ಉರಿಯುವ ಬೆಂಕಿಗೆ ತುಪ್ಪ ಸುರಿದ ಟ್ರಂಪ್, ಹಿಂಸಾಚಾರಕ್ಕೆ ಮಾಜಿ ಅಧ್ಯಕ್ಷರ ಪ್ರಚೋದನೆ..?
ಜನವರಿ 6ರಂದು ಅಮೆರಿಕದ ಕ್ಯಾಪಿಟಲ್ ಹಿಲ್ ಧಗಧಗಿಸುವ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಏನು ಮಾಡಿದ್ದರು ಎಂಬುದನ್ನು, ಸಂಸದರು ಬಿಡಿಸಿ ಬಿಡಿಸಿ ಹೇಳುತ್ತಿದ್ದಾರೆ. ಇದೀಗ ಟ್ರಂಪ್ ಮಾಡಿದ್ದ ಮತ್ತೊಂದು ಮಹಾ ಎಡವಟ್ಟು ಬಟಾಬಯಲಾಗಿದೆ. ಅಂದಹಾಗೆ ಜನವರಿ 6ರಂದು ದಿಢೀರ್ ಟ್ರಂಪ್‌ರ ಬೆಂಬಲಿಗ ಪಡೆ ರೊಚ್ಚಿಗೆದ್ದು 'ಕ್ಯಾಪಿಟಲ್ ಹಿಲ್'ಗೆ ನುಗ್ಗಿ ಹಿಂಸೆ ನಡೆಸುವಾಗ ನಡೆದಿದ್ದ ಫೋನ್ ಸಂಭಾಷಣೆ ವಿವಾದದ ಅಲೆ ಎಬ್ಬಿಸಿದೆ.
ಅಮೆರಿಕನ್ ಕಾಂಗ್ರೆಸ್‌ನ ರಿಪಬ್ಲಿಕನ್ ಸದಸ್ಯ ಕೆವಿನ್ ಮೆಕಾರ್ಥಿ ಹಾಗೂ ಟ್ರಂಪ್ ನಡುವಿನ ಈ ಮೊಬೈಲ್ ಸಂಭಾಷಣೆ ಕಿಚ್ಚು ಹೊತ್ತಿಸಿದೆ. ಟ್ರಂಪ್ ಬೆಂಬಲಿಗರು ಅಮೆರಿಕದ ಸಂಸತ್ ಕಟ್ಟಡ 'ಕ್ಯಾಪಿಟಲ್ ಹಿಲ್'ನಲ್ಲಿ ಹುಚ್ಚರಂತೆ ಆಡುವಾಗ ಖುದ್ದು ಕೆವಿನ್ ಮೆಕಾರ್ಥಿ ಟ್ರಂಪ್‌ಗೆ ಕಾಲ್ ಮಾಡಿದ್ದರಂತೆ.
ಮೊದಲಿಗೆ ಕೆವಿನ್ ಮೆಕಾರ್ಥಿ ನಿನ್ನ ಬೆಂಗಲಿಗರನ್ನು ಸುಮ್ಮನಿರಲು ಹೇಳು ಎಂದು ಟ್ರಂಪ್‌ಗೆ ಕೇಳಿದ್ದಾರೆ. ಆದರೆ ಟ್ರಂಪ್ ತನಗೆ ಏನೂ ಗೊತ್ತಿಲ್ಲ ಎಂಬಂತೆ ಉತ್ತರ ಕೊಟ್ಟಿದ್ದಾರೆ. ಆದರೆ ಒತ್ತಾಯ ಮಾಡಿದಾಗ, ನೋಡು ಮೆಕಾರ್ಥಿ ಅವರೆಲ್ಲಾ ಚುನಾವಣೆ ಅಕ್ರಮದ ಬಗ್ಗೆ ನಿನಗಿಂತ ಹೆಚ್ಚು ಕೋಪಗೊಂಡಿದ್ದಾರೆ. ನೀನು ಸುಮ್ಮನಿರು ಎಂದಿದ್ದಾರೆ ಟ್ರಂಪ್. ಈ ಮಾತುಗಳಿಂದ ರೊಚ್ಚಿಗೆದ್ದ ಕೆವಿನ್ ಮೆಕಾರ್ಥಿ ಟ್ರಂಪ್‌ಗೆ ಬಾಯಿಗೆ ಬಂದಂತೆ ಬೈದಿದ್ದರಂತೆ.

