ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಇವತ್ತು ನಾವು ಕ್ರಮ ಕೈಗೊಳ್ಳದಿದ್ದರೆ, ಟ್ರಂಪ್ ಮತ್ತೆ ಹಿಂಸೆ ಮಾಡಿಸುತ್ತಾನೆ’

|
Google Oneindia Kannada News

ಟ್ರಂಪ್ ವಿರುದ್ಧ ಆಕ್ರೋಶದ ಕಹಳೆ ಮೊಳಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ವಿರುದ್ಧದ ವಾಗ್ದಂಡನೆ ವಾದವನ್ನು ಡೆಮಾಕ್ರಟಿಕ್ ಪಕ್ಷದ ಸದಸ್ಯರು ಮುಗಿಸಿದ್ದಾರೆ. ಆದರೆ ತಮ್ಮ ವಾದ ಮುಗಿಸುವುದಕ್ಕೆ ಮೊದಲು ಮಹತ್ವದ ಪದವೊಂದನ್ನು ಡೆಮಾಕ್ರಟಿಕ್ ಸದಸ್ಯರು ಬಿಟ್ಟು ಹೋಗಿದ್ದಾರೆ. ಅದೇನೆಂದರೆ 'ಕ್ಯಾಪಿಟಲ್ ಹಿಲ್ ಹಿಂಸಾಚಾರ ಅಮೆರಿಕದ ಇತಿಹಾಸದಲ್ಲೇ ಘೋರ ಘಟನೆ. ಇವತ್ತು ನಾವು ಟ್ರಂಪ್ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದರೆ, ನಾಳೆ ಅವನು ಇಂತಹದ್ದೇ ಕೃತ್ಯ ಎಸಗುತ್ತಾನೆ' ಎಂಬ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಸದ್ಯಕ್ಕೆ ಈ ಹೇಳಿಕೆ ಜಗತ್ತಿನಾದ್ಯಂತ ಕಿಚ್ಚು ಹಚ್ಚಿದೆ. ಏಕೆಂದರೆ ಜಗತ್ತಿನ ಪವರ್ ಫುಲ್ ರಾಷ್ಟ್ರದ ಅಧ್ಯಕ್ಷರಾಗಿದ್ದವರು ಈ ರೀತಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದರು ಎಂಬುದು ಅಮೆರಿಕದ ಮಾನ ಹರಾಜು ಹಾಕಿದೆ. ಮತ್ತೊಂದು ಕಡೆ ಸ್ವತಃ ಟ್ರಂಪ್ ಪಕ್ಷದವರು ಕೂಡ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕ್ರಮಕ್ಕೆ ಬೆಂಬಲ ನೀಡಿದ್ದಾರೆ. ಇದು ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್‌ಗೆ ಒಳಪೆಟ್ಟು ನೀಡುತ್ತಿದೆ.

ರಾಜಕೀಯ ಭವಿಷ್ಯಕ್ಕೆ ತನ್ನ ಕೈಯಾರೆ ಕೊಳ್ಳಿ ಇಟ್ಟುಕೊಂಡ ಟ್ರಂಪ್ರಾಜಕೀಯ ಭವಿಷ್ಯಕ್ಕೆ ತನ್ನ ಕೈಯಾರೆ ಕೊಳ್ಳಿ ಇಟ್ಟುಕೊಂಡ ಟ್ರಂಪ್

ಹೆಜ್ಜೆ ಹೆಜ್ಜೆಗೂ ಆರೋಪ..!

