• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕದಲ್ಲಿ ಕೊವಿಡ್‌ ರೋಗಿಗಳ ಮರಣ ಪ್ರಮಾಣ ಸುಧಾರಣೆ

|

ವಾಷಿಂಗ್ಟನ್,ಸೆಪ್ಟೆಂಬರ್ 21:ಅಮೆರಿಕಲ್ಲಿ ಕೊರೊನಾ ಸೋಂಕು ನಿತ್ಯ ಜನರನ್ನು ಕೊಲ್ಲುತ್ತಲೇ ಇದೆ.

ಆದರೆ ಸೋಂಕಿನ ಅಪಾಯಕಾರಿ ಗುಣಗಳನ್ನರಿತ ವೈದ್ಯರ ಆರೈಕೆಯಿಂದ ಮತ್ತು ಅನುಭವದಿಂದ ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚು ಮಾಡಬಹುದಾಗಿದೆ.

ಅಮೆರಿಕದಲ್ಲಿ ಮೊದಲ ಕೊರೊನಾ ಸೋಂಕಿತ ಪ್ರಕರಣ ಪತ್ತೆಯಾಗಿರುವ ದಿನದಿಂದ ವೈದ್ಯಕೀಯ ವೃತ್ತಿಪರರು ಸಂಶೋಧನೆಯಲ್ಲಿ ತೊಡಗಿದ್ದಾರೆ.

ಯಾವ ಔಷಧಗಳು ಹೇಗೆ ಕಾರ್ಯನಿರ್ವಹಿಸಬಲ್ಲದು ಎಂದು ಅವರು ಅರ್ಥಮಾಡಿಕೊಂಡಿದ್ದಾರೆ. ಸ್ಟೀರಾಯ್ಡ್ ಮತ್ತು ರಕ್ತ ತೆಳುವಾಗುವುದು, ಆಂಟಿ ವರಲ್ ಚಿಕಿತ್ಸೆಯ ಬಗ್ಗೆ ತಿಳಿದಿದೆ. ಹಾಗೆ ವೆಂಟಿಲೇಟರ್‌ಗಳನ್ನು ಕಡಿಮೆ ಬಳಕೆ ಮಾಡಿಯೂ ಸ್ವಂತವಾಗಿ ಉಸಿರಾಡುವಂತೆ ಮಾಡುವುದು ಹೇಗೆ ಎಂಬುದು ವೈದ್ಯರಿಗೆ ಗೊತ್ತಾಗಿದೆ.

ಕೊವಿಡ್ 19 ಹಾಗೂ ಸಾಮಾನ್ಯ ಜ್ವರದ ನಡುವೆ ವ್ಯತ್ಯಾಸವಿದೆಯೇ?ವೈದ್ಯರು ಏನಂತಾರೆ?

ವೈದ್ಯರು ಮತ್ತು ತಜ್ಞರು ಹೇಳುವ ಪ್ರಕಾರ ವೈದ್ಯಕೀಯ ತಂತ್ರಗಳು ಹಾಗೂ ಹಳೆಯ ವೈದ್ಯಕೀಯ ಪದ್ಧತಿಯಿಂದ ರೋಗಿಗಳನ್ನು ಗುಣ ಮಾಡುವುದು ಹೇಗೆ ಎಂಬುದನ್ನು ಅರ್ಥಮಾಡಿಕೊಂಡಿದ್ದಾರೆ.

ಫೆಬ್ರವರಿ ಮತ್ತು ಮಾರ್ಚ್‌ ತಿಂಗಳಿಗೆ ಹೋಲಿಸಿದರೆ ಆರೋಗ್ಯ ರಕ್ಷಣೆ ಸಿದ್ಧತೆ ಈಗ ಉತ್ತಮವಾಗಿದೆ. ಯಾವ ಔಷಧವನ್ನು ಬಳಸಬೇಕು, ಯಾವ ಔಷಧವನ್ನು ಬಳಸಬಾರದು ಎಂಬುದರ ಕುರಿತು ನಮಗೆ ಜ್ಞಾನ ಹೆಚ್ಚಿದೆ.

ನಮ್ಮಲ್ಲಿ ಹೆಚ್ಚು ಪ್ರಾಯೋಗಿಕ ಚಿಕಿತ್ಸೆಗಳು ಲಭ್ಯವಿದೆ. ಇವೆಲ್ಲವೂ ಮರಣ ಪ್ರಮಾಣದ ಸುಧಾರಣೆಗೆ ಕಾರಣವಾಗಿವೆ ಎಂದು ಮೇಯೋ ಕ್ಲಿನಿಕ್‌ನ ಆಂಡ್ರ್ಯೂ ಬ್ಯಾಡ್ಲಿ ಹೇಳಿದ್ದಾರೆ.

   Corona ಲಸಿಕೆ ಭಾರತದಲ್ಲಿ ಉತ್ಪಾದನೆ ಆದ ಬಳಿಕ ಇರುವ ಸವಾಲುಗಳೇನು ? | Oneindia Kannada

   ಮಾರ್ಚ್ ಮೊದಲಾರ್ಧದಲ್ಲಿ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಮರಣ ಪ್ರಮಾಣ ಶೇ.23 ಆಗಿತ್ತು. ಜೂನ್ ವೇಳೆಗೆ ಅದು ಶೇ.8ಕ್ಕೆ ಇಳಿದಿದೆ ಎಂದಿದ್ದಾರೆ.

   English summary
   Covid-19 continues to kill close to 1,000 Americans a day. But for those who develop dangerous cases of the infection, advances in medical care and the growing experience of doctors are improving the chances of survival.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X