ಅಮೆರಿಕದಲ್ಲೂ ಡೆಲ್ಟಾ ಈಗ ನಂ.1 ವೈರಸ್
ವಾಷಿಂಗ್ಟನ್, ಜುಲೈ 08: "ಡೆಲ್ಟಾ' ರೂಪಾಂತರಿ ಇದೀಗ ಅಮೆರಿಕದಲ್ಲೂ ನಂಬರ್ 1 ವೈರಸ್ ಆಗಿದೆ. ವಿಶ್ವದಲ್ಲೇ ಅತ್ಯಂತ ಹೆಚ್ಚು ಸಾಂಕ್ರಾಮಿಕ ಎಂಬ ಕುಖ್ಯಾತಿ ಹೊಂದಿರುವ, ಭಾರತದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ರೂಪಾಂತರಿ ಡೆಲ್ಟಾ ಅಮೆರಿಕದಲ್ಲೂ ಆತಂಕ ಸೃಷ್ಟಿಸಿದೆ.
ಅಮೆರಿಕದಲ್ಲಿ ಹೊಸದಾಗಿ ಪತ್ತೆಯಾಗುತ್ತಿರುವ ಕೋವಿಡ್ ಸೋಂಕಿತರ ಪೈಕಿ ಶೇ.51ಕ್ಕಿಂತಲೂ ಹೆಚ್ಚು ಪಾಲು ಡೆಲ್ಟಾ ರೂಪಾಂತರಿ ವೈರಸ್‌ನದ್ದು ಎಂದು ಸರ್ಕಾರ ಹೇಳಿದೆ. ಹೀಗಾಗಿ ಭಾರತದಲ್ಲಿ ಕೊರೊನಾ ಎರಡನೇ ಅಲೆಗೆ ಕಾರಣವಾದ ರೂಪಾಂತರಿ ಈಗ ಅಮೆರಿಕವನ್ನು ಆತಂಕಕ್ಕೆ ತಳ್ಳಿದೆ.
ಅಮೆರಿಕ ಮೂಲದ ಫೈಜರ್ ಮತ್ತು ಮಾಡೆರ್ನಾ ಲಸಿಕೆ ಪಡೆದವರು ಸೋಂಕಿಗೆ ತುತ್ತಾಗುವ ಸಾಧ್ಯತೆ ಶೇ.91ರಷ್ಟು ಕಡಿಮೆ ಎಂದು ಅಧ್ಯಯನವೊಂದು ತಿಳಿಸಿದೆ. ಲಸಿಕೆ ಪಡೆದವರಲ್ಲಿ ರೋಗ ಲಕ್ಷಣಗಳ ತೀವ್ರತೆ ಮತ್ತು ಸೋಂಕಿನಿಂದ ಬಳಲುವಿಕೆ ಅವಧಿಯನ್ನು ಲಸಿಕೆಗಳು ಕಡಿತಗೊಳಿಸುತ್ತವೆ ಎಂದು ವೈದ್ಯಕೀಯಕ್ಕೆ ಸಂಬಂಧಿಸಿದ ಇಂಗ್ಲೆಂಡ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ ತಿಳಿಸಲಾಗಿದೆ.

ಡೆಲ್ಟಾ ಬಗ್ಗೆ ಸಿಡಿಸಿ ವರದಿ ಹೇಳುವುದೇನು?
ಸಿಡಿಸಿ ವರದಿ ಪ್ರಕಾರ, ಅಮೆರಿಕದ ಪಶ್ಚಿಮ ರಾಜ್ಯಗಳಲ್ಲಿ ಡೆಲ್ಟಾ ಪಾಲು ಶೇ.75ರ ಸಮೀಪಕ್ಕೆ ಬಂದಿದೆ. ಇನ್ನು ದಕ್ಷಿಣದ ರಾಜ್ಯಗಳಲ್ಲಿ ಡೆಲ್ಟಾ ಪಾಲು ಸೇ.59ರ ಆಸುಪಾಸಿನಲ್ಲಿದೆ. ಒಟ್ಟಾರೆ ನೋಡಿದರೆ ಅಮೆರಿಕದಲ್ಲಿ ಇದೀಗ ಡೆಲ್ಟಾ ಪಾಲು ಶೇ.51.7, ಆಲ್ಫಾ ಪಾಲು ಶೇ.28.7 ಪಾಲಾಗಿದೆ ಎಂದು ವರದಿ ತಿಳಿಸಿದೆ.