ಹೆಜ್ಜೆ ಹೆಜ್ಜೆಗೂ ಆರೋಪ..!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಹಲವು ಆರೋಪ ಹೊತ್ತಿದ್ದಾರೆ. ಈ ಮಧ್ಯೆ ವಾಗ್ದಂಡನೆಯ ಸಂದರ್ಭದಲ್ಲಿ ಹೊಸ ಹೊಸ ಆರೋಪಗಳು ಸೇರ್ಪಡೆಯಾಗಿವೆ. ಅದರಲ್ಲೂ ಕ್ಯಾಪಿಟಲ್ ಹಿಲ್ ಹಿಂಸಾಚಾರ ನಡೆಯುವ ಮುನ್ನ ಟ್ರಂಪ್ ನೀಡಿದ್ದ ಹೇಳಿಕೆ ಹಾಗೂ ಮಾಡಿದ್ದ ಟ್ವೀಟ್‌ಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ. ಡೆಮಾಕ್ರಟಿಕ್ ಪಕ್ಷದ ಸದಸ್ಯರು ಟ್ರಂಪ್ ಮಾಡಿದ್ದ ಟ್ವೀಟ್ ಹಾಗೂ ವಿವಾದಾತ್ಮಕ ಹೇಳಿಕೆಗಳನ್ನು ಹುಡುಕಿ, ಹುಡುಕಿ ತಂದು ಸಂಸತ್ ಎದುರು ಇಟ್ಟಿದ್ದಾರೆ. ಇದು ಟ್ರಂಪ್ ಬುಡಕ್ಕೆ ಬತ್ತಿ ಇಟ್ಟಂತಾಗಿದೆ. ಅಧಿಕಾರ ಬಿಟ್ಟು ಹೋದರೂ ಟ್ರಂಪ್‌ಗೆ ನೆಮ್ಮದಿಯೇ ಇಲ್ಲವಾಗಿದೆ.

ಸೆನೆಟ್ ಒಳಗೆ ಟ್ರಂಪ್ ವಿಡಿಯೋ

ಸೆನೆಟ್ ಒಳಗೆ ಟ್ರಂಪ್ ವಿಡಿಯೋ

ಅಮೆರಿಕದ ಸೆನೆಟ್ ಹಿಂದೆ ಎಂದೂ ಕಾಣದ ಹಲವು ವಿಚಿತ್ರಗಳನ್ನ ಇದೀಗ ಕಾಣುತ್ತಿದೆ. ಸೆನೆಟ್‌ನಲ್ಲಿ ಟ್ರಂಪ್ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ಆರಂಭವಾಗಿದ್ದರೆ, ಮತ್ತೊಂದ್ಕಡೆ ಟ್ರಂಪ್ ಮಾಡಿದ ಎಡವಟ್ಟಿನ ವಿಡಿಯೋ ಕ್ಲಿಪ್‌ಗಳು ಸೆನೆಟ್‌ನ ಪ್ರೊಜೆಕ್ಟರ್‌ಗಳಲ್ಲಿ ರಾರಾಜಿಸುತ್ತಿವೆ. ಸೆನೆಟ್ ಸದಸ್ಯರು ಹಿಂಸಾಚಾರಕ್ಕೆ ಟ್ರಂಪ್ ಹೇಗೆಲ್ಲಾ ಪ್ರೋತ್ಸಾಹ ನೀಡಿದ್ದರು ಎಂಬುದನ್ನ ಪ್ರೂವ್ ಮಾಡಲು ಹಲವು ವಿಡಿಯೋ ಕ್ಲಿಪ್‌ಗಳನ್ನ ತೋರಿಸುತ್ತಿದ್ದಾರೆ. ಈ ಪೈಕಿ ಕ್ಯಾಪಿಟಲ್ ಹಿಲ್ ಗಲಾಟೆಗೂ ಮುನ್ನ ಟ್ರಂಪ್ ಮಾಡಿದ ಭಾಷಣದ ತುಣುಕು ಹೈಪ್ ಆಗುತ್ತಿದೆ.

ಟ್ರಂಪ್ ವಿರುದ್ಧ ವಾಗ್ದಂಡನೆಗೆ ಕಾರಣ..?

ಟ್ರಂಪ್ ವಿರುದ್ಧ ವಾಗ್ದಂಡನೆಗೆ ಕಾರಣ..?

