• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕಾದಲ್ಲಿ 'ಖಾಕಿ'ಗಳೇ ಪ್ರತಿಭಟನಾಕಾರರ ಎದುರು ಮಂಡಿಯೂರಿದ್ದೇಕೆ?

|

ವಾಶಿಂಗ್ಟನ್, ಜೂನ್.01: "ಅಯ್ಯೋ ನನ್ನನ್ನು ಬಿಟ್ಟು ಬಿಡಿ, ಉಸಿರಾಡುವುದಕ್ಕೂ ಆಗುತ್ತಿಲ್ಲ ಪ್ಲೀಸ್. ನನ್ನನ್ನು ಕೊಲ್ಲಬೇಡಿ" ಬಾರಿ ಬಾರಿ ಹೀಗೆ ಅಂಗಲಾಚಿದರೂ ಆ ಪೊಲೀಸಪ್ಪನಿಗೆ ಮನಸು ಕರಗಲೇ ಇಲ್ಲ. ಕುತ್ತಿಗೆ ಮೇಲಿದ್ದ ಮಂಡಿಯನ್ನು ಆತ ತೆಗೆಯಲಿಲ್ಲ. ಕೊನೆಗೆ ಬಿಳಿ ಪೊಲೀಸಪ್ಪನ ಕಾಲಡಿಗೆ ಸಿಕ್ಕು ಜಾರ್ಜ್ ಫ್ಲೋಯ್ಡಾ ಎಂಬ ಆಮಾಯಕ ವ್ಯಕ್ತಿ ಪ್ರಾಣ ಬಿಟ್ಟನು.

ಕಳೆದ ವಾರವಷ್ಟೇ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಮಿನ್ನಿಯಾಪೊಲೀಸ್ ಎಂಬಲ್ಲಿ ನಡೆದ ಇದೊಂದು ಘಟನೆ ಇಂದು ವಿಶ್ವದ ದೊಡ್ಡಣ್ಣನ ನೆಲದಲ್ಲಿ ಕ್ರಾಂತಿಯ ಕಿಚ್ಚು ಹೊತ್ತಿಸಿದೆ. ಬಿಳಿ ಪೊಲೀಸರ ವಿರುದ್ಧ ಕಪ್ಪು ಜನಾಂಗದ ಜನರು ರಣಕಹಳೆ ಮೊಳಗಿಸುವಂತೆ ಮಾಡಿದೆ.

ಅಮೇರಿಕದಲ್ಲಿ ಹಿಂಸಾತ್ಮಕ ಪ್ರತಿಭಟನೆ: 40 ಸಿಟಿಗಳಲ್ಲಿ ಕರ್ಫ್ಯೂ ಜಾರಿ.!ಅಮೇರಿಕದಲ್ಲಿ ಹಿಂಸಾತ್ಮಕ ಪ್ರತಿಭಟನೆ: 40 ಸಿಟಿಗಳಲ್ಲಿ ಕರ್ಫ್ಯೂ ಜಾರಿ.!

ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆಯಿಂದ ಮೊದಲೇ ಹೈರಾಣಾಗಿರುವ ಅಮೆರಿಕಾದಲ್ಲಿ ಇದೊಂದು ಘಟನೆಯು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ 15ಕ್ಕೂ ಹೆಚ್ಚು ಪ್ರದೇಶಗಳು ಪ್ರತಿಭಟನೆಯ ಕಿಚ್ಚಿನಿಂದ ಸಂಪೂರ್ಣ ಸ್ತಬ್ಧಗೊಂಡಿವೆ.

ಒಂದು ಕಡೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಘರ್ಷ ನಡೆಯುತ್ತಿದೆ. ಆದರೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಎಲ್ಲ ಭಾಗಗಳಲ್ಲೂ ಒಂದೇ ರೀತಿಯಾದ ಸನ್ನಿವೇಶವಿಲ್ಲ. ಕೆಲವು ಕಡೆಗಳಲ್ಲಿ ಸ್ವತಃ ಬಿಳಿ ಪೊಲೀಸರೇ ಕಪ್ಪು ವರ್ಣೀಯರ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಕ್ರೌರ್ಯ ತೋರಿದ ಪೊಲೀಸ್ ಅಧಿಕಾರಿ ಅರೆಸ್ಟ್

