Get Updates
Get notified of breaking news, exclusive insights, and must-see stories!

Vijayapura Lok Sabha Election: ಐತಿಹಾಸಿಕ ನಗರಿ ವಿಜಯಪುರ ಲೋಕಸಭಾ ಕ್ಷೇತ್ರ ಪರಿಚಯ

12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರ ಜನ್ಮಸ್ಥಳ, 10-11ನೇ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರಿಂದ ಸ್ಥಾಪಿತವಾದ ಬಿಜ್ಜನಹಳ್ಳಿ. ಭಾಸ್ಕರಾಚಾರ್ಯರು, ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿಯ ನೆಲ ವಿಜಯಪುರ. ಈ ಗುಮ್ಮಟ ನಗರಿ ವಿಜಯಪುರ ಲೋಕಸಭಾ ಕ್ಷೇತ್ರ ಸದ್ಯ ಚುನಾವಣೆಗೆ ಸಜ್ಜಾಗುತ್ತಿದೆ.

ವಿಜಯಪುರ ಲೋಕಸಭಾ ಕ್ಷೇತ್ರವು ಈ ಬಾರಿ 18ನೇ ಲೋಕಸಭೆ ಚುನಾವಣೆಯನ್ನು ಎದುರಿಸಲಿದೆ. ಮೂರು-ನಾಲ್ಕು ದಶಕದ ಹಿಂದೆ ರಾಜ್ಯದೆಲ್ಲೆಡೆ ಕಾಂಗ್ರೆಸ್‌ ಪ್ರಬಲವಾಗಿರುವ ಹೊತ್ತಿನಲ್ಲೂ ಸಹ ಇಲ್ಲಿ ಕಾಂಗ್ರೆಸ್‌ ಸತತವಾಗಿ ಗೆಲ್ಲಲು ವಿಫಲವಾಗಿತ್ತು. ಎಲ್ಲಾ ಮುಂಚೂಣಿಯ ಪಕ್ಷಗಳಿಗೂ ಅವಕಾಶ ನೀಡಿರುವ ಇಲ್ಲಿನ ಮತದಾರರು ಕಳೆದ ಐದು ಚುನಾವಣೆಗಳಲ್ಲಿ ಬಿಜೆಪಿಗೇ ಮತ ಹಾಕಿದ್ದಾರೆ.

Vijayapura Lok Sabha Elections 2024 Analysis Candidates List Results and Probable Winners

ದೆಹಲಿಯ ಖಿಲ್ಜಿ ಸುಲ್ತಾನರು, ಬಹಮನಿ ಸುಲ್ತಾನರು, ಮೊಘಲ್‌ ಸಾಮ್ರಾಟರು, ಹೈದರಾಬಾದಿನ ನಿಜಾಮರಿಂದ ಆಳಿಸಿಕೊಳ್ಳಲ್ಪಟ್ಟ ಈ ಜಿಲ್ಲೆಯು ಇಂಡೋ-ಇಸ್ಲಾಂ ಕಲೆ, ಸಂಸ್ಕೃತಿಗೆ ಸಾಕ್ಷಿಯಾಗಿದೆ. ಸರ್ವ ಧರ್ಮ ಸಮನ್ವಯದ ಈ ನೆಲದಲ್ಲಿ ರಾಜಕೀಯವಾಗಿ ಯಾವುದೇ ಒಂದೇ ಪಕ್ಷ ಹೆಚ್ಚಿನ ಸಮಯ ಪಾರುಪತ್ಯ ಸಾಧಿಸಲು ಆಗಿಲ್ಲವೆಂಬುದು ವಿಶೇಷ. ಬಿಜೆಪಿ ಮಾತ್ರ ಸತತ ಐದು ಬಾರಿ ಗೆದ್ದು ಪಾರುಪತ್ಯ ಸಾಧಿಸುವತ್ತ ಹೆಜ್ಜೆ ಹಾಕುತ್ತಿದೆ.

ಈ ವರೆಗೆ 17 ಲೋಕಸಭೆ ಚುನಾವಣೆ ಕಂಡಿರುವ ವಿಜಯಪುರದಲ್ಲಿ ಏಳು ಬಾರಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ವಿಜಯ ಸಾಧಿಸಿದ್ದಾರೆ ಒಮ್ಮೆ ಕಾಂಗ್ರೆಸ್‌ (ಐ) ನ ಅಭ್ಯರ್ಥಿ ಗೆದ್ದಿದ್ದಾರೆ. ಒಮ್ಮೆ ಜನತಾ ದಳ, ಒಮ್ಮೆ ಸ್ವತಂತ್ರ್ಯ ಪಕ್ಷ, ಒಮ್ಮೆ ಪಕ್ಷೇತರ ಅಭ್ಯರ್ಥಿ ಜಯ ಸಾಧಿಸಿದ್ದಾರೆ. ಜನತಾ ಪಕ್ಷ ಒಮ್ಮೆ ಜಯಗಳಿಸಿದ್ದರೆ, ಬಿಜೆಪಿ ಐದು ಬಾರಿ ಜಯಗಳಿಸಿದೆ.