ಬೇಕೆ ಬೇಕು ನ್ಯಾಯ ಬೇಕು, ಅನ್ಯಾಯ ಅನ್ಯಾಯ ಟ್ರಂಪ್‌ಗೆ ಅನ್ಯಾಯ ಅಂತೆಲ್ಲಾ ಟ್ರಂಪ್ ಬೆಂಬಲಿಗರು ಕಳೆದ ತಿಂಗಳು ಅರಚಾಡಿ, ಕಿರಚಾಟ ನಡೆಸುತ್ತಾ ಅಮೆರಿಕದ ಸಂಸತ್ ಸಭೆಗಳು ನಡೆಯುವ ಕ್ಯಾಪಿಟಲ್ ಹಿಲ್‌ಗೆ ನುಗ್ಗಿದ್ದರು. ಹಿಂಸಾಚಾರ ನಡೆಯುವುದಕ್ಕೆ ಮುನ್ನ ಟ್ರಂಪ್ ಬೆಂಬಲಿಗರನ್ನ ಉದ್ದೇಶಿಸಿ ಮಾತನಾಡಿದ್ದ ಭಾಷಣ ಪ್ರಚೋದನಕಾರಿ ಆಗಿತ್ತು ಎಂಬ ಆರೋಪ ಅಮೆರಿಕ ಸಂಸದರದ್ದು. ಈ ಕಾರಣಕ್ಕೆ ಟ್ರಂಪ್ ವಿರುದ್ಧ ವಾಗ್ದಂಡನೆ ನಡೆಯಲಿ ಎಂದು ಪಟ್ಟು ಹಿಡಿದಿದ್ದರು ಡೆಮಾಕ್ರಟಿಕ್ ಪಕ್ಷದ ಸದಸ್ಯರು. ಇದಕ್ಕೆ ಸ್ವತಃ ಟ್ರಂಪ್ ಪಕ್ಷ ರಿಪಬ್ಲಿಕನ್ ಪಾರ್ಟಿ ಸದಸ್ಯರ ಬೆಂಬಲ ಕೂಡ ಇತ್ತು. ಕೆಳಮನೆಯಲ್ಲಿ ಗೆದ್ದು, ಈಗ ಸೆನೆಟ್‌ನಲ್ಲಿ ಟ್ರಂಪ್ ವಿರುದ್ಧದ ವಾಗ್ದಂಡನೆ ಹೋರಾಟ ಮುಂದುವರಿಸಲಾಗಿದೆ.

ಚುನಾವಣೆ ವಿಚಾರಕ್ಕೆ ಕಿರಿಕ್..!

ಚುನಾವಣೆ ವಿಚಾರಕ್ಕೆ ಕಿರಿಕ್..!

2020ರ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಹೀನಾಯವಾಗಿ ಸೋತಿದ್ದರೂ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದರು. ಆದರೆ ಟ್ರಂಪ್ ಆರೋಪಕ್ಕೆ ಯಾವುದೇ ಸಾಕ್ಷಿ ಇರಲಿಲ್ಲ. ಆದರೂ ತಾವು ಅಧಿಕಾರ ತ್ಯಜಿಸುವುದಿಲ್ಲ ಎಂದು ಟ್ರಂಪ್ ಹಠ ಹಿಡಿದಿದ್ದರು. ಈ ನಡುವೆ ವೈಟ್‌ಹೌಸ್ (ಅಧ್ಯಕ್ಷರ ನಿವಾಸ) ಎದುರು ಜನವರಿ 6ರಂದು ಬೆಂಬಲಿಗರ ಜೊತೆ ಬಹಿರಂಗ ಸಭೆ ನಡೆಸಿದ್ದ ಟ್ರಂಪ್, ಅವರನ್ನ ರೊಚ್ಚಿಗೆಬ್ಬಿಸುವ ಕೆಲಸ ಮಾಡಿದ್ದರು. ಇನ್ನು ಟ್ರಂಪ್ ಮಾತು ಕೇಳಿ ಉನ್ಮಾದಕ್ಕೆ ಒಳಗಾದ ಟ್ರಂಪ್ ಬೆಂಬಲಿಗರು, ಅಮೆರಿಕದ ಸಂಸತ್ ಕಟ್ಟಡ ಇರುವ ಕ್ಯಾಪಿಟಲ್ ಹಿಲ್‌ಗೆ ನುಗ್ಗಿ ಹಿಂಸೆ ನಡೆಸಿದ್ದರು.

ಟ್ರಂಪ್ ವಿರುದ್ಧ ವಾಗ್ದಂಡನೆ, ಮೇಲ್ಮನೆಯಲ್ಲೂ ಗೆಲುವು ಗ್ಯಾರಂಟಿ..?ಟ್ರಂಪ್ ವಿರುದ್ಧ ವಾಗ್ದಂಡನೆ, ಮೇಲ್ಮನೆಯಲ್ಲೂ ಗೆಲುವು ಗ್ಯಾರಂಟಿ..?

English summary
Democrats warned about Trump that ‘if they ignore trump this time, it will repeat again in future’ in Impeachments process at US Senate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X