ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಡನ ಕೊಲೆ ಕೇಸ್ ವಿಚಾರಣೆ ಎದುರಿಸುತ್ತಿರುವ How to Murder Your Husband? ಲೇಖಕಿ

|
Google Oneindia Kannada News

ಪೋರ್ಟ್‌ಲ್ಯಾಂಡ್, ಏ. 6: ಆಕೆ 'ಗಂಡನನ್ನು ಕೊಲ್ಲುವುದು ಹೇಗೆ' (ಹೌ ಟು ಮರ್ಡರ್ ಯುವರ್ ಹಸ್ಬೆಂಡ್) ಎಂದು ತಿಳಿಸಿ ಒಂದು ಪುಸ್ತಕವನ್ನೇ ಬರೆದವಳು. ವಿಪರ್ಯಾಸ ಎಂದರೆ ತನ್ನ ಸ್ವಂತ ಗಂಡನನ್ನೇ ಹತ್ಯೆ ಮಾಡಿದ ಆರೋಪ ಹೊತ್ತು ಕೊಲೆ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದಾಳೆ. ಈಕೆಯ ಹೆಸರು ನ್ಯಾನ್ಸಿ ಕ್ರಾಂಪ್ಟನ್ ಬ್ರೋಫಿ. ಈಕೆಯ ಗಂಡ ಡೇನಿಯಲ್ ಬ್ರೋಫಿ ಅವರು 2018ರಲ್ಲಿ ಕೊಲೆಯಾಗಿದ್ದರು. ಈಕೆಯನ್ನು ಕೊಂದ ಆರೋಪದ ಮೇಲೆ ನ್ಯಾನ್ಸಿಯನ್ನು ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ಪೊಲೀಸರು ಬಂಧಿಸಿದ್ದರು. ಆಗಿನಿಂದಲೂ ಆಕೆಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಇದೀಗ ಮೊನ್ನೆ ನ್ಯಾಯಾಲಯದಲ್ಲಿ ಈ ಕೊಲೆ ಪ್ರಕರಣದ ವಿಚಾರಣೆ ಆರಂಭಗೊಂಡಿದೆ ಎಂದು ಅಸೋಸಿಯೇಟ್ ಪ್ರೆಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

63 ವರ್ಷದ ಡೇನಿಯಲ್ ಬ್ರೋಫಿ 2018, ಜೂನ್ 2ರಂದು ಬೆಳಗ್ಗೆ ಓರೆಗಾನ್ ರಾಜ್ಯದ ಪೋರ್ಟ್‌ಲೆಂಡ್ ನಗರದಲ್ಲಿರುವ ಓರೆಗಾನ್ ಕ್ಯೂಲಿನರಿ ಇನ್ಸ್ಟಿಟ್ಯೂಟ್‌ನಲ್ಲಿ ಕೆಲಸಕ್ಕೆ ಹೋಗುವಾಗ ಗುಂಡಿಟ್ಟು ಹತ್ಯೆಯಾಗಿದ್ದರು. ಬಹಳ ದಿನ ಪೊಲೀಸರಿಗೆ ಕೊಲೆಗಾರರ ಸುಳಿವೇ ಸಿಕ್ಕಿರಲಿಲ್ಲ. ಡೇನಿಯಲ್ ಬ್ರೋಫಿ ಅವರ ಯಾವ ವಸ್ತುವೂ ಕಳುವಾಗಿರಲಿಲ್ಲ. ಇದು ದರೋಡೆಕೋರರು ಮಾಡಿದ ಕೃತ್ಯವಾಗಿರಲಿಲ್ಲ. ಆದರೆ ತನಿಖೆ ನಡೆಯುತ್ತಿರುವಂತೆಯೇ ಪೊಲೀಸರಿಗೆ ಕೆಲ ಸುಳಿವು ಸಿಕ್ಕು ಕೊನೆಗೆ ಡೇನಿಯಲ್ ಬ್ರೋಫಿ ಅವರ ಹೆಂಡತಿ ಕ್ರಾಂಪ್ಟನ್ ಬ್ರೋಫಿ ಸಿಕ್ಕಿಬಿದ್ದಳು. ಈಕೆ ಜೊತೆಗೆ ಇನ್ನೊಬ್ಬ ಶಂಕಿತರೂ ಪೊಲೀಸರಿಗೆ ಸಿಕ್ಕಿದ್ದಾರೆ.