ಕ್ರೌರ್ಯ ತೋರಿದ ಪೊಲೀಸ್ ಅಧಿಕಾರಿ ಅರೆಸ್ಟ್

ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್ ಫ್ಲೋಯ್ಡ್ ಮೇಲೆ ಅಮಾನವೀಯವಾಗಿ ದೌರ್ಜನ್ಯವೆಸಗಿದ ಪೊಲೀಸ್ ಅಧಿಕಾರಿ ದೆರಕ್ ಚೌವಿನ್ ರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ. ಅಲ್ಲದೇ ಪೊಲೀಸ್ ಅಧಿಕಾರಿಯಾಗಿದ್ದುಕೊಂಡು ಇಂಥ ಕೆಲಸ ಮಾಡಿರುವ ತಪ್ಪಿಗೆ ದೆರಕ್ ಚೌವಿನ್ ರನ್ನು ಬಂಧಿಸಲಾಗಿದೆ. ಇನ್ನೊಂದು ಕಡೆಯಲ್ಲಿ ಜಾರ್ಜ್ ಫ್ಲೋಯ್ಡ್ ಸಾವನ್ನು ವಿರೋಧಿಸಿ ಬೀದಿಗಿಳಿದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ತೆಗೆದುಕೊಂಡ ಕ್ರಮ ಉಗ್ರವಾಗಿತ್ತು ಎಂದು ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಆ ಮೂಲಕ ಹೋರಾಟಕ್ಕೆ ತಾವೂ ಸಹ ಬೆಂಬಲಿಸುವುದಾಗಿ ಸಂದೇಶ ಸಾರಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯಿಂದ ಜಾರ್ಜ್ ಫ್ಲೋಯ್ಡ್ ಸಾವಿಗೆ ಸಂತಾಪ

ಹಿರಿಯ ಪೊಲೀಸ್ ಅಧಿಕಾರಿಯಿಂದ ಜಾರ್ಜ್ ಫ್ಲೋಯ್ಡ್ ಸಾವಿಗೆ ಸಂತಾಪ

ಜಾರ್ಜ್ ಫ್ಲೋಯ್ಡ್ ಸಾವಿಗೆ ಗೌರವ ಸಲ್ಲಿಸುವ ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಸ್ವತಃ ಮಿನ್ನಿಯಾಪೊಲೀಸ್ ಮುಖ್ಯ ಪೊಲೀಸ್ ಅಧಿಕಾರಿ ಮೆದಾರಿಯಾ ಅರ್ರದೊಂಡೊ ಭಾಗಿಯಾಗಿ ಮೃತನ ಸಾವಿಗೆ ಸಂತಾಪ ಸೂಚಿಸಿದರು. ಜಾರ್ಜ್ ಫ್ಲೋಯ್ಡ್ ಕಪ್ ಫುಡ್ ಸ್ಟೋರ್ ಎದುರಿನಲ್ಲಿ ಮಂಡಿಯೂರಿ ಗೌರವ ಸಲ್ಲಿಸಿದರು.

ಜಾರ್ಜ್ ಫ್ಲೋಯ್ಡ್ ಮೃತದೇಹಕ್ಕೆ ಭದ್ರತೆ ಒದಗಿಸಿದ ಖಾಕಿ

ಜಾರ್ಜ್ ಫ್ಲೋಯ್ಡ್ ಮೃತದೇಹಕ್ಕೆ ಭದ್ರತೆ ಒದಗಿಸಿದ ಖಾಕಿ

ಬಿಳಿ ಪೊಲೀಸರ ಕಾಲಡಿಯಲ್ಲಿ ಸಿಲುಕಿ ಪ್ರಾಣ ಬಿಟ್ಟ ಜಾರ್ಜ್ ಫ್ಲೋಯ್ಡ್ ಮೃತದೇಹವನ್ನು ಆತನ ಸ್ವಂತ ಊರು ಹ್ಯೂಸ್ಟನ್ ಗೆ ತೆಗೆದುಕೊಂಡು ಹೋಗಲಾಯಿತು. ಈ ವೇಳೆ ಅಲ್ಲಿ ಪೊಲೀಸ್ ಮುಖ್ಯಸ್ಥರಾಗಿರುವ ಆರ್ಟ್ ಅಚಿವೆಡೋ ಜಾರ್ಜ್ ಫ್ಲೋಯ್ಡ್ ಮೃತದೇಹಕ್ಕೆ ಎಸ್ಕಾರ್ಟ್ ವ್ಯವಸ್ಥೆ ಕಲ್ಪಿಸಿದರು. ಪ್ರತಿಭಟನಾಕಾರರ ಜೊತೆಯಲ್ಲೇ ಪೊಲೀಸ್ ಮುಖ್ಯಸ್ಥರು ನಡೆದುಕೊಂಡು ಹೋಗಿದ್ದು ವಿಶೇಷವಾಗಿತ್ತು.

