ಅಡ್ಡಾದಿಡ್ಡಿಯಾಗಿ ಹೋಗುತ್ತಿದ್ದ ಲ್ಯಾಂಬೋರ್ಗಿನಿ ಕಾರು ನಿಲ್ಲಿಸಿದ ಪೊಲೀಸರಿಗೆ ಶಾಕ್

ನ್ಯೂಯಾರ್ಕ್, ಮೇ 6: ಹೆದ್ದಾರಿಯಲ್ಲಿ ಕಾರೊಂದು ಅಡ್ಡಾದಿಡ್ಡಿಯಾಗಿ ಚಲಿಸುತ್ತಿರುವುದ ಕಂಡು ಪೊಲೀಸರು ಕಾರನ್ನು ತಡೆದಾಗ ಅವರಿಗೆ ಆಶ್ಚರ್ಯವೊಂದು ಕಾದಿತ್ತು. ದೂರದಿಂದ ನೋಡಿದರೆ ಚಾಲಕನೇ ಇಲ್ಲದಂತೆ ಕಂಡಿತ್ತು, ಬಳಿಕ ಕಾರು ನಿಲ್ಲಿಸಿದಾಗ 5 ವರ್ಷದ ಬಾಲಕ ಕಾರಿನಿಂದ ಹೊರಬಂದಿದ್ದಾನೆ.

ಹೆದ್ದಾರಿಯಲ್ಲಿ ನಿಧಾನವಾಗಿ ಬರುತ್ತಿದ್ದ ಕಾರು ಅಂತಾರಾಜ್ಯ ಮುಕ್ತ ಮಾರ್ಗದ ಎಡ ಪಥದಲ್ಲಿ ಅಡ್ಡಾದಿಡ್ಡಿಯಾಗಿ ಬರುತ್ತಿರುವುದನ್ನು ಅಮೆರಿಕ ಹೈವೇ ಪೊಲೀಸರು ಗಮನಿಸಿ ಸೈರನ್ ಮೊಳಗಿಸಿದ್ದಾರೆ. ಬಳಿಕ ಪೊಲೀಸರು ಬಂದು ಕಾರು ಬಾಗಿಲು ತೆಗೆದಾಗ ಬಾಲಕ ಇದ್ದಿದ್ದನ್ನು ನೋಡಿ ದಂಗಾಗಿದ್ದಾರೆ.ಡ್ರೈವಿಂಗ್ ಎಲ್ಲಿಂದ ಕಲಿತೆ ಎಂಬ ಪ್ರಶ್ನೆ ಜೊತೆಗೆ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದ್ದಾರೆ.

Five Year Old Stopped By Cops For Driving Was Out To Buy Lamborghini

ದುಬಾರಿ ಲ್ಯಾಂಬೊರ್ಗಿನಿ ಕಾರು ಕೊಡಿಸದಿದ್ದಕ್ಕೆ ಪಾಲಕರೊಂದಿಗೆ ಗಲಾಟೆ ಮಾಡಿಕೊಂಡು ಕಾರಿನ ಸಮೇತ ಮನೆ ಬಿಟ್ಟು ಬಂದಿದ್ದಾನೆ ಎಂಬುದು ತಿಳಿದುಬಂದಿದೆ. ಕಾರು ಕೊಡಿಸದಿದ್ದಕ್ಕೆ ತಾನೇ ಕಾರು ಖರೀದಿಸಲು ನಿರ್ಧರಿಸಿ ಕ್ಯಾಲಿಫೋರ್ನಿಯಾಗೆ ಹೋಗಲು ಕಾರು ಚಲಾಯಿಸಿಕೊಂಡು ಬಂದಿದ್ದಾನೆ. ಆತನ ಬಳಿ 3 ಡಾಲರ್ ಹಣವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+