ಸುಳಿವು ಸಿಕ್ಕಿದ್ದು ಹೀಗೆ:
ಕೊಲೆ ಘಟನೆ ನಡೆದ ಸ್ಥಳದ ಸುತ್ತಮುತ್ತ ಟ್ರಾಫಿಕ್ ಕ್ಯಾಮೆರಾಗಳನ್ನು ಪೊಲೀಸರು ಜಾಲಾಡಿದಾಗ ಕ್ರ್ಯಾಂಪ್ಟನ್ ಬ್ರೋಫಿ ಬಗ್ಗೆ ಅನುಮಾನ ಬಂದಿದೆ. ಕೊಲೆಯಾದ ಸಮಯದಲ್ಲಿ ಸಮೀಪದ ಬೀದಿಗಳಲ್ಲಿ ಕ್ರಾಂಪ್ಟನ್ ಅವರ ವಾಹನ ಬಂದು ಹೋಗಿದ್ದು ಟ್ರಾಫಿಕ್ ಕ್ಯಾಮೆರಾಗಳಿಂದ ಗೊತ್ತಾಗಿದೆ. ಇದು ಕ್ರಾಂಪ್ಟನ್ ಅವರ ಬಂಧನಕ್ಕೆ ಎಡೆ ಮಾಡಿಕೊಟ್ಟಿತು. ಡೇನಿಯಲ್ ಬ್ರೋಫಿ ಕೊಲೆಯಾದ ಕೆಲ ವರ್ಷಗಳ ಹಿಂದೆ ನ್ಯಾನ್ಸಿ ಕ್ರಾಂಪ್ಟನ್ ಬ್ರೋಫಿ ಅವರು "ಹೌ ಟು ಮರ್ಡರ್ ಯುವರ್ ಹಸ್ಬೆಂಡ್"ಎಂಬ ಕಿರುಪುಸ್ತಕ ಬರೆದಿದ್ದಳು.

Viral Story: ‘How to Murder Your Husband’ Author Goes on Trial for Her Husband’s Murder

ಇನ್ಸುರೆನ್ಸ್ ಹಣಕ್ಕಾಗಿ ಕೊಲೆಯಾಯಿತಾ?
ಪ್ರಕರಣದ ವಿಚಾರಣೆ ಮೊನ್ನೆ ಆರಂಭಗೊಂಡಿದೆ. ಪ್ರಾಸಿಕ್ಯೂಟರ್ ಮಂಡಿಸಿದ ವಾದದ ಪ್ರಕಾರ ನ್ಯಾನ್ಸಿ ಅವರು ಇನ್ಸುರೆನ್ಸ್ ಹಣಕ್ಕಾಗಿ ಗಂಡನ ಕೊಲೆ ಮಾಡಿದರೆಂಬ ಶಂಕೆ ಇದೆ. ಡೇನಿಯಲ್ ಬ್ರೋಫಿ ಅವರ ಬಳಿ 1.4 ಮಿಲಿಯನ್ ಡಾಲರ್, ಅಂದರೆ ಸುಮಾರು 10 ಕೋಟಿ ರೂಪಾಯಿ ಮೌಲ್ಯದ ವಿಮೆ ಪಾಲಿಸಿ ಹೊಂದಿದ್ದರು. ಅದಕ್ಕೆ ನಾಮಿನಿಯಾಗಿದ್ದ ನ್ಯಾನ್ಸಿ ಅವರು ಆ ಹಣವನ್ನ ಪಡೆಯಲು ಗಂಡನನ್ನೇ ಕೊಲೆ ಮಾಡಿದಳೆಂಬುದು ಪ್ರಾಸಿಕ್ಯೂಟರ್ ಅವರ ವಾದ.

