ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್‌ ರಮ್ಸ್‌ಫೆಲ್ಡ್ ನಿಧನ

|
Google Oneindia Kannada News

ವಾಷಿಂಗ್ಟನ್, ಜುಲೈ 1: ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್‌ ರಮ್ಸ್‌ಫೆಲ್ಡ್ ನಿಧನರಾಗಿದ್ದಾರೆ. ಅವರು ಎರಡು ಬಾರಿ ಅಮೆರಿಕದ ರಕ್ಷಣಾ ಕಾರ್ಯದರ್ಶಿಯಾಗಿದ್ದರು.

ಅವರು ತಮ್ಮ 88ನೇ ವಯಸ್ಸಿನಲ್ಲಿ ರಕ್ತ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಅವರು ಕೆಲ ಕಾಲ ಶ್ವೇತಭವನದ ಮುಖ್ಯಸ್ಥರಾಗಿದ್ದರು ಮತ್ತು 2001ರಿಂದ 2006ರವರೆಗೆ ಅಧ್ಯಕ್ಷ ಜಾರ್ಜ್ ಬುಷ್ ಅವರ ಜತೆಗೂ ಕೂಡ ಸೇವೆ ಸಲ್ಲಿಸಿದ್ದರು.

ಭಾರತಕ್ಕೆ ಅಮೆರಿಕದ ತಾತ್ಕಾಲಿಕ ರಾಯಭಾರಿಯಾಗಿ ಅತುಲ್ ಕೇಶಪ್ ನೇಮಕಭಾರತಕ್ಕೆ ಅಮೆರಿಕದ ತಾತ್ಕಾಲಿಕ ರಾಯಭಾರಿಯಾಗಿ ಅತುಲ್ ಕೇಶಪ್ ನೇಮಕ

2003ರ ಇರಾಕ್ ಆಕ್ರಮಣದ ಪ್ರಮುಖ ರೂವಾರಿಯಾಗಿದ್ದರು, ಅಮೆರಿಕದ ರಾಜಕಾರಣಿ ರಕ್ತ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
1975ರಿಂದ 1977ರವರೆಗೆ ಅಧ್ಯಕ್ಷ ಜೆರಾಲ್ಡ್ ಫೋರ್ಡ್ ನೇತೃತ್ವದಲ್ಲಿ ಡೊನಾಲ್ಡ್ ಎರಡು ಬಾರಿ ರಕ್ಷಣಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

Former US Defence Secretary Donald Rumsfeld Dies At 88

ಅವರು ಇರಾಕ್ ಮತ್ತು ಅಫ್ಘಾನಿಸ್ತಾನದ ಮೇಲೆ ಅಮೆರಿಕ ಆಕ್ರಮಣದ ಹಿಂದಿನ ಪ್ರೇರಕ ಶಕ್ತಿಯಾಗಿದ್ದರು. ಆದರೂ ಒಸಾಮಾ ಬಿನ್ ಲಾಡೆನ್ ಅವರನ್ನು ಸೆರೆಹಿಡಿಯಲು ಅಥವಾ ಕೊಲ್ಲಲು ಅಧಿಕಾರದಲ್ಲಿದ್ದ ಐದು ವರ್ಷಗಳ ಅವಧಿಯಲ್ಲಿ ಅವರ ಯತ್ನ ವಿಫಲವಾಗಿತ್ತು.

ಪ್ರಸ್ತುತ ಪೆಂಟಗನ್ ಮುಖ್ಯಸ್ಥ ಲಾಯ್ಡ್ ಆಸ್ಟಿನ್, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ, ಡೊನಾಲ್ಡ್ 1954ರಿಂದ 1957ರವರೆಗೂ ಅಮೆರಿಕ ನೌಕಾಪಡೆಯ ಪೈಲಟ್ ಮತ್ತು ಫ್ಲೈಟ್ ಬೋಧಕರಾಗಿ ಸೇವೆ ಸಲ್ಲಿಸಿದ್ದರು ಎಂದು ಆಸ್ಟಿನ್ ತಿಳಿಸಿದ್ದಾರೆ.

ವಿಶೇಷವಾಗಿ ಇರಾಕ್ ಮತ್ತು ಅಫ್ಘಾನಿಸ್ತಾನ ಕ್ರಮ ಕುರಿತು ಕೈಗೊಂಡ ನಿಲುವುಗಳಿಗೆ ಅವರು ತೀವ್ರ ಟೀಕೆ ಎದುರಿಸಿದ್ದರು.

English summary
Donald Rumsfeld, the two-time defence secretary and one-time presidential candidate whose reputation as a skilled bureaucrat and visionary of a modern US military was unraveled by the long and costly Iraq war, died Tuesday. He was 88.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X