ಜಾರ್ಜ್ ಫ್ಲೋಯ್ಡ್ ಸಾವಿನಿಂದ ಹೊತ್ತಿತಾ ಬದಲಾವಣೆ ಕಿಡಿ?

ಜಾರ್ಜ್ ಫ್ಲೋಯ್ಡ್ ಸಾವಿನಿಂದ ಹೊತ್ತಿತಾ ಬದಲಾವಣೆ ಕಿಡಿ?

ಕಪ್ಪು ವರ್ಣೀಯ ವ್ಯಕ್ತಿಯಾಗಿದ್ದ ಜಾರ್ಜ್ ಫ್ಲೋಯ್ಡ್ ಕುಟುಂಬದವರಿಗೆ ರಕ್ಷಣೆ ನೀಡಬೇಕಾಗಿದೆ. ಏಕೆಂದರೆ ದೇಶಾದ್ಯಂತ ಜಾರ್ಜ್ ಫ್ಲೋಯ್ಡ್ ಸಾವಿನಿಂದ ಬದಲಾವಣೆ ಕಿಡಿ ಹೊತ್ತಿಕೊಂಡಿದೆ. ಇದು ಬಿಳಿಯರು ಮತ್ತು ಕಪ್ಪು ವರ್ಣೀಯರ ಮಧ್ಯೆ ಸಂಧಿಕಾಲವಾಗಿದೆ ಎಂದು ಪೊಲೀಸ್ ಮುಖ್ಯಸ್ಥರಾಗಿರುವ ಆರ್ಟ್ ಅಚಿವೆಡೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಾಂತಿಯ ಸಂದೇಶ ಸಾರಲು ಒಗ್ಗಟ್ಟಿನ ಮಂತ್ರ

ಶಾಂತಿಯ ಸಂದೇಶ ಸಾರಲು ಒಗ್ಗಟ್ಟಿನ ಮಂತ್ರ

ಇನ್ನು, ಜಾರ್ಜ್ ಫ್ಲೋಯ್ಡ್ ಸಾವು ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಕಾಮದೇನ್ ಮೆಟ್ರೋ ಪೊಲೀಸ್ ಮುಖ್ಯಸ್ಥ ಜೋಯ್ ವೈಸೋಸ್ಕಿ ಕೂಡಾ ನ್ಯೂಜೆರ್ಸಿ ಪ್ರದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಒಗ್ಗಟ್ಟಿನ ಮೂಲಕ ಶಾಂತಿಯ ಸಂದೇಶವನ್ನು ಸಾರಬೇಕಿದೆ ಎಂದು ಜೋಯ್ ವೈಸೋಸ್ಕಿ ತಿಳಿಸಿದ್ದಾರೆ.

ವಿಶ್ವದ ದೊಡ್ಡಣ್ಣನ ನೆಲದಲ್ಲಿ ಮಂಡಿಯೂರಿದ ಖಾಕಿ

ವಿಶ್ವದ ದೊಡ್ಡಣ್ಣನ ನೆಲದಲ್ಲಿ ಮಂಡಿಯೂರಿದ ಖಾಕಿ

ಜಾರ್ಜ್ ಫ್ಲೋಯ್ಡ್ ಸಾವಿನ ನಂತರ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಾದ್ಯಂತ ಉಗ್ರ ಪ್ರತಿಭಟನೆಗಳು ನಡೆಯುತ್ತಿವೆ. ವಾಶಿಂಗ್ಟನ್ ನ ಸ್ಪೋಕನ್ ಕಂಟ್ರಿ ಎಂಬಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಪ್ಪು ವರ್ಣೀಯರ ಎದುರಿಗೆ ಪೊಲೀಸರು ಮಂಡಿಯೂರಿ ನಿಂತಿದ್ದರು. ಈ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಒಬ್ಬ ಬಿಳಿ ಪೊಲೀಸ್ ಮಾಡಿದ ತಪ್ಪಿನಿಂದ ಖಾಕಿ ಪಡೆಯು ಪ್ರತಿಭಟನಾಕಾರರ ಎದುರು ಕ್ಷಮೆಯಾಚಿಸುವ ಉದ್ದೇಶದಿಂದ ಮಂಡಿಯೂರಿ ನಿಂತಿದ್ದರು.

