• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನ್ಯೂಕ್ಲಿಯರ್ ದಾಳಿಗೆ ಟ್ರಂಪ್ ಸ್ಕೆಚ್..? ಅಧಿಕಾರ ಹೋಗಿದ್ದಕ್ಕೆ ರಿವೇಂಜ್..?

|

ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ್ಚಿ ಬಿಟ್ಟು ಮನೆಗೆ ಹೋಗುವಾಗಲೂ ಖತರ್ನಾಕ್ ಸ್ಕೆಚ್ ಹಾಕಿದ್ದಾರಾ ಎಂಬ ಆತಂಕ ಶುರುವಾಗಿದೆ. ಟ್ರಂಪ್ ತಮ್ಮ ಅಧಿಕಾರ ಅವಧಿಯ ಕೊನೇ ಘಳಿಗೆಯಲ್ಲಿ ಯಾರ ಮೇಲೆ ಬೇಕಾದರೂ ನ್ಯೂಕ್ಲಿಯರ್ ದಾಳಿ ನಡೆಸಬಹುದು ಎಂಬ ಆತಂಕ ಇದೆ.

ಸ್ಪೀಕರ್ ನ್ಯಾನ್ಸಿಗೂ ಈ ಭಯ ಕಾಡುತ್ತಿದೆ. ಇದೇ ಕಾರಣಕ್ಕೆ ನ್ಯಾನ್ಸಿ ಪೆಲೋಸಿ ಅಮೆರಿಕದ ಸೇನಾ ಮುಖ್ಯಸ್ಥರಿಗೆ ಕಾಲ್ ಮಾಡಿ, ಟ್ರಂಪ್ ಏನಾದರೂ ಈ ರೀತಿಯ ಖತರ್ನಾಕ್ ಪ್ಲಾನ್ ಮಾಡಿದ್ದಾರಾ..? ಎಂದು ಪ್ರಶ್ನಿಸಿದ್ದಾರೆ. ಅಮೆರಿಕದ ಸೇನಾ ಮುಖ್ಯಸ್ಥ ಜನರಲ್ ಮಾರ್ಕ್ ಮಿಲ್ಲೆಗೆ ಪೆಲೋಸಿ ಕಾಲ್ ಮಾಡಿರುವ ವಿಚಾರವನ್ನ, ಮಾರ್ಕ್ ಮಿಲ್ಲೆ ಆಪ್ತ ಸಹಾಯಕ ಸ್ಪಷ್ಟಪಡಿಸಿದ್ದಾರೆ.

ಕ್ಯಾಪಿಟಲ್ ಹಿಲ್ಸ್ ಬಳಿ ತ್ರಿವರ್ಣ ಧ್ವಜ ಹಿಡಿದವ ಟ್ರಂಪ್ ಭಕ್ತ!

ಮಾರ್ಕ್ ಮಿಲ್ಲೆ ಬಳಿ ಸ್ಪೀಕರ್ ಪೆಲೋಸಿ ಮಾತುಕತೆ ನಡೆಸುವ ವೇಳೆ, ಟ್ರಂಪ್ ಅಧಿಕಾರಕ್ಕೆ ಮೂಗುದಾರ ಹಾಕುವುದು ಹೇಗೆ ಎಂಬುದರ ಬಗ್ಗೆಯೂ ಪ್ರಶ್ನಿಸಿದ್ದಾರಂತೆ. ಏಕೆಂದರೆ ನ್ಯೂಕ್ಲಿಯರ್ ದಾಳಿ ನಡೆಸುವ ಅಧಿಕಾರ ಅಮೆರಿಕದ ಅಧ್ಯಕ್ಷರಿಗೆ ಮಾತ್ರ ಇರುತ್ತದೆ. ಟ್ರಂಪ್ ತನ್ನ ಅಧಿಕಾರ ಹೋಯ್ತು ಎಂಬ ಕಾರಣಕ್ಕೆ ರಿವೇಂಜ್ ತೆಗೆದುಕೊಳ್ಳಲು ಇರಾನ್, ಉತ್ತರ ಕೊರಿಯಾದಂತಹ ರಾಷ್ಟ್ರಗಳ ಮೇಲೆ ಯುದ್ಧ ಸಾರಿದರೂ ಸಾರಬಹುದು.

 ಕಾನೂನು ಏನು ಹೇಳುತ್ತೆ..?

ಕಾನೂನು ಏನು ಹೇಳುತ್ತೆ..?

