ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ನವೆಂಬರ್ ಅಂತ್ಯಕ್ಕೆ 2 ಕೊವಿಡ್ ಲಸಿಕೆಗಳ ನಿರೀಕ್ಷೆ

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 17: ಅಮೆರಿಕವು ನವೆಂಬರ್ ಅಂತ್ಯಕ್ಕೆ ಎರಡು ಕೊರೊನಾ ಲಸಿಕೆಗಳನ್ನು ಎದುರು ನೋಡುತ್ತಿದೆ.

ಅಮೆರಿಕದ ಎರಡು ಕಂಪನಿಗಳು ನವೆಂಬರ್ ಅಂತ್ಯದ ವೇಳೆಗೆ ತಮ್ಮ ಕೊವಿಡ್ 19 ಲಸಿಕೆಗಳಿಗೆ ತುರ್ತು ಅನುಮೋದನೆಗಾಗಿ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ.

ಅಮೆರಿಕದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆ ಆರಂಭವಾಗಿದ್ದು, 80 ಲಕ್ಷ ಜನರನ್ನು ಸಮೀಪಿಸುತ್ತಿದೆ.ಸಧ್ಯದ ಮಟ್ಟಿಗೆ ಅಮೆರಿಕಲ್ಲಿ ಮಾಡೆರ್ನಾ ಹಾಗೂ ಪಿಫೈಜರ್ ಲಸಿಕೆಯ ರೇಸ್‌ನಲ್ಲಿವೆ.

Vaccine

ನವೆಂಬರ್ 3ಕ್ಕೆ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಚುನಾವಣೆ ಮುಗಿದು ಎರಡು ವಾರಗಳ ನಂತರ ಲಸಿಕೆಯ ಸುರಕ್ಷತಾ ಮಾಹಿತಿ ಲಭ್ಯವಾಗಲಿದೆ. ಬಳಿಕ ಲಸಿಕೆಯೊಂದಿಗೆ ಮುಂದುವರೆಯುವ ಭರವಸೆ ಇದೆ ಎಂದು ಪಿಫೈಜರ್ ತಿಳಿಸಿದೆ.

ರೆಮ್‌ಡೆಸಿವಿರ್ ಕೊವಿಡ್ ರೋಗಿಗಳ ಮರಣ ಪ್ರಮಾಣ ಕಡಿತಗೊಳಿಸುವುದಿಲ್ಲರೆಮ್‌ಡೆಸಿವಿರ್ ಕೊವಿಡ್ ರೋಗಿಗಳ ಮರಣ ಪ್ರಮಾಣ ಕಡಿತಗೊಳಿಸುವುದಿಲ್ಲ

ಅಮೆರಿಕವು ಈ ವರ್ಷದ ಅಂತ್ಯದ ವೇಳೆಗೆ ಎರಡು ಲಸಿಕೆಗಳನ್ನು ಸಿದ್ಧಪಡಿಸಬಹುದು.ಮ್ಯಾಸಚೂಸೆಟ್ಸ್ ಬಯೋಟೆಕ್ ಸಂಸ್ಥೆ ಮಾಡೆರ್ನಾ ನವೆಂಬರ್ 25ರ ವೇಳೆಗೆ ಅನುಮೋದನೆ ಪಡೆಯಲು ನಿರ್ಧರಿಸಿದೆ.

ಸಕಾರಾತ್ಮಕ ದತ್ತಾಂಶಗಳು ಲಭ್ಯವಾದರೆ ಪಿಫೈಜರ್‌ ಲಸಿಕೆಯನ್ನು ತುರ್ತು ಬಳಕೆಗಾಗಿ ಮನವಿ ಮಾಡಲಾಗುತ್ತದೆ. ಒಮ್ಮೆ ಲಸಿಕೆಗೆ ಒಪ್ಪಿಗೆ ಸಿಕ್ಕರೂ ಕೂಡ ಲಸಿಕೆ ಜನರನ್ನು ತಲುಪಲು ಹಲವು ತಿಂಗಳುಗಳು ಬೇಕಾಗುತ್ತದೆ.

ಲಸಿಕೆ ಕೂಡ ಎಷ್ಟು ಪರಿಣಾಮಕಾರಿ ಎಂಬುದು ತಿಳಿದಿಲ್ಲದ ಕಾರಣ ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಪದೇ ಪದೇ ಕೈತೊಳೆಯುವುದನ್ನು ಮರೆಯಬೇಡಿ.

Recommended Video

Political Popcorn with Lavanya : Dr BL Shankar, ನನ್ ಜೀವನದಲ್ಲಿ ನಾನು ಮಾಡಿದ ಎರಡು ತಪ್ಪು ಯಾವುದು ಗೊತ್ತಾ??

ಅಮೆರಿಕದಲ್ಲಿ 80 ಲಕ್ಷ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 217,000 ಮಂದಿ ಸಾವನ್ನಪ್ಪಿದ್ದಾರೆ.

English summary
Two American companies expect to apply for emergency approval for their Covid-19 vaccines by late November, welcome news as the US hits a third surge of its coronavirus epidemic and approaches its eight millionth case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X