vViral Story: ‘How to Murder Your Husband’ Author Goes on Trial for Her Husband’s Murder

ಆದರೆ, ಆರೋಪಿಪರ ವಕೀಲರು ಈ ವಾದವನ್ನು ಅಲ್ಲಗಳೆದಿದ್ದಾರೆ. ಡೇನಿಯಲ್ ಬ್ರೋಫಿ ಅವರ ನಿಧನದ ಬಳಿಕ ನ್ಯಾನ್ಸಿ ಅವರಿಗೆ ಯಾವ ಸಂಪತ್ತೂ ಸಿಗಲಿಲ್ಲ. ಬದಲಾಗಿ ಆಕೆಯ ಹಣಕಾಸು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಹೀಗಾಗಿ, ನ್ಯಾನ್ಸಿ ಅವರು ಈ ಪ್ರಕರಣದಲ್ಲಿ ಅಮಾಯಕಿ ಎಂಬುದು ಈ ವಕೀಲರ ಪ್ರತಿವಾದ. ನಾಲ್ಕು ವರ್ಷದ ಹಿಂದಿನ ಈ ಕೊಲೆ ಪ್ರಕರಣದ ವಿಚಾರಣೆ 7 ವಾರ ನಡೆಯುವ ನಿರೀಕ್ಷೆ ಇದೆ.

Viral Story: ‘How to Murder Your Husband’ Author Goes on Trial for Her Husband’s Murder

ಸೌತ್ ಕರೋಲಿನಾದಲ್ಲಿ ಇನ್ನೊಂದು ಪ್ರಕರಣ:
ವಿಮೆ ಹಣಕ್ಕಾಗಿ ಕೊಲೆ ಕೃತ್ಯ ನಡೆಯುವುದು ಸಾಮಾನ್ಯವೆಂಬಂತಾಗಿದೆ. ಭಾರತದಲ್ಲಿ ಇಂಥ ಹಲವು ಪ್ರಕರಣಗಳಿವೆ. ಅಮೆರಿಕದ ಸೌತ್ ಕರೋಲಿನಾದಲ್ಲಿ ಕಳೆದ ವರ್ಷ ಇನ್ನೊಂದು ರೀತಿಯ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿತ್ತು. ನಗರದ ಪ್ರಮುಖ ವಕೀಲರೊಬ್ಬರು ತನ್ನ ಮಗನಿಗೆ ವಿಮೆ ಹಣ ಸಿಗುವಂತಾಗಲು ತಾವೇ ಖುದ್ದಾಗಿ ಕೊಲೆಯಾಗಿ ಹೋಗಲು ಯತ್ನಿಸಿದ್ದರು.

Viral Story: ‘How to Murder Your Husband’ Author Goes on Trial for Her Husband’s Murder

ಅಂದರೆ ಶೂಟರ್ ವೊಬ್ಬರಿಗೆ ಗನ್ ಕೊಟ್ಟು ತನ್ನನ್ನು ಕೊಲ್ಲಲು ಹೇಳಿದ್ದರು. ಆದರೆ, ಅದೃಷ್ಟಕ್ಕೋ, ದುರಾದೃಷ್ಟಕ್ಕೋ ಆ ಶೂಟರ್ ಹೊಡೆದ ಗುಂಡು ತಲೆಗೆ ಹೊಕ್ಕಿತಾದರೂ ಸಾವು ಆಗಲಿಲ್ಲ. ಕೊನೆಗೆ ಆಸ್ಪತ್ರೆಗೆ ದಾಖಲಾಗಿ ಅವರು ಬದುಕುಳಿದರು. ಪೊಲೀಸರು ಇದೀಗ ಆ ವಕೀಲ ಹಾಗೂ ಅವರ ಹತ್ಯೆಗೆ ಯತ್ನಿಸಿದ ಶೂಟರ್ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. (ಒನ್ಇಂಡಿಯಾ ಸುದ್ದಿ)

English summary
Nancy crampton brophy, the author of How to murder Your Husband faces trial on charges of murdering her husband. She is in police custody since 2018 September.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X