ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ತಂದೆ-ತಾಯಿ ಭಾರತೀಯರು ಎನ್ನಲು ಹೆಮ್ಮೆಯಾಗುತ್ತದೆ: ಹಾಲೆ

|
Google Oneindia Kannada News

ವಾಂಷಿಂಗ್ಟನ್ ಡಿಸಿ, ಫೆಬ್ರವರಿ 01: "ನನ್ನ ಪೂರ್ವಜರು ಭಾರತೀಯರು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಅನ್ನಿಸುತ್ತದೆ" ಎಂದು ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿಯಾಗಿರುವ ನಿಕ್ಕಿ ಹಾಲೆ ಅಭಿಮಾನದಿಂದ ಹೇಳಿಕೊಂಡಿದ್ದಾರೆ.

'ನನ್ನ ತಂದೆ-ತಾಯಿ ಭಾರತೀಯರು ಎಂದು ಹೇಳಿಕೊಳ್ಳಲು ನನಗೆ ತುಂಬ ಅಭಿಮಾನವಿದೆ" ಎಂದು ಅವರು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ನವ್ತೇಜ್ ಸರ್ನಾ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಹೇಳಿದರು.

ಟ್ರಂಪ್- ನಿಕ್ಕಿ ಹಾಲೆ ಸಂಬಂಧದ ಬಗ್ಗೆ ಕಲರ್ ಕಥೆ ಹೇಳಿದ ವುಲ್ಫ್ಟ್ರಂಪ್- ನಿಕ್ಕಿ ಹಾಲೆ ಸಂಬಂಧದ ಬಗ್ಗೆ ಕಲರ್ ಕಥೆ ಹೇಳಿದ ವುಲ್ಫ್

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಹೊಸ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು 46 ವರ್ಷದ ಹಾಲೆ ಹೇಳಿದರು.

I am a proud daughter of Indian parents: Nikki Haley

ಡೊನಾಲ್ಡ್ ಟ್ರಂಪ್ ಅವರ ಕುರಿತು ಮೈಕೆಲ್ ವುಲ್ಫ್ ಎಂಬುವವರು ರಚಿಸಿದ ವಿವಾದಾತ್ಮಕ ಕೃತಿಯಲ್ಲಿ ಹಾಲೆ ಹಾಗೂ ಟ್ರಂಪ್ ಮಧ್ಯೆ ಸಂಬಂಧವಿದೆ ಎಂದು ಉಲ್ಲೇಖಿಸಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲ್ಲಣ ಮೂಡಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

English summary
United States Ambassador to the United NationsNikki Haley has expressed pride over her Indian ancestry and said one did not need to give up being an Indian to be American."I am a proud daughter of Indian parents," said Haley, who paid a visit to the Indian Embassy in the U.S. on Wednesday and met Indian Ambassador Navtej Sarna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X