ಸ್ವಂತ ಪಕ್ಷದವರೇ ಮಾನ ಕಳೆದರು..!
ಡೊನಾಲ್ಡ್ ಟ್ರಂಪ್ ಅಕ್ಷರಶಃ ಈಗ ಅನಾಥ. ಟ್ರಂಪ್ ಬೆಂಬಲಕ್ಕೆ ಸ್ವಂತ ಪಕ್ಷದವರು ಕೂಡ ನಿಲ್ಲುತ್ತಿಲ್ಲ. ಕೆಲ ತಿಂಗಳ ಹಿಂದೆ ಟ್ರಂಪ್, ಟ್ರಂಪ್ ಅಂತಾ ಗಂಟಲು ಹರಿಯುವಂತೆ ಕೂಗುತ್ತಿದ್ದವರೇ ಇದೀಗ 'ಅವನ್ಯಾರು' ಎಂಬಂತೆ ವರ್ತಿಸುತ್ತಿದ್ದಾರೆ. ಇದೇ ರೀತಿ ಕೆವಿನ್ ಮೆಕಾರ್ಥಿ ಕೂಡ ರೊಚ್ಚಿಗೆದ್ದಿದ್ದಾರೆ. ಹಿಂಸಾಚಾರ ನಡೆದಿದ್ದ ದಿನ ಟ್ರಂಪ್ ಮತ್ತು ಕೆವಿನ್ ಮೆಕಾರ್ಥಿ ನಡುವೆ ನಡೆದಿದ್ದ ಮೊಬೈಲ್ ಫೋನ್ ಸಂಭಾಷಣೆಯನ್ನು ರಿವೀಲ್ ಮಾಡಲಾಗಿದೆ. ಟ್ರಂಪ್ ಹೇಗೆ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ ಎಂಬುದು ಬಟಾಬಯಲಾಗಿದೆ.

ಸೆನೆಟ್ ಒಳಗೆ ಟ್ರಂಪ್ ವಿಡಿಯೋ
ಅಮೆರಿಕದ ಸೆನೆಟ್ ಹಿಂದೆ ಎಂದೂ ಕಾಣದ ಹಲವು ವಿಚಿತ್ರಗಳನ್ನು ಇದೀಗ ಕಾಣುತ್ತಿದೆ. ಸೆನೆಟ್‌ನಲ್ಲಿ ಟ್ರಂಪ್ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ಆರಂಭವಾಗಿದ್ದರೆ, ಮತ್ತೊಂದ್ಕಡೆ ಟ್ರಂಪ್ ಮಾಡಿದ ಎಡವಟ್ಟಿನ ವಿಡಿಯೋ ಕ್ಲಿಪ್‌ಗಳು ಸೆನೆಟ್‌ನ ಪ್ರೊಜೆಕ್ಟರ್‌ಗಳಲ್ಲಿ ರಾರಾಜಿಸುತ್ತಿವೆ. ಸೆನೆಟ್ ಸದಸ್ಯರು ಹಿಂಸಾಚಾರಕ್ಕೆ ಟ್ರಂಪ್ ಹೇಗೆಲ್ಲಾ ಪ್ರೋತ್ಸಾಹ ನೀಡಿದ್ದರು ಎಂಬುದನ್ನ ಪ್ರೂವ್ ಮಾಡಲು ಹಲವು ವಿಡಿಯೋ ಕ್ಲಿಪ್‌ಗಳನ್ನು ತೋರಿಸುತ್ತಿದ್ದಾರೆ. ಈ ಪೈಕಿ ಕ್ಯಾಪಿಟಲ್ ಹಿಲ್ ಗಲಾಟೆಗೂ ಮುನ್ನ ಟ್ರಂಪ್ ಮಾಡಿದ ಭಾಷಣದ ತುಣುಕು ಹೈಪ್ ಆಗುತ್ತಿದೆ.

ಟ್ರಂಪ್ ವಿರುದ್ಧ ವಾಗ್ದಂಡನೆಗೆ ಕಾರಣ..?