ಅಷ್ಟಕ್ಕೂ ಅಮೆರಿಕದ ಕಾನೂನಿನಲ್ಲಿ ನ್ಯೂಕ್ಲಿಯರ್ ವೆಪನ್ಸ್ ಅಥವಾ ಅಣ್ವಸ್ತ್ರ ಬಳಕೆಯ ಪರಮೋಚ್ಛ ಅಧಿಕಾರ ಇರುವುದು ಅಧ್ಯಕ್ಷನಿಗೆ ಮಾತ್ರ. ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕನ್ನರು ವಿನಾಶಕಾರಿ ಅಸ್ತ್ರ ನ್ಯೂಕ್ಲಿಯರ್ ಬಾಂಬ್ ಸಂಶೋಧನೆ ಮಾಡಿದ್ದರು. ಅದನ್ನು ಮೊದಲು ಹಾಗೂ ಕೊನೆಯ ಬಾರಿಗೆ ಪ್ರಯೋಗ ಮಾಡಿದ್ದು ಜಪಾನ್ ಮೇಲೆ. ಹೀಗೆ ಅಂದಿನಿಂದಲೂ ಅಮೆರಿಕ ಅಧ್ಯಕ್ಷರಿಗೆ ಮಾತ್ರ ನ್ಯೂಕ್ಲಿಯರ್ ಬಾಂಬ್‌ನ ಬಳಸುವ ಅಧಿಕಾರ ಇದೆ. ಇದಕ್ಕೆ ಅಮೆರಿಕ ಅಧ್ಯಕ್ಷರು ಯಾರ ಬಳಿಯೂ ಅನುಮತಿಯನ್ನ ಪಡೆಯಬೇಕಿಲ್ಲ. ಅಮೆರಿಕದ ಕಾಂಗ್ರೆಸ್ ಸದಸ್ಯರು ಕೂಡ ಈ ಅಧಿಕಾರವನ್ನು ಕಿತ್ತುಕೊಳ್ಳಲು ಆಗುವುದಿಲ್ಲ.

 ಮಿಲಿಟರಿ ಮನಸ್ಸು ಮಾಡಬೇಕು..!

ಮಿಲಿಟರಿ ಮನಸ್ಸು ಮಾಡಬೇಕು..!

ಅಕಸ್ಮಾತ್ ಟ್ರಂಪ್ ನ್ಯೂಕ್ಲಿಯರ್ ದಾಳಿಗೆ ಅಮೆರಿಕ ಸೇನೆಗೆ ಆದೇಶ ನೀಡಿದರೂ ಅದನ್ನ ತಪ್ಪಿಸಲು ಸಾಧ್ಯ ಇರುವುದು ಮಿಲಿಟರಿ ಮುಖ್ಯಸ್ಥನಿಗೆ ಮಾತ್ರ. ಏಕೆಂದರೆ ಸೇನಾ ಮುಖ್ಯಸ್ಥನಿಗೆ ಅಧ್ಯಕ್ಷನ ನಿರ್ಧಾರ ಅಮೆರಿಕದ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ ಎನ್ನುವಂತಿದ್ದರೆ ಇಂತಹ ನಿರ್ಧಾರ ಕೈಗೊಳ್ಳಬಹುದು. ಅಲ್ಲದೆ ಅಧ್ಯಕ್ಷ ನೀಡುವ ಆದೇಶ ಕಾನೂನಾತ್ಮಕ ಅಲ್ಲ, ಇದರಿಂದ ದೇಶಕ್ಕೆ ಅಪಾಯ ಎದುರಾಗಲಿದೆ ಎಂಬ ಸಂದರ್ಭದಲ್ಲಿ ಇಂತಹ ನಿರ್ಧಾರ ಕೈಗೊಂಡು ಅಧ್ಯಕ್ಷರ ಆದೇಶ ತಿರಸ್ಕರಿಸಬಹುದು. ಈ ಆಯಾಮದಲ್ಲಿ ನೋಡುವುದಾದರೆ ಟ್ರಂಪ್ ನ್ಯೂಕ್ಲಿಯರ್ ದಾಳಿಗೆ ಆದೇಶಿಸಿದರೆ, ಅದನ್ನ ತಪ್ಪಿಸಲು ಸಾಧ್ಯವಿರುವುದು ಮಾರ್ಕ್ ಮಿಲ್ಲೆಗೆ ಮಾತ್ರ.

ಪ್ರಜಾಪ್ರಭುತ್ವದ ಪವಿತ್ರ ಸ್ಥಳದಲ್ಲಿ ಟ್ರಂಪ್ ಬೆಂಬಲಿಗರಿಂದ ಹೇಸಿಗೆ ಕೃತ್ಯ!

ಶತ್ರುಗಳು ಸುಮ್ಮನೆ ಬಿಡ್ತಾರಾ..?

ಶತ್ರುಗಳು ಸುಮ್ಮನೆ ಬಿಡ್ತಾರಾ..?

