ಅಮೆರಿಕಾದಲ್ಲಿ 24 ಗಂಟೆಗಳಲ್ಲೇ 1 ಲಕ್ಷ ಜನರಿಗೆ ಕೊರೊನಾವೈರಸ್!

ವಾಶಿಂಗ್ಟನ್, ನವೆಂಬರ್.05: ಕೊರೊನಾವೈರಸ್ ನಿಂದ ತತ್ತರಿಸಿ ಹೋಗಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಕಳೆದ 24 ಗಂಟೆಗಳಲ್ಲೇ 1,00,000ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

ಒಂದು ಕಡೆಯಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಫಲಿತಾಂಶಕ್ಕೆ ವಿಶ್ವವೇ ಎದುರು ನೋಡುತ್ತಿದೆ. ಇದರ ನಡುವೆ ಕೊರೊನಾವೈರಸ್ ಸೋಂಕಿನ ಹರಡುವಿಕೆ ಅಟ್ಟಹಾಸ ಮುಂದುವರಿದಿದ್ದು, ಒಂದೇ ದಿನದಲ್ಲಿ 104,429 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು ಈಗಾಗಲೇ 98,40,587ಕ್ಕೆ ಏರಿಕೆಯಾಗಿದೆ.

First Time In Covid-19 History: USA Found 100000 Infected Cases In 24 Hours

ಪಶ್ಚಿಮದ ಮಧ್ಯಭಾಗ, ನೈಋತ್ಯ ಭಾಗದಲ್ಲಿ ಕೊರೊನಾವೈರಸ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯು ಹೆಚ್ಚಾಗಿದೆ. ಮಿಸ್ಸೌರಿ, ಓಕ್ಲಾಹಾಮ್, ಇಂಡಿಯಾನಾ, ನೆಬ್ರಸ್ಕಾ, ಉತ್ತರ ಡಕೋಟಾ, ನ್ಯೂ ಮೆಕ್ಸಿಕೋ ಸೇರಿದಂತೆ ಎಲ್ಲ ಕಡೆಗಳಲ್ಲೂ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಹೊಸ ದಾಖಲೆಯಾಗಿದೆ.

ಸಾವಿನ ಪ್ರಮಾಣ ಏರಿಕೆಯ ಸೂಚನೆ:
ಅಮೆರಿಕಾದ ಬಹುತೇಕ ಪ್ರದೇಶಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಏರಿಕೆ ಪ್ರಮಾಣ. ಕೊವಿಡ್-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರಮಾಣಕ್ಕಿಂತ ಹೆಚ್ಚಾಗಿದೆ. ಹಾಗೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣದಲ್ಲಿನ ಏರಿಕೆಯು ಸಾವಿನ ಸಂಖ್ಯೆ ಏರಿಕೆಯ ಮುನ್ಸೂಚನೆ ಆಗಿದೆ ಎಂದು ಲೋವಾ ಹಾಸ್ಪಿಟಲ್ ಆಂಡ್ ಕ್ಲಿನಿಕ್ ಯೂನಿವರ್ಟಿಸಿಯ ಸಿಇಓ ಸುಸಾನ್ ಗುಣಸೇಕರನ್ ತಿಳಿಸಿದ್ದಾರೆ.
ಅಮೆರಿಕಾದ ಜಾನ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ಅಂಕಿ-ಅಂಶಗಳ ಪ್ರಕಾರ, ಫ್ಲೋರಿಡಾ, ನ್ಯೂಯಾರ್ಕ್, ಕೆಂಟುಕಿಯಲ್ಲಿ ಕಳೆದ ಎರಡು ವಾರಗಳಿಂದ ಅತ್ಯಧಿಕ ಕೊರೊನಾವೈರಸ್ ಸೋಂಕಿತ ಪ್ರಕರಣ ಪತ್ತೆಯಾಗುತ್ತಿವೆ. ರಾಜ್ಯದಲ್ಲಿ ಅತಿಹೆಚ್ಚು ಸೋಂಕು ತಗುಲಿರುವ ಪ್ರಕರಣಗಳು ದಕ್ಷಿಣ ದಕೋಟಾದಲ್ಲಿ ಕಂಡು ಬಂದಿದೆ. ಕೊವಿಡ್-19 ಸೋಂಕು ತಪಾಸಣೆಗೊಳಗಾದ 100ರಲ್ಲಿ 51 ಮಂದಿಗೆ ಸೋಂಕು ತಗುಲಿರುವುದು ಇಲ್ಲಿ ಪತ್ತೆಯಾಗಿದೆ.

Recommended Video

      ( ESCN ) ಈ chance miss ಮಾಡ್ಕೊತಾರ Virat ?? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+