ಬಿಜೆಪಿ ಟಿಕೆಟ್ ಯಾರಿಗೆ?

ಕಳೆದ ಐದು ಲೋಕಸಭೆ ಚುನಾವಣೆಯಲ್ಲಿ ಇಲ್ಲಿ ಬಿಜೆಪಿಯ ಅಭ್ಯರ್ಥಿಗಳೇ ಗೆದ್ದು ಲೋಕಸಭೆಗೆ ತೆರಳಿದ್ದಾರೆ. ಮೊದಲೆರಡು ಬಾರಿ ಬಿಜೆಪಿಯ ಫೈರ್‌ಬ್ರಾಂಡ್ ಸಂಸದ ಬಸವರಾಜ ಪಾಟೀಲ್ ಯಾತ್ನಾಳ್ ಗೆದ್ದಿದ್ದರೆ, ಪ್ರಸ್ತುತ ರಮೇಶ ಚಂದಪ್ಪ ಜಿಗಜಿಣಗಿ ಅವರು ಸಂಸದರಾಗಿದ್ದಾರೆ. ವಿಜಯಪುರದ ಸಂಸದ ರಮೇಶ ಜಿಗಜಣಗಿ ಅವರು ಹಲವು ಬಾರಿ ಸಂಸದರಾಗಿ ಆಯ್ಕೆ ಆಗಿರುವ ಅನುಭವಿ ಸಂಸತ್ ಪಟು. ಹೀಗಾಗಿ ಈ ಬಾರಿ ವಿಜಯಪುರ ಲೋಕಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ರಮೇಶ ಜಿಗಜಣಗಿಗೆ ಟಿಕೆಟ್ ನೀಡಿದೆ.

Vijayapura Lok Sabha Elections 2024 Analysis Candidates List Results and Probable Winners

ವಿಜಯಪುರ ಲೋಕಸಭಾ ಕ್ಷೇತ್ರವು, ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಡಲಲ್ಲಿ ಇಟ್ಟುಕೊಂಡಿದೆ. ಬಬಲೇಶ್ವರ, ಇಂಡಿ, ಬಸವನಬಾಗೇವಾಡಿ, ಮುದ್ದೆಬಿಹಾಳ, ವಿಜಯಪುರ ನಗರ, ಸಿಂಧಗಿ, ನಾಗಠಾಣಾ, ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರಗಳ ಮತದಾರರು ವಿಜಯಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ಮತ ಹಾಕುತ್ತಾರೆ. ವಿಜಯಪುರ ಲೋಕಸಭಾ ಕ್ಷೇತ್ರದ ಅಡಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್‌ ಸಮವಾದ ಶಕ್ತಿ ಹೊಂದಿವೆ. ಜೆಡಿಎಸ್‌ ಸಹ ಬಲವಾಗಿಯೇ ಇದೆ. ಆದರೆ ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಜೆಡಿಎಸ್‌ ಮತಗಳು ಬಿಜೆಪಿಗೆ ಸೇರಲಿವೆ.

ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ

ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಕಾಂಗ್ರೆಸ್ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಘಟಕದ ಹಾಲಿ ಅಧ್ಯಕ್ಷರೂ ಆಗಿರುವ ರಾಜು ಆಲಗೂರ ಅವರು ಜಿಲ್ಲೆಯಲ್ಲಿ ಪ್ರಬಲವಾಗಿರುವ ಬಲಗೈ (ಚಲುವಾದಿ)ಸಮುದಾಯಕ್ಕೆ ಸೇರಿದವರಾಗಿದ್ದಾರೆ.

Vijayapura Lok Sabha Elections 2024 Analysis Candidates List Results and Probable Winners

ಈ ಹಿಂದೆ 1999-2004ರಲ್ಲಿ ಬಳ್ಳೊಳ್ಳಿ ಮೀಸಲು ವಿಧಾನಸಭಾ ಕ್ಷೇತ್ರ ಹಾಗೂ 2013-18ರ ಅವಧಿಯಲ್ಲಿ ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದರು. ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮ(ಕೆಎಸ್‌ಡಿಎಲ್)ದ ಅಧ್ಯಕ್ಷರಾಗಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿಯೂ ಆಲಗೂರ ಕಾರ್ಯನಿರ್ವಹಿಸಿದ್ದಾರೆ.