ಬೇಕೆ ಬೇಕು ನ್ಯಾಯ ಬೇಕು, ಅನ್ಯಾಯ ಅನ್ಯಾಯ ಟ್ರಂಪ್‌ಗೆ ಅನ್ಯಾಯ ಅಂತೆಲ್ಲಾ ಟ್ರಂಪ್ ಬೆಂಬಲಿಗರು ಕಳೆದ ತಿಂಗಳು ಅರಚಾಡಿ, ಕಿರಚಾಟ ನಡೆಸುತ್ತಾ ಅಮೆರಿಕದ ಸಂಸತ್ ಸಭೆಗಳು ನಡೆಯುವ ಕ್ಯಾಪಿಟಲ್ ಹಿಲ್‌ಗೆ ನುಗ್ಗಿದ್ದರು. ಹಿಂಸಾಚಾರ ನಡೆಯುವುದಕ್ಕೆ ಮುನ್ನ ಟ್ರಂಪ್ ಬೆಂಬಲಿಗರನ್ನ ಉದ್ದೇಶಿಸಿ ಮಾತನಾಡಿದ್ದ ಭಾಷಣ ಪ್ರಚೋದನಕಾರಿ ಆಗಿತ್ತು ಎಂಬ ಆರೋಪ ಅಮೆರಿಕ ಸಂಸದರದ್ದು. ಈ ಕಾರಣಕ್ಕೆ ಟ್ರಂಪ್ ವಿರುದ್ಧ ವಾಗ್ದಂಡನೆ ನಡೆಯಲಿ ಎಂದು ಪಟ್ಟು ಹಿಡಿದಿದ್ದರು ಡೆಮಾಕ್ರಟಿಕ್ ಪಕ್ಷದ ಸದಸ್ಯರು. ಇದಕ್ಕೆ ಸ್ವತಃ ಟ್ರಂಪ್ ಪಕ್ಷ ರಿಪಬ್ಲಿಕನ್ ಪಾರ್ಟಿ ಸದಸ್ಯರ ಬೆಂಬಲ ಕೂಡ ಇತ್ತು. ಕೆಳಮನೆಯಲ್ಲಿ ಗೆದ್ದು, ಈಗ ಸೆನೆಟ್‌ನಲ್ಲಿ ಟ್ರಂಪ್ ವಿರುದ್ಧದ ವಾಗ್ದಂಡನೆ ಹೋರಾಟ ಮುಂದುವರಿಸಿದರೂ ಟ್ರಂಪ್ ಜಯಿಸಿಕೊಂಡಿದ್ದಾರೆ.

ಚುನಾವಣೆ ವಿಚಾರಕ್ಕೆ ಕಿರಿಕ್..!
2020ರ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಹೀನಾಯವಾಗಿ ಸೋತಿದ್ದರೂ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದರು. ಆದರೆ ಟ್ರಂಪ್ ಆರೋಪಕ್ಕೆ ಯಾವುದೇ ಸಾಕ್ಷಿ ಇರಲಿಲ್ಲ. ಆದರೂ ತಾವು ಅಧಿಕಾರ ತ್ಯಜಿಸುವುದಿಲ್ಲ ಎಂದು ಟ್ರಂಪ್ ಹಠ ಹಿಡಿದಿದ್ದರು. ಈ ನಡುವೆ ವೈಟ್‌ಹೌಸ್ (ಅಧ್ಯಕ್ಷರ ನಿವಾಸ) ಎದುರು ಜನವರಿ 6ರಂದು ಬೆಂಬಲಿಗರ ಜೊತೆ ಬಹಿರಂಗ ಸಭೆ ನಡೆಸಿದ್ದ ಟ್ರಂಪ್, ಅವರನ್ನ ರೊಚ್ಚಿಗೆಬ್ಬಿಸುವ ಕೆಲಸ ಮಾಡಿದ್ದರು. ಇನ್ನು ಟ್ರಂಪ್ ಮಾತು ಕೇಳಿ ಉನ್ಮಾದಕ್ಕೆ ಒಳಗಾದ ಟ್ರಂಪ್ ಬೆಂಬಲಿಗರು, ಅಮೆರಿಕದ ಸಂಸತ್ ಕಟ್ಟಡ ಇರುವ ಕ್ಯಾಪಿಟಲ್ ಹಿಲ್‌ಗೆ ನುಗ್ಗಿ ಹಿಂಸೆ ನಡೆಸಿದ್ದರು.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications