ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಕಿತ್ತೊಗೆಯಲು 25ನೇ ತಿದ್ದುಪಡಿ ತನ್ನಿ: ನ್ಯಾನ್ಸಿ ಒತ್ತಾಯ

|
Google Oneindia Kannada News

ವಾಷಿಂಗ್ಟನ್, ಜನವರಿ 8: ಡೊನಾಲ್ಡ್ ಟ್ರಂಪ್ ಅವರನ್ನು ಅಧಿಕಾರದಿಂದ ಕಿತ್ತುಹಾಕಲು 25ನೇ ತಿದ್ದುಪಡಿಯನ್ನು ಜಾರಿಗೆ ತರುವಂತೆ ಉಪಾಧ್ಯಕ್ಷ ಮೈಕ್ ಪೆನ್ಸ್ ಮತ್ತು ಸಂಪುಟಕ್ಕೆ ಅಮೆರಿಕ ಸಂಸತ್ ಸ್ಪೀರ್ ನ್ಯಾನ್ಸಿ ಪೆಲೋಸಿ ಗುರುವಾರ ಕರೆ ನೀಡಿದ್ದಾರೆ.

ಒಂದು ವೇಳೆ ಟ್ರಂಪ್ ಅವರನ್ನು ಪದಚ್ಯುತಗೊಳಿಸಲು 25ನೇ ತಿದ್ದುಪಡಿಯನ್ನು ಹೇರದೆ ಹೋದರೆ ಅಧ್ಯಕ್ಷರ ವಿರುದ್ಧ ವಾಗ್ದಂಡನೆಗೆ ಕಾಂಗ್ರೆಸ್ ಮುಂದಾಗಲಿದೆ ಎಂದು ಪೆಲೋಸಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಗಲಭೆಯ ಬಳಿಕ ಕೊನೆಗೂ ತಲೆಬಾಗಿದ ಟ್ರಂಪ್: ಸುಗಮ ಅಧಿಕಾರ ಹಸ್ತಾಂತರಕ್ಕೆ ಒಪ್ಪಿಗೆಗಲಭೆಯ ಬಳಿಕ ಕೊನೆಗೂ ತಲೆಬಾಗಿದ ಟ್ರಂಪ್: ಸುಗಮ ಅಧಿಕಾರ ಹಸ್ತಾಂತರಕ್ಕೆ ಒಪ್ಪಿಗೆ

'ತಕ್ಷಣವೇ 25ನೇ ತಿದ್ದುಪಡಿ ಜಾರಿಗೆ ತರುವ ಮೂಲಕ ಅಧ್ಯಕ್ಷರನ್ನು ಪದಚ್ಯುತಗೊಳಿಸಬೇಕು ಎಂಬ ಡೆಮಾಕ್ರಟಿಕ್‌ನ ಸೆನೆಟ್ ಸದಸ್ಯರ ಬೇಡಿಕೆಗೆ ನಾನು ದನಿಗೂಡಿಸುತ್ತೇನೆ. ಉಪಾಧ್ಯಕ್ಷರು ಮತ್ತು ಸಂಪುಟವು ಕ್ರಮ ತೆಗೆದುಕೊಳ್ಳದೆ ಹೋದರೆ ನನ್ನ ಕ್ಷೇತ್ರ ಹಾಗೂ ಅಮೆರಿಕದ ಜನರ ಅಗಾಧ ಭಾವನೆಗಳಿಗೆ ಅನುಗುಣವಾಗಿ ವಾಗ್ದಂಡನೆ ವಿಧಿಸುವ ಪ್ರಕ್ರಿಯೆಗೆ ಮುಂದಾಗಲು ಕಾಂಗ್ರೆಸ್ ಸಿದ್ಧವಾಗಬಹುದು' ಎಂದು ಅವರು ಹೇಳಿದ್ದಾರೆ.

House Spealer Nancy Pelosi Demands Revoking 25th Amendment To Remove Donald Trump From Office

ಅಧಿಕಾರದಿಂದ ಕೆಳಗಿಳಿಯಲು ಮತ್ತು ಕಚೇರಿ ಕರ್ತವ್ಯಗಳನ್ನು ತ್ಯಜಿಸಲು ಡೊನಾಲ್ಡ್ ಟ್ರಂಪ್ ಮುಂದಾಗದ ಹಿನ್ನೆಲೆಯಲ್ಲಿ ಅವರನ್ನು ಬಲವಂತವಾಗಿ ಪದಚ್ಯುತಗೊಳಿಸಲು 25ನೇ ತಿದ್ದುಪಡಿಯನ್ನು ಜಾರಿಗೆ ತರುವಂತೆ ಒತ್ತಾಯಿಸಲಾಗಿದೆ. ಈ ಪ್ರಕ್ರಿಯೆಗೆ ಉಪಾಧ್ಯಕ್ಷ ಮೈಕ್ ಪೆನ್ಸ್ ಮತ್ತು ಸಂಪುಟದ ಬಹುಸಂಖ್ಯೆಯ ಸದಸ್ಯರು ಮತ ಚಲಾಯಿಸಬೇಕು.

ಅಮೆರಿಕದಲ್ಲಿ ನಡೆದ ಹಿಂಸಾಚಾರ 'ಸುಂದರ ದೃಶ್ಯ' ಎಂದು ಚೀನಾ ಲೇವಡಿಅಮೆರಿಕದಲ್ಲಿ ನಡೆದ ಹಿಂಸಾಚಾರ 'ಸುಂದರ ದೃಶ್ಯ' ಎಂದು ಚೀನಾ ಲೇವಡಿ

ಇದಕ್ಕೂ ಮುನ್ನ ಡೆಮಾಕ್ರಟಿಕ್ ಸೆನೆಟ್ ಮುಖಂಡ ಚುಕ್ ಷೂಮರ್ ಕೂಡ 25ನೇ ತಿದ್ದುಪಡಿಯನ್ನು ಹೇರುವಂತೆ ಪೆನ್ಸ್ ಅವರನ್ನು ಒತ್ತಾಯಿಸಿದ್ದರು. ಎಲೆಕ್ಟೊರಲ್ ಕಾಲೇಜ್ ಮತಗಳ ವಿರುದ್ಧ ಪ್ರತಿಭಟನೆ ನಡೆಸಿದ್ದ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಯುಎಸ್ ಕ್ಯಾಪಿಟಲ್ ಕಟ್ಟಡಕ್ಕೆ ನುಗ್ಗಿ ಹಿಂಸಾಚಾರ ನಡೆಸಿದ್ದರು. ಟ್ರಂಪ್ ಅವರ ಕುಮ್ಮಕ್ಕಿನಂತೆ ಈ ದಾಳಿ ನಡೆದಿದೆ ಎಂದು ಆರೋಪಿಸಲಾಗಿತ್ತು. ಇದರ ಬಳಿಕ ಡೊನಾಲ್ಡ್ ಟ್ರಂಪ್ ಸುಗಮ ಅಧಿಕಾರ ಹಸ್ತಾಂತರ ನಡೆಸಲು ಒಪ್ಪಿಕೊಂಡಿದ್ದರೂ, ಗಲಭೆ ಘಟನೆಯಿಂದ ಅಸಮಾಧಾನಗೊಂಡಿರುವ ಸಂಸದರು ಅವರ ನಡೆಯ ಬಗ್ಗೆ ಅನುಮಾನ ಇರುವುದರಿಂದ ಟ್ರಂಪ್ ಅವರ ಪದಚ್ಯುತಿ ಮಾರ್ಗ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

 ಮುದ್ದು ಮಗಳು ಮಾತನಾಡಿದ್ದು, ಪುಟ್ಟ ಹೆಜ್ಜೆ ಇರಿಸಿದ್ದು ಅದೇ ಕೊನೆಯ ಸಲ ಮುದ್ದು ಮಗಳು ಮಾತನಾಡಿದ್ದು, ಪುಟ್ಟ ಹೆಜ್ಜೆ ಇರಿಸಿದ್ದು ಅದೇ ಕೊನೆಯ ಸಲ

English summary
House Spealer Nancy Pelosi called for invoking 25th amendment to remove Donald Trump from office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X