ಟ್ರಂಪ್ ಮಾತು ಕೇಳಿಕೊಂಡು ಅಕಸ್ಮಾತ್ ಅಮೆರಿಕ ಮಿಲಿಟರಿ ಅಣು ಬಾಂಬ್ ಪ್ರಯೋಗ ಮಾಡಿದರೆ, ಶತ್ರು ರಾಷ್ಟ್ರಗಳು ಸೈಲೆಂಟ್ ಆಗಿ ಇರ್ತಾವಾ..? ಇಲ್ಲ ಇಲ್ಲ ದಾಳಿ ಮಾಡಿಸಿದ್ದು ಟ್ರಂಪ್, ನಮ್ಮದು ತಪ್ಪಿಲ್ಲ ಅಂತಾ ನೂತನ ಅಧ್ಯಕ್ಷ ಬೈಡನ್ ಸಮಜಾಯಿಷಿ ನೀಡಿದರೆ ಬಾಂಬ್ ತಿಂದವರು ಸುಮ್ಮನಾಗ್ತಾರಾ..? ಇಲ್ಲ ಖಂಡಿತಾ ಇಲ್ಲ. ಅವರೆಲ್ಲಾ ಸೇರಿ ಅಮೆರಿಕ ಎಂಬ ದೇಶವನ್ನೇ ನಿರ್ಣಾಮ ಮಾಡಲು ಮುಂದಾಗುತ್ತಾರೆ. ಹೀಗಾಗಿ ಸದ್ಯದ ಸ್ಥಿತಿ ಆತಂಕಕಾರಿ ಹಾಗೂ ಭಯದ ವಾತಾವರಣ ಸೃಷ್ಟಿಸಿದೆ. ಮೊದಲೇ ಎಡವಟ್ಟುಗಳ ಸರದಾರ ಟ್ರಂಪ್, ಈ ಬಾರಿ ಅಧಿಕಾರ ಹೋಯ್ತು ಅಂತಾ ರಿವೇಂಜ್ ತೆಗೆದುಕೊಂಡರೆ ಅಮೆರಿಕ ಈ ಜಗತ್ತಿನ ಭೂಪಟದಿಂದ ಅಳಿಸಿ ಹೋಗುವುದು 100 ಪರ್ಸೆಂಟ್ ಗ್ಯಾರಂಟಿ.

ಬೆಂಬಲಿಗರ ಮನಸ್ಸಲ್ಲಿ ಬೆಂಕಿ ಹಚ್ಚಿದ್ದಾರೆ

ಬೆಂಬಲಿಗರ ಮನಸ್ಸಲ್ಲಿ ಬೆಂಕಿ ಹಚ್ಚಿದ್ದಾರೆ

ಅಮೆರಿಕದ ಸಂಸತ್ ಕಟ್ಟಡ ಕ್ಯಾಪಿಟಲ್ ಹಿಲ್ ಮೇಲೆ ಟ್ರಂಪ್ & ಗ್ಯಾಂಗ್ ಅಟ್ಯಾಕ್ ಮಾಡಿದೆ. ಕ್ಯಾಪಿಟಲ್ ಹಿಲ್ ಗಲಭೆಗೂ ಮುನ್ನ ಡೊನಾಲ್ಡ್ ಟ್ರಂಪ್ ನಡೆಸಿದ ಪ್ರಚೋದನಾಕಾರಿ ಭಾಷಣ, ಬೆಂಬಲಿಗರನ್ನೆಲ್ಲಾ ಒಳಗೆ ನುಗ್ಗುವಂತೆ ಪ್ರೇರಿಪಿಸಿತ್ತು. ಹೀಗೆ ಸಂಸತ್ ಕಟ್ಟಡದ ಒಳಗೆ ನುಗ್ಗಿದ ಟ್ರಂಪ್ ಬೆಂಬಲಿಗರು ಕೈಯಲ್ಲಿ ದೊಣ್ಣೆ, ಗನ್ ಸೇರಿದಂತೆ ಹಲವು ಮಾರಕಾಸ್ತ್ರಗಳನ್ನ ಹಿಡಿದಿದ್ದರು. ಅಷ್ಟು ಮಾತ್ರವಲ್ಲ ಸಂಸತ್ ಸದಸ್ಯರು ಕೂರುವ ಜಾಗದಲ್ಲಿ ಕೂತು ಸಿಗರೇಟ್ ಸೇದಿದ್ದಾರೆ, ಸಿಗಾರ್ ಹೊಡೆದಿದ್ದಾರೆ. ಬೆಂಬಲಿಗರನ್ನೇ ಇಷ್ಟು ಪ್ರಚೋದಿಸಿರುವ ಟ್ರಂಪ್, ಅಮೆರಿಕದ ಕಥೆ ಮುಗಿಸಲು ನ್ಯೂಕ್ಲಿಯರ್ ದಾಳಿ ನಡೆಸೋದಿಲ್ಲ ಅನ್ನೋದಕ್ಕೆ ಏನ್ ಗ್ಯಾರಂಟಿ..? ಎಂಬುದು ಅಮೆರಿಕದ ವಿಪಕ್ಷ ನಾಯಕರ ಪ್ರಶ್ನೆಯಾಗಿದೆ.

ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಟ್ರಂಪ್ ಬರದಿರುವುದೇ ಒಳ್ಳೆ ವಿಷಯ ಎಂದ ಬೈಡನ್

English summary
Another concern rises about Trump in US over launch of a nuclear weapon. Nancy Pelosi's concern about Trump potentially ordering launch of a nuclear weapon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X