ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಹಿರಿಯ ಅಧ್ಯಕ್ಷ ಬೈಡನ್

ವಾಷಿಂಗ್ಟನ್, ನ.8: ಭಾರಿ ಕುತೂಹಲ ಕೆರಳಿಸಿದ್ದ ಯುಎಸ್ ಅಧ್ಯಕ್ಷರ ಆಯ್ಕೆಯಲ್ಲಿ ಮಹತ್ವದ ಪಾತ್ರವಹಿಸಿದ್ದ ಪೆನ್ಸಿಲ್ವೇನಿಯಾವನ್ನು ಗೆಲ್ಲುವ ಮೂಲಕ ಬೈಡನ್ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ತಮ್ಮ ಸ್ವಂತ ಪ್ರಾಂತ್ಯ ಪೆನ್ಸಿಲ್ವೇಲಿಯಾದ ಫಲಿತಾಂಶ ಹೊರಬರುತ್ತಿದ್ದಂತೆ ಜೋ ಬೈಡನ್ ಅವರು ಹರ್ಷದಿಂದ ಸಂತಸದ ಹಂಚಿಕೊಂಡು ಅಮೆರಿಕದ ನೂತನ ಅಧ್ಯಕ್ಷರಾಗಲು ಸಜ್ಜಾದರು.

Recommended Video

      Joe Biden ಅಧ್ಯಕ್ಷರಾಗುತ್ತಿದ್ದ ಹಾಗೆಯೇ ಭಾರತೀಯರಿಗೆ ಸಂತಸದ ಸುದ್ದಿ | Oneindia Kannada

      ಕಳೆದ ಒಂದು ವರ್ಷದಿಂದ ಅಮೆರಿಕದಲ್ಲಿ ಹೊಸ ಬದಲಾವಣೆ ತರುವ ಆಸೆ ಹುಟ್ಟಿಸಿದ ಬೈಡನ್ ಇಳಿವಯಸ್ಸಿನಲ್ಲೂ ಪ್ರಚಾರ ಕಾರ್ಯದಲ್ಲಿ ಖುದ್ದು ಪಾಲ್ಗೊಂಡು ಎಲ್ಲರ ಗಮನ ಸೆಳೆದಿದ್ದರು.

      ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿ ಮುಗಿಯಲಿದೆ. ಬಳಿಕ ಬೈಡನ್ ಅಧಿಕಾರ ಸ್ವೀಕರಿಸಲಿದ್ದಾರೆ. ನವೆಂಬರ್ 20ರಂದು 78ನೇ ವರ್ಷಕ್ಕೆ ಕಾಲಿಡಲಿರುವ ಬೈಡನ್, ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷ ಎನಿಸಿಕೊಳ್ಳಲಿದ್ದಾರೆ.

      At 78 Joe Biden the oldest President of US

      ಕ್ಯಾಥೊಲಿಕ್ ಕುಟುಂಬದಲ್ಲಿ 1942ರ ನವೆಂಬರ್ 20ರಂದು ಜನಿಸಿದ ಜೋಸೆಫ್ ಬೈಡನ್ ಅವರು ಮೂರನೇ ಪ್ರಯತ್ನದಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಯಶಸ್ಸು ಕಂಡಿದ್ದಾರೆ. ಸದ್ಯದ ಮಾಹಿತಿಯಂತೆ ಜನವರಿ 20, 2021ರಂದು ಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡನ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ ಹಿರಿಯ ವಯಸ್ಸಿನ ಅಧ್ಯಕ್ಷರೆನಿಸಲಿದ್ದಾರೆ. ವಯೋಮಿತಿ ವಿಷಯದಲ್ಲೂ ಹಾಲಿ ಅಧ್ಯಕ್ಷ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ರನ್ನು ಜೋ ಬೈಡನ್ ಹಿಂದಿಕ್ಕಿದ್ದಾರೆ.

      ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ 45ನೇ ಅಧ್ಯಕ್ಷರಾಗಿ ಜನವರಿ 2017ರಲ್ಲಿ ಅಧಿಕಾರ ಸ್ವೀಕರಿಸಿದಾಗ ಅವರಿಗೆ 70 ವರ್ಷ 220 ದಿನಗಳಾಗಿತ್ತು. ಈ ದಾಖಲೆಯನ್ನು ಬೈಡನ್ ಅಳಿಸಿ ಹಾಕಲಿದ್ದಾರೆ. ಜೊತೆಗೆ ಅಮೆರಿಕಾದ ಇತಿಹಾಸದಲ್ಲಿ ಆರನೇ ಕಿರಿಯ ಸೆನೆಟರ್, ನಾಲ್ಕನೇ ಹಿರಿಯ ಸೆನೆಟರ್ ಎಂಬ ದಾಖಲೆಯನ್ನು ಹೊಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+