ರೈತ ಪರ, ದಲಿತಪರ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ ಅವರು, ಜಿಲ್ಲೆಯಲ್ಲಿ ನಡೆದ ಅನೇಕ ಹೋರಾಟಗಳ ನೇತೃತ್ವವನ್ನು ವಹಿಸಿದ್ದರು. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸದ್ಯ ಆರು ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಇದೆ. ಕಾಂಗ್ರೆಸ್‌ ಟಿಕೆಟ್‌ಗಾಗಿ ಹತ್ತಾರು ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಲಾಬಿ ನಡೆಸಿದರೂ ಕಾಂಗ್ರೆಸ್ ಹೈಕಮಾಂಡ್ ರಾಜು ಆಲಗೂರ ಅವರ ಹೆಸರನ್ನು ಅಂತಿಮಗೊಳಿಸಿದೆ.

2014-2019ರಲ್ಲಿ ನಡೆದ ಲೋಕಸಭಾ ಚುನಾವಣೆ

ಬಿಜಾಪುರ ಲೋಕಸಭೆ ಕ್ಷೇತ್ರ, ಕರ್ನಾಟಕ ರಾಜ್ಯದ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಒಂದು. ಬಿಜಾಪುರ ಕ್ಷೇತ್ರದ ಹಾಲಿ ಸಂಸದ ಬಿಜೆಪಿಯ ರಮೇಶ ಜಿಗಜಿಣಗಿ ಆಗಿದ್ದಾರೆ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ರಮೇಶ ಜಿಗಜಿಣಗಿ ಅವರು ಭಾರತೀಯ ಜನತಾ ಪಾರ್ಟಿ ಪಕ್ಷದ ಪ್ರಕಾಶ ರಾಥೋಡ್ ಅವರನ್ನು 69,818 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು.

Vijayapura Lok Sabha Elections 2024 Analysis Candidates List Results and Probable Winners

ಇನ್ನೂ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಸುನೀತಾ ದೇವಾನಂದ ಚವ್ಹಾಣ್ ವಿರುದ್ಧ 6,35,867 ಮತಗಳಿಂದ ರಮೇಶ ಜಿಗಜಿಣಗಿ ಜಯ ಸಾಧಿಸಿದ್ದರು. ಹೀಗಾಗಿ ಸೋಲಿಲ್ಲದ ಸರದಾರ ರಮೇಶ ಜಿಗಜಿಣಗಿಗೇ ಈ ಬಾರಿ ಬಿಜೆಪಿ ಟಿಕೆಟ್ ನೀಡಿದೆ.

ಮತದಾರರ ಸಂಖ್ಯೆ

ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ 2014ರಲ್ಲಿ ಅಂಕಿ-ಸಂಖ್ಯೆ ಪ್ರಕಾರ 16,22,635 ಮತದಾರರು ಇದ್ದರು. ಇದರಲ್ಲಿ 8,47,815 ಪುರುಷ ಮತದಾರರು, 7,74,820 ಮಹಿಳಾ ಮತದಾರರು ಇದ್ದರು. ಸದ್ಯ ಮತದಾರರ ಸಂಖ್ಯೆ ಇನ್ನಷ್ಟು ಹೆಚ್ಚಾಗಿರುತ್ತದೆ.

ಕ್ಷೇತ್ರದಲ್ಲಿ 21,77,333 ಜನಸಂಖ್ಯೆ (2014ರಲ್ಲಿ) ಇದೆ. ಗ್ರಾಮಾಂತರದಲ್ಲಿ ಅತಿ ಹೆಚ್ಚು 76.95% ಜನಸಂಖ್ಯೆ ಇದ್ದರೆ, ನಗರ ಪ್ರದೇಶದಲ್ಲಿ 23.05% ಜನಸಂಖ್ಯೆ ಇದೆ. 2011 ರ ಜನಗಣತಿ ಅನುಸಾರ ಜಿಲ್ಲೆಯಲ್ಲಿ 65% ಹಿಂದೂ ಜನಸಂಖ್ಯೆ ಇದ್ದರೆ, ಮುಸ್ಲಿಂ ಜನಸಂಖ್ಯೆ 29% ರಷ್ಟಿದೆ. ಉತ್ತಮ ಸಂಖ್ಯೆಯಲ್ಲಿರುವ ಮುಸ್ಲಿಂ ಮತದಾರರು ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ. ಪರಿಶಿಷ್ಟ ಜಾತಿಗೆ ಸೇರಿದ 20.34% ಜನರಿದ್ದಾರೆ ಇವರ ಮತಗಳೂ ಸಹ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.

