ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ: ಏಪ್ರಿಲ್ 19ರೊಳಗೆ ಶೇ.90ರಷ್ಟು ವಯಸ್ಕರಿಗೆ ಕೊರೊನಾ ಲಸಿಕೆ

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 30: ಅಮೆರಿಕದಲ್ಲಿ ಏಪ್ರಿಲ್ 19ರೊಳಗೆ ಶೇ.90ರಷ್ಟು ವಯಸ್ಕರಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.

60 ದಿನಗಳಲ್ಲಿ ದೇಶದ 10 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಮುಂದಿನ 40 ದಿನಗಳಲ್ಲಿ ಇನ್ನೂ 10 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡುವ ಗುರಿಯೊಂದಿಗೆ ಕಾರ್ಯಾಚರಣೆ ನಡೆಯುತ್ತಿದೆ. ಇದೇ ಭರವಸೆಯೊಂದಿಗೆ ಅಧ್ಯಕ್ಷರು ಈ ಮಾತು ನೀಡಿದ್ದಾರೆ.

ಮಕ್ಕಳ ಮೇಲೆ ಕೊರೊನಾ ಲಸಿಕೆ ಪರೀಕ್ಷೆ ಆರಂಭಿಸಿದ ಫೈಜರ್, ಬಯೋಎನ್‌ಟೆಕ್ಮಕ್ಕಳ ಮೇಲೆ ಕೊರೊನಾ ಲಸಿಕೆ ಪರೀಕ್ಷೆ ಆರಂಭಿಸಿದ ಫೈಜರ್, ಬಯೋಎನ್‌ಟೆಕ್

ಅಮೆರಿಕದಲ್ಲಿ ಪ್ರತಿನಿತ್ಯ 60ಸಾವಿರದಷ್ಟು ಹೊಸ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಹೀಗಾಗಿ ಈ ಸಾಂಕ್ರಾಮಿಕವನ್ನು ನಿಯಂತ್ರಿಸಲು ಬೈಡನ್ ಆಡಳಿತ ಹೆಚ್ಚು ಗಮನ ಹರಿಸಿದೆ ಎಂದು ಹೇಳಲಾಗುತ್ತಿದೆ.

90 Percent US Adults To Be Eligible For Vaccine By April 19, Says Joe Biden

ಅಮೆರಿಕದಲ್ಲಿ ಎಲ್ಲಾ ಅರ್ಹ ವಯಸ್ಕರಲ್ಲಿ ಶೇ.90 ಮಂದಿ ಏಪ್ರಿಲ್ 19ರೊಳಗೆ ಪಡೆಯಲಿದ್ದಾರೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ಇನ್ನು ಮೂರು ವಾರಗಳಲ್ಲಿ ಇಷ್ಟು ಜನರು ಲಸಿಕೆ ಪಡೆಯಲಿದ್ದಾರೆ. ಅಷ್ಟು ಮಂದಿಗೆ ಪೂರೈಸುವಷ್ಟು ಲಸಿಕೆ ನಮ್ಮಲ್ಲಿ ಲಭ್ಯವಿದೆ ಎಂದು ಬೈಡನ್ ತಿಳಿಸಿದ್ದಾರೆ.

ಕೋವಿಡ್​-19 ವೈರಸ್​ ಮೂಲ ಪತ್ತೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಹಾಗು ಚೀನಾ ಅಧ್ಯಯನ ತಂಡ ಜಂಟಿ ಪತ್ತೆ ಕಾರ್ಯ ಕೈಗೊಂಡಿದೆ. ಈ ವೈರಸ್ ಪ್ರಾಣಿಗಳ ಮೂಲಕ ಬಾವುಲಿಗಳಿಂದ ಮನುಷ್ಯರಿಗೆ ಹರಡುವುದು ಸಾಧ್ಯವಿದೆ. ಲ್ಯಾಬ್‌ನಿಂದ ಸೋರಿಕೆ 'ಅಸಂಭವ' ಎಂದಿದೆ ಎಂಬ ಕರಡು ನಕಲು ಅಸೋಸಿಯೇಟೆಡ್ ಪ್ರೆಸ್(AP) ಪಡೆದುಕೊಂಡಿದೆ ಎಂದು ವರದಿಯಾಗಿದೆ.

ಅಧ್ಯಯನ ತಂಡದ ಆವಿಷ್ಕಾರಗಳು ವೈರಸ್ ಮೊದಲು ಹೇಗೆ ಹೊರಹೊಮ್ಮಿತು ಎಂಬುದರ ಕುರಿತು ಹೊಸ ಒಳನೋಟ ನೀಡುತ್ತದೆ. ಆದರೆ, ಅನೇಕ ಪ್ರಶ್ನೆಗಳಿಗೆ ಅದು ಉತ್ತರವನ್ನು ನೀಡುತ್ತಿಲ್ಲ. ವರದಿಯು ಸಂಶೋಧಕರ ತೀರ್ಮಾನಗಳ ಹಿಂದಿನ ತಾರ್ಕಿಕತೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುತ್ತದೆ.

Recommended Video

#Covid 19 Update: ಒಂದೇ ದಿನದಲ್ಲಿ ದೇಶದಲ್ಲಿ 68,020 ಜನರಿಗೆ ಕೊರೊನಾ ದೃಢ..! | Oneindia Kannada

English summary
President Joe Biden has announced that 90 percent of the adults in the US would be eligible for COVID-19 vaccination by April 19 and the final 10 percent no later than May 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X