• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕದ ಗ್ರೀನ್ ಕಾರ್ಡ್ ಬೇಕೆಂದರೆ ಭಾರತೀಯರು 195 ವರ್ಷ ಕಾಯಬೇಕು

|

ವಾಷಿಂಗ್ಟನ್, ಜುಲೈ 23: ಅಮೆರಿಕದಲ್ಲಿರುವ ಭಾರತೀಯರು ಅಲ್ಲಿಯ ಕಾಯಂ ಪ್ರಜೆಯಾಗಲು ಗ್ರೀನ್ ಕಾರ್ಡ್ ಪಡೆಯಬೇಕಿದ್ದರೆ 195 ವರ್ಷ ಕಾಯಬೇಕಿದೆ. ಅಮೆರಿಕದಲ್ಲಿನ ಬ್ಯಾಕ್‌ಲಾಗ್ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ವಿಚಿತ್ರ ಸಮಸ್ಯೆ ಎದುರಾಗಿದೆ.

   Sonu Sood : ವಲಸೆ ಕಾರ್ಮಿಕರಿಗಾಗಿ ಹೊಸ ಯೋಜನೆ ರೂಪಿಸಿದ ಬಾಲಿವುಡ್ ಸ್ಟಾರ್ | Oneindia Kannada

   ಇದಕ್ಕೆ ಕೂಡಲೇ ಪರಿಹಾರ ಕಂಡುಕೊಳ್ಳದಿದ್ದರೆ ಮತ್ತಷ್ಟು ಸಮಸ್ಯೆ ಬರಲಿದೆ ಎಂದು ಅಮೆರಿಕದ ಸೆನೆಟರ್ ಮೈಕ್‌ಲೀ ಸೆನೆಟ್‌ಗೆ ಮನವಿ ಮಾಡಿದ್ದಾರೆ.

   ಅಮೆರಿಕ ಸಿಬ್ಬಂದಿ ಮೇಲೆ ವೀಸಾ ನಿರ್ಬಂಧ ವಿಧಿಸಿದ ಚೀನಾ

   ಭಾರತದಿಂದ ವಲಸಿಗರಾಗಿ ಅಮೆರಿಕಕ್ಕೆ ಪ್ರವೇಶಿಸಿದವರು ಈ ಇಬಿ3 ಗ್ರೀನ್ ಕಾರ್ಡ್ ಪಡೆಯಬೇಕಿದ್ದರೆ 195 ವರ್ಷ ಕಾಯಬೇಕಿದೆ.ಪಾಲಕರು ಅರ್ಜಿ ಸಲ್ಲಿಸಿದರೆ ಅವರ ಮಕ್ಕಳು ಕೂಡ ಅಮೆರಿಕದ ಪ್ರಜೆಗಳಾಗಲು ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. 2019ರ ಆರ್ಥಿಕ ವರ್ಷದ ಅಂತ್ಯಕ್ಕೆ 9008ಇಬಿ1,2908ಇಬಿ2 , 5083ಇಬಿ3ಭಾರತೀಯರ ಅರ್ಜಿಗಳು ಅಷ್ಟೇ ಮಾನ್ಯವಾಗಿದೆ.

   ಉಳಿದ ಸಾವಿರಾರು ಅರ್ಜಿಗಳು ಇನ್ನೂ ಬಾಕಿ ಇದೆ. ಇದರಿಂದ ಅಮೆರಿಕದಲ್ಲಿ ಜನಿಸಿದ ವಲಸಿಗರು ಹಾಗೂ ಅವರ ಮಕ್ಕಳಿಗೆ ಯಾವುದೇ ಸರ್ಕಾರಿ ಸವಲತ್ತುಗಳು ಸಿಗುವುದಿಲ್ಲ. ಇದರಿಂದ ಅವರ ಆರೋಗ್ಯ ಮತ್ತು ಶೈಕ್ಷಣಿಕ ಜೀವನದ ಮೇಲೆ ದುಷ್ಪರಿಣಾಮ ಬೀರಲಿದೆ.ಹಾಗೆಯೇ ಕೆಲವೊಮ್ಮೆ ಅವರು ಅನಿವಾರ್ಯ ಕಾರಣಗಳಿಂದಾಗಿ ಉದ್ಯೋಗ ಕಳೆದುಕೊಂಡಲ್ಲಿ ಗಡಿಪಾರು ಆತಂಕವನ್ನೆದುರಿಸಬೇಕಾಗುತ್ತದೆ.

   ಹೀಗಾಗಿ ಅವರ ಹಿತವನ್ನು ಕಾಪಾಡುವುದು ಸರ್ಕಾರದ ಕೆಲಸ .ಗ್ರೀನ್‌ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರು ಹಾಗೂ ಅವರ ಮಕ್ಕಳನ್ನು ದೇಶದಿಂದ ಗಡಿಪಾರು ಮಾಡುವುದಿಲ್ಲ ಎಂಬ ಹೊಸ ನಿಯಮವನ್ನು ಜಾರಿಗೆ ತರಬೇಕಿದೆ ಎಂದು ಸೆನೆಟರ್ ಆಗ್ರಹಿಸಿದ್ದಾರೆ.

   ಉದಾಹರಣೆಗೆ: ಎಚ್‌1ಬಿ ವೀಸಾದ ಮೇಲೆ ಅಮೆರಿಕಕ್ಕೆ ಬಂದು ಅವರ ಮಕ್ಕಳು ಗ್ರೀನ್ ಕಾರ್ಡ್‌ಗೆ ಕಾಯುತ್ತಿರುತ್ತಾರೆ. ಅಮೆರಿಕದ ಕಾಯಂ ನಾಗರಿಕರಲ್ಲದ ಹಿನ್ನೆಲೆಯಲ್ಲಿ ಸರ್ಕಾರದ ಯಾವುದೇ ಸವಲತ್ತಿಲ್ಲದೆ ಎಲ್ಲಾ ರೀತಿಯ ದುಬಾರಿ ಶುಲ್ಕವನ್ನು ನೀಡಿ ಅವರು ಶಿಕ್ಷಣವನ್ನು ಪಡೆದಿರುತ್ತಾರೆ.

   ಆದರೆ 21 ವರ್ಷ ಆದ ಬಳಿಕ ಗ್ರೀನ್ ಕಾರ್ಡ್ ಇಲ್ಲ ಎನ್ನುವ ಕಾರಣಕ್ಕೆ ಅವರನ್ನು ದೇಶದಿಂದ ಹೊರಹಾಕಿದರೆ ಅವರ ಸ್ಥಿತಿ ಏನಾಗಬೇಕು ಎಂದು ಮೈಕ್‌ಲೀ ಪ್ರಶ್ನಿಸಿದ್ದಾರೆ.

   ನಮ್ಮ ವಲಸಿಗರ ನಿಯಮದಲ್ಲಿನ ಸಮಸ್ಯೆಯಿಂದ ಬೇರೆ ಮಕ್ಕಳು ಸಮಸ್ಯೆಗೆ ಸಿಲುಕಬಾರದು ಎಂಬುದಷ್ಟೇ ನಮ್ಮ ಕಾಳಜಿ ಎಂದು ಸೆನೆಟ್‌ನಲ್ಲಿ ವಾದ ಮಂಡಿಸಿದ್ದಾರೆ.

   English summary
   The backlog for an Indian national to get permanent residency or green card is more than 195 years, a top Republican senator has said, urging his Senate colleagues to come out with a legislative resolution to address this problem.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more