• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ವೈರಸ್‌ಗೆ ಬಲಿಯಾದ ಬ್ರಿಟಿಷ್ ನಟಿ

|

ವಾಷಿಂಗ್ಟನ್, ಏಪ್ರಿಲ್ 11: ಬ್ರಿಟಿಷ್ ನಟಿ Hilary Heath ಕೊರೊನಾದಿಂದ ಮೃತಪಟ್ಟಿದ್ದಾರೆ. 74 ವರ್ಷ ಈ ನಟಿ ಮಾರಕ ವೈರಸ್‌ಗೆ ಬಲಿಯಾಗಿದ್ದಾರೆ.

'ವಿಚ್ ಫಿಂಡರ್ ಜನರಲ್' ಹಾರರ್ ಸಿನಿಮಾದ ಮೂಲಕ ನಟಿ Hilary Heath ದೊಡ್ಡ ಜನಪ್ರಿಯತೆ ಪಡೆದುಕೊಂಡಿದ್ದರು. ನಟಿ ಜೊತೆಗೆ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದರು. ಹಾಲಿವುಡ್ ವರದಿಗಳ ಪ್ರಕಾರ Hilary Heath ಕಳೆದ ವಾರ ನಿಧನ ಹೊಂದಿದ್ದಾರೆ.

ವಿಶ್ವದಾದ್ಯಂತ ಕೊರೊನಾ ಮರಣ ಮೃದಂಗ: ಲಕ್ಷ ಮಂದಿ ಸಾವು

Hilary Heath ಯುಕೆನಲ್ಲಿ 1945ರಲ್ಲಿ ಜನಿಸಿದ್ದರು. 'ಮೈಕಲ್ ರೀವ್ಸ್' ಅವರ ಮೊದಲ ಸಿನಿಮಾವಾಗಿತ್ತು. ಆ ನಂತರ 'ದಿ ಒಬ್ಲಾನ್ಗ್ ಬಾಕ್ಸ್, ಕ್ರೈ ಆ ದಿ ಬಾಂಶೀ ಅಸ ಆ ಮಿಸ್ಟ್ರೆಸ್ಸ್', 'ಟು ಜಂಟಲ್ ಮ್ಯಾನ್ ಶೇರಿಂಗ್' ಸಿನಿಮಾಗಳು ಸೇರಿದಂತೆ ಐದಾರು ಸಿನಿಮಾಗಳಲ್ಲಿ ನಟಿಸಿದರು.

ತಮ್ಮ ಪತಿ, ಟ್ಯಾಲೆಂಟ್ ಏಜೆಂಟ್ ಡಂಕನ್ ಹೀತ್ ಅವರೊಂದಿಗೆ, ಅವರು 1984 ರಲ್ಲಿ ಒಂದು ಏಜೆನ್ಸಿ ಶುರು ಮಾಡಿದ್ದರು. ಈ ಏಜೆನ್ಸಿ ನಂತರ ICM ಸಂಸ್ಥೆಗೆ ಮಾರಾಟವಾಯ್ತು.

ಅಂದಹಾಗೆ, ಅಮೆರಿಕದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. 5 ಲಕ್ಷ ಪಾಸಿಟಿವ್ ಪ್ರಕರಣಗಳು ದೃಢವಾಗಿವೆ. 18 ಸಾವಿರ ಜನರು ಮರಣ ಹೊಂದಿದ್ದಾರೆ.

English summary
British actress, Witchfinder General movie fame Hilary Heath of complications from coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X