ಅಮೆರಿಕದಲ್ಲಿ ಪತ್ತೆಯಾದ ಮೊದಲ ರೂಪಾಂತರಿ ಸೋಂಕಿತನಿಗೆ ಪ್ರಯಾಣದ ಹಿನ್ನೆಲೆಯೇ ಇಲ್ಲ
ವಾಷಿಂಗ್ಟನ್, ಡಿಸೆಂಬರ್ 30: ಅಮೆರಿಕದಲ್ಲಿ ಮೊದಲ ರೂಪಾಂತರಿ ಕೊರೊನಾವೈರಸ್ ಪ್ರಕರಣ ದಾಖಲಾಗಿದೆ.ಕೊರೊನಾ ಸೋಂಕಿತನಿಗೆ ಯಾವುದೇ ಪ್ರಯಾಣದ ಹಿನ್ನೆಲೆಯೇ ಇಲ್ಲ ಎಂದು ಹೇಳಲಾಗಿದೆ.
ಬ್ರಿಟನ್ ನಲ್ಲಿ ಕಾಣಿಸಿಕೊಂಡಿರುವ ರೂಪಾಂತರಿ ಕೊರೊನಾ ವೈರಸ್ ವಿಶ್ವಾದ್ಯಂತ ಹರಇದೇ ರಾಜ್ಯದಲ್ಲಿ ಮತ್ತೊಂದು ರೂಪಾಂತರಿ ಕೊರೊನಾ ಪ್ರಕರಣವೂ ಇರುವ ಶಂಕೆಯನ್ನು ಅಮೆರಿಕ ಆರೋಗ್ಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಡುತ್ತಿದೆ.
ಅಮೆರಿಕದ ಕೊಲೊರಾಡೋದಲ್ಲಿ ಈ ಹೊಸ ಕೊರೊನಾ ಸೋಂಕು ದೃಢಪಟ್ಟಿದ್ದು, 20 ವರ್ಷದ ವ್ಯಕ್ತಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಅಮೆರಿಕನ್ನರಿಗೆ ಲಸಿಕೆಯನ್ನು ತುರ್ತಾಗಿ ಪೂರೈಕೆ ಮಾಡುವುದಕ್ಕೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.

ಅಮೆರಿಕದ ಆರೋಗ್ಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಹೊಸ ಸೋಂಕು ಪೀಡಿತ ವ್ಯಕ್ತಿಗೆ ಯಾವುದೇ ಪ್ರಯಾಣದ ಹಿನ್ನೆಲೆ ಇರಲಿಲ್ಲ ಎಂದು ಹೇಳಿದೆ. ಸೋಂಕು ಪೀಡಿತನನ್ನು ಎಲ್ಬರ್ಟ್ ಕೌಂಟಿಯ ಡೆನ್ವರ್‌ನ ಆಗ್ನೇಯ ಭಾಗದಲ್ಲಿ ಐಸೊಲೇಷನ್ ಗೆ ಒಳಪಡಿಸಲಾಗಿದೆ.












Click it and Unblock the Notifications