ವೈಟ್ ಹೌಸ್ ಅಂಡರ್ ಗ್ರೌಂಡ್ ಗೆ ಅಮೆರಿಕಾ ಅಧ್ಯಕ್ಷರು!

ವೈಟ್ ಹೌಸ್ ಅಂಡರ್ ಗ್ರೌಂಡ್ ಗೆ ಅಮೆರಿಕಾ ಅಧ್ಯಕ್ಷರು!

ಮೇ.31ರಂದು ಅಮೆರಿಕಾದ ವೈಟ್ ಹೌಸ್ ಮುಂದೆ ನಡೆಸಿದ ಪ್ರತಿಭಟನೆಯು ಉಗ್ರ ಸ್ವರೂಪಕ್ಕೆ ತಿರುಗಿತು. ಈ ವೇಳೆ 11 ಮೆಟ್ರೋಪಾಲಿಟನ್ ಪೊಲೀಸ್ ಡಿಪಾರ್ಟ್ಮೆಂಟ್ ಅಧಿಕಾರಿಗಳೂ ಸೇರಿ 60 ಸೀಕ್ರೆಟ್ ಸರ್ವೀಸ್ ಸಿಬ್ಬಂದಿಯು ಗಾಯಗೊಂಡರು. ವೈಟ್ ಹೌಸ್ ಮುಂದೆ ಪ್ರತಿಭಟನೆ ಕಾವೇರುತ್ತಿದ್ದಂತೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಸ್ವಲ್ಪ ಸಮಯದವರೆಗೆ ವೈಟ್ ಹೌಸ್ ನ ಅಂಡರ್ ಗ್ರೌಂಡ್ ಬಂಕರ್ ನಲ್ಲಿ ಇರಿಸಲಾಗಿತ್ತು ಎಂದು ಹೇಳಲಾಗಿದೆ.

ಲೂಕಸ್ ನಲ್ಲಿ ಹಿಂಸಾಚಾರ ನಡೆಸಿದ 85 ಮಂದಿ ಬಂಧನ

ಲೂಕಸ್ ನಲ್ಲಿ ಹಿಂಸಾಚಾರ ನಡೆಸಿದ 85 ಮಂದಿ ಬಂಧನ

ಜಾರ್ಜ್ ಫ್ಲೋಯ್ಡ್ ಸಾವನ್ನು ಖಂಡಿಸಿ ಮೇ.31ರಂದು ಲೂಕಸ್ ನಗರದಲ್ಲೂ ಪ್ರತಿಭಟನೆಗಳು ನಡೆದವು. ಬಹುತೇಕ ಜನರು ಶಾಂತಿಯುತವಾಗಿಯೇ ಹೋರಾಟ ನಡೆಸುತ್ತಿದ್ದರು. ಆದರೆ ಈ ಪೈಕಿ ಕೆಲವು ದುಷ್ಕರ್ಮಿಗಳು ಶಾಂತಿಯುತ ಹೋರಾಟಕ್ಕೆ ಭಂಗ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇದುವರೆಗೂ ಲೂಕಸ್ ನಗರವೊಂದರಲ್ಲೇ 85ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ದೇಶಾದ್ಯಂತ 1,400ಕ್ಕೂ ಅಧಿಕ ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.

24 ರಾಜ್ಯಗಳಲ್ಲಿ 60 ಸಾವಿರ ಯೋಧರ ನಿಯೋಜನೆ

24 ರಾಜ್ಯಗಳಲ್ಲಿ 60 ಸಾವಿರ ಯೋಧರ ನಿಯೋಜನೆ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಹಿಂಸಾಚಾರವು ಮಿತಿ ಮೀರುತ್ತಿದ್ದು ಪರಿಸ್ಥಿತಿ ನಿಯಂತ್ರಿಸುವ ಉದ್ದೇಶದಿಂದ ಯೋಧರನ್ನು ಕರೆಸಿಕೊಳ್ಳಲಾಗುತ್ತಿದೆ. .24 ರಾಜ್ಯಗಳಲ್ಲಿ 60,000 ಯೋಧರನ್ನು ನಿಯೋಜಿಸಲಾಗಿದ್ದು, ವಾಶಿಂಗ್ಟನ್ ಒಂದರಲ್ಲೇ 1,700ಕ್ಕೂ ಹೆಚ್ಚು ಯೋಧರನ್ನು ಭದ್ರತೆಗಾಗಿ ಕರೆಸಿಕೊಳ್ಳಲಾಗಿದೆ.

English summary
America: Clash Between Police And Protesters In Some Cities, Other Officers Joined The Movement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X