಂಬರ್​ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್​, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಸಭೆ ಉಭಯ ದೇಶಗಳ ಸಂಬಂಧ ಸುಧಾರಣೆಗೆ ಹೊಸ ಅಧ್ಯಾಯ ಬರೆದಿತ್ತು.

ಅದರಂತೆ ಎರಡೂ ರಾಷ್ಟ್ರಗಳು ವಿದೇಶಾಂಗ ಮತ್ತು ಅಂತಾರಾಷ್ಟ್ರೀಯ ವಿಚಾರಗಳಲ್ಲಿ ಪರಸ್ಪರ ಸಹಕರಿಸಲಿವೆ ಎಂದು ಅವರು ತಿಳಿಸಿದ್ದಾರೆ.
ಹವಾಮಾನ ವೈಪರೀತ್ಯದಿಂದ ಭಾರತ ದೇಶವು ಬಹಳಷ್ಟು ಬಳಲಿದೆ. ಹವಾಮಾನ ವೈಪರೀತ್ಯಗಳಾದ ಚಂಡಮಾರುತ, ನೆರೆ, ಕ್ಷಾಮದಿಂದಾಗಿ ಈ ವರ್ಷ ಭಾರತಕ್ಕೆ ಅಂದಾಜು 87 ಮಿಲಿಯನ್‌ ಡಾಲರ್‌ ನಷ್ಟ ಉಂಟಾಗಿದೆ ಎಂದು ವಿಶ್ವ ಸಂಸ್ಥೆಯ ಹವಾಮಾನ ಸಂಸ್ಥೆಯು ಹೇಳಿದೆ.

5 ತಿಂಗಳ ಮಗುವಿನ ತುರ್ತು ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯೂಎಂಒ) 2020 ರ ಏಷ್ಯಾದ ಹವಾಮಾನದ ಸ್ಥಿತಿಯ ಬಗ್ಗೆ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಈ ವರದಿಯು "ಹವಾಮಾನ ವೈಪರೀತ್ಯ ಹಾಗೂ ಹವಾಮಾನ ಬದಲಾವಣೆಯು 2020 ರಲ್ಲಿ ಏಷ್ಯಾದಲ್ಲಿ ಭಾರೀ ಅವಘಡಗಳಿಗೆ ಕಾರಣವಾಗಿದೆ.

ಹಲವಾರು ಜೀವಗಳನ್ನು ಬಲಿ ಪಡೆದುಕೊಂಡಿದೆ. ಲಕ್ಷಾಂತರ ಮಂದಿಯನ್ನು ನಿರಾಶ್ರಿತರನ್ನಾಗಿಸಿದೆ. ಮಿಲಿಯನ್‌ಗಟ್ಟಲೇ ನಷ್ಟವನ್ನು ಉಂಟು ಮಾಡಿದೆ," ಎಂದು ಉಲ್ಲೇಖ ಮಾಡಿದೆ.

"ಪ್ರಸ್ತುತ ಉಂಟಾಗಿರುವ ಆಹಾರ ಹಾಗೂ ನೀರಿನ ಅಭದ್ರತೆಯು, ಆರೋಗ್ಯದ ಅಪಾಯಗಳು ಹಾಗೂ ಪರಿಸರದ ಅವನತಿಯು ಸುಸ್ಥಿರ ಅಭಿವೃದ್ದಿಗೆ ಬೆದರಿಕೆಯನ್ನು ಒಡ್ಡಿದೆ. ಈ ಹವಾಮಾನ ವೈಪರೀತ್ಯವು ಸುಸ್ಥಿರ ಅಭಿವೃದ್ದಿಗೆ ಬೆದರಿಕೆ ಆಗಿಯೇ ಮುಂದುವರಿದಿದೆ. ಸಾಕಷ್ಟು ನಷ್ಟ ಉಂಟಾಗಿದೆ," ಎಂದು ತಿಳಿಸಿದೆ.

"ಚೀನಾ, ಭಾರತ ಹಾಗೂ ಜಪಾನ್‌ ಈ ಹವಾಮಾನ ವೈಪರೀತ್ಯದಿಂದಾಗಿ ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಚೀನಾದಲ್ಲಿ ಸುಮಾರು 238 ಬಿಲಿಯನ್‌ ಡಾಲರ್‌, ಭಾರತದಲ್ಲಿ ಸುಮಾರು 87 ಬಿಲಿಯನ್‌ ಡಾಲರ್‌ ಹಾಗೂ ಜಪಾನ್‌ನಲ್ಲಿ 83 ಬಿಲಿಯನ್‌ ಡಾಲರ್‌ ನಷ್ಟ ಉಂಟಾಗಿದೆ. 2020 ರಲ್ಲಿ ಉಂಟಾದ ನೆರೆ ಹಾಗೂ ಬಿರುಗಾಳಿ ಸುಮಾರು 50 ಮಿಲಿಯನ್‌ ಜನರ ಮೇಲೆ ಪರಿಣಾಮ ಬೀರಿದೆ.

ಐದು ಸಾವಿರ ಜನರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ," ಎಂದಿದೆ. ಅಕ್ಟೋಬರ್ 31ರವರೆಗೆ ಕರ್ನಾಟಕದ 11 ಜಿಲ್ಲೆಗಳಲ್ಲಿ ಅಧಿಕ ಮಳೆಅಕ್ಟೋಬರ್ 31ರವರೆಗೆ ಕರ್ನಾಟಕದ 11 ಜಿಲ್ಲೆಗಳಲ್ಲಿ ಅಧಿಕ ಮಳೆ "ಇನ್ನು ಹಾನಿಯ ಬಗ್ಗೆ ಹೇಳುವುದಾದರೆ ಭಾರತ ಹಾಗೂ ಚೀನಾ ಬಹಳಷ್ಟು ಬಳಲಿದೆ. ಭಾರತದಲ್ಲಿ 26.3 ಬಿಲಿಯನ್ ಡಾಲರ್‌ ಮೌಲ್ಯದ ಸಂಪತ್ತಿನ ಮೇಲೆ ಹಾನಿ ಉಂಟಾಗಿದೆ.

ಚೀನಾದಲ್ಲಿ 23.1 ಬಿಲಿಯನ್‌ ಡಾಲರ್‌ ಸಂಪತ್ತಿನ ಮೇಲೆ ಹಾನಿ ಉಂಟಾಗಿದೆ. ಕೆಲವು ದೇಶಗಳಲ್ಲಿ ಇದು ಜಿಡಿಪಿ ಮೇಲೆ ಪರಿಣಾಮ ಬೀರಿದೆ. ಭಾರತ, ಇರಾನ್, ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನು ಗಮನಿಸುವುದಾದರೆ ಇಲ್ಲಿ ಶೇಕಡ 0.5 ರಷ್ಟು ಜಿಡಿಪಿ ಮೇಲೆ ಪರಿಣಾಮ ಬೀರಿದೆ," ಎಂದು ವಿಶ್ವ ಸಂಸ್ಥೆ ವರದಿಯು ಅಭಿಪ್ರಾಯಿಸಿದೆ.

English summary
In 2022, India and the United States are expected to move forward on a wide-ranging set of initiatives, including fight against the pandemic, climate change, QUAD, and new and emerging technologies, the White House said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X