ವೈದ್ಯಕೀಯ ಸಲಹೆಗಾರರು ಹೇಳಿದ್ದೇನು?
ಶ್ವೇತಭವನ ವೈದ್ಯಕೀಯ ಸಲಹೆಗಾರ ಮತ್ತು ರಾಷ್ಟ್ರೀಯ ಸಾಂಕ್ರಾಮಿಕ ರೋಗ ಸಂಸ್ಥೆಯ ಮುಖ್ಯಸ್ಥ ಡಾ. ಆಂಟೋನಿ ಫಾಸಿ ಮಾತನಾಡಿ, ""ಡೆಲ್ಟಾ ಕೇವಲ ಸಾಂಕ್ರಾಮಿಕ ಮಾತ್ರವಲ್ಲ, ಅದು ಗಂಭೀರ ಪ್ರಮಾಣದ ಸೋಂಕನ್ನೂ ಉಂಟುಮಾಡುತ್ತದೆ. ಲಸಿಕೆ ಪಡೆಯಲು ಏನಾದರೂ ಕಾರಣವಿದ್ದರೆ ಅದು ಇದೇ'' ಎಂದು ಅವರು ಡೆಲ್ಟಾದ ಅಪಾಯವನ್ನು ಒತ್ತಿ ಹೇಳಿದ್ದಾರೆ.

ಸೋಂಕಿಗೆ ತುತ್ತಾಗುವ ಸಾಧ್ಯತೆ ಕಡಿಮೆ
ಅಮೆರಿಕ ಮೂಲದ ಫೈಜರ್ ಮತ್ತು ಮಾಡೆರ್ನಾ ಲಸಿಕೆ ಪಡೆದವರು ಸೋಂಕಿಗೆ ತುತ್ತಾಗುವ ಸಾಧ್ಯತೆ ಶೇ.91ರಷ್ಟು ಕಡಿಮೆ ಎಂದು ಅಧ್ಯಯನವೊಂದು ತಿಳಿಸಿದೆ.
ಲಸಿಕೆ ಪಡೆದವರಲ್ಲಿ ರೋಗ ಲಕ್ಷಣಗಳ ತೀವ್ರತೆ ಮತ್ತು ಸೋಂಕಿನಿಂದ ಬಳಲುವಿಕೆ ಅವಧಿಯನ್ನು ಲಸಿಕೆಗಳು ಕಡಿತಗೊಳಿಸುತ್ತವೆ ಎಂದು ವೈದ್ಯಕೀಯಕ್ಕೆ ಸಂಬಂಧಿಸಿದ ಇಂಗ್ಲೆಂಡ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ ತಿಳಿಸಲಾಗಿದೆ.
ಡಿಸೆಂಬರ್‌ನಲ್ಲಿ ರೂಪಾಂತರಿ ಪತ್ತೆಯಾಗಿತ್ತು
ಬಿ.1.617.2 ಎಂದು ಗುರುತಿಸಲಾಗಿರುವ ಈ ಡೆಲ್ಟಾ ರೂಪಾಂತರಿ ವಿಶ್ವದಲ್ಲೇ ಮೊದಲ ಬಾರಿಗೆ ಕಳೆದ ಡಿಸೆಂಬರ್‌ನಲ್ಲಿ ಪತ್ತೆಯಾಗಿತ್ತು. ನಂತರ ಅದು ವಿಶ್ವವ್ಯಾಪಿಯಾಗಿ 100ಕ್ಕೂ ಹೆಚ್ಚು ದೇಶಗಳಿಗೆ ಹಬ್ಬಿತ್ತು. ಜತೆಗೆ ಇದು ಇದುವರೆಗೆ ಪತ್ತೆಯಾದ ರೂಪಾಂತರಿ ವೈರಸ್‌ಗಳ ಪೈಕಿ ಅತ್ಯಂತ ಹೆಚ್ಚು ಸಾಂಕ್ರಾಮಿಕ ಮತ್ತು ಅಪಾಯಕಾರಿ ಎಂದು ವೈದ್ಯರು ಘೋಷಿಸಿದ್ದರು.
ಅದರಲ್ಲೂ ಕೋವಿಡ್ ಲಸಿಕೆ ಪಡೆಯದೇ ಇದ್ದವರ ಮೇಲೆ ಅತ್ಯಂತ ಗಂಭೀರ ಪರಿಣಾಮವನ್ನು ಬೀರುತ್ತದೆ ಎಂದು ಎಚ್ಚರಿಸಿದ್ದರು.












Click it and Unblock the Notifications