Vijayapura Lok Sabha Elections 2024 Analysis Candidates List Results and Probable Winners

2014ರ ವಿಜಯಪುರ ಕ್ಷೇತ್ರ ಲೋಕಸಭೆ ಚುನಾವಣೆಯಲ್ಲಿ 9,66,757 ಮತಗಳು ಚಲಾವಣೆ ಆಗಿದ್ದವು. ಇದರಲ್ಲಿ 5,21,565 ಮಂದಿ ಪುರುಷರು ಮತ ಚಲಾಯಿಸಿದ್ದರೆ. 4,45,192 ಮಂದಿ ಮಹಿಳೆಯರು ಮತ ಚಲಾಯಿಸಿದ್ದರು. ಒಟ್ಟು 60% ಮತಚಲಾವಣೆ ಆಗಿತ್ತು. ಗೆದ್ದ ಅಭ್ಯರ್ಥಿ ಬಿಜೆಪಿಯ ರಮೇಶ್ ಜಿಗಣಿಗಿ ಅವರು ಬರೋಬ್ಬರಿ 4,71,757 ಮತ ಗಳಿಸಿದ್ದರು. ತಮ್ಮ ಸಮೀಪ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಪ್ರಕಾಶ್ ರಾಥೋಡ್ ಅವರನ್ನು 69,818 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.

ಇನ್ನೂ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಸುನೀತಾ ದೇವಾನಂದ ಚವ್ಹಾಣ್ ವಿರುದ್ಧ 6,35,867 ಮತಗಳಿಂದ ರಮೇಶ ಜಿಗಜಿಣಗಿ ಜಯ ಸಾಧಿಸಿದ್ದರು. 2019ರಲ್ಲಿ ಒಟ್ಟು 11,11,354 ಮತದಾರರು ಇದ್ದರು. 2019ರಲ್ಲಿ ಕ್ಷೇತ್ರದಲ್ಲಿ ಶೇ. 61.82% ರಷ್ಟು ಮತದಾನ ನಡೆದಿತ್ತು.

ಒಟ್ಟು ಮತದಾರರು -11,11,354

ಒಟ್ಟು ಪುರುಷ ಮತದಾರರು-5,88,408

ಒಟ್ಟು ಮಹಿಳಾ ಮತದಾರರು-5,20,348

ಈ ಬಾರಿಯ ಚುನಾವಣೆಯಲ್ಲಿ ಸಹ ರಮೇಶ ಜಿಗಜಿಣಗಿ ಅವರು ವಿಜಯಪುರ ಕ್ಷೇತ್ರದಿಂದಲೇ ಸ್ಪರ್ಧಿಸಲು ಸರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

Vijayapura Lok Sabha Elections 2024 Analysis Candidates List Results and Probable Winners

ಈ ನಡುವೆ ಬಿಜೆಪಿ ಗೋವಿಂದ ಎಂ. ಕಾರಜೋಳರನ್ನು ಕಣಕ್ಕಿಳಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಒಂದು ವೇಳೆ ಹೀಗಾಗಿದ್ದಲ್ಲಿ ಈ ಬಾರಿ ಬಿಜೆಪಿಗೆ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಎದುರಾಗುವ ಸಾಧ್ಯತೆ ಇತ್ತು. ರಮೇಶ ಜಿಗಜಿಣಗಿ ಬಿಟ್ಟು ಬಿಜೆಪಿ-ಜೆಡಿಎಸ್‌ ಪಕ್ಷಗಳು ಮೈತ್ರಿಯಾಗಿ ಏಕ ಅಭ್ಯರ್ಥಿ ಗೋವಿಂದ ಎಂ. ಕಾರಜೋಳರನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್ ವಿರುದ್ಧ ಗೆಲುವು ಮರೀಚಿಕೆ ಆಗುವ ಸಾಧ್ಯತೆಯೂ ಇತ್ತು. ಆದರೆ ಬಿಜೆಪಿ ಅಳೆದು ತೂಗಿ ಮತ್ತೆ ರಮೇಶ ಅವರಿಗೆ ಟಿಕೆಟ್ ನೀಡಿದ್ದು ಕಾಂಗ್ರೆಸ್‌ಗೆ ಇವರು ತೀವ್ರ ಪೈಪೋಟಿ ನೀಡುವುದರಲ್ಲಿ ಅನುಮಾನವೇ ಇಲ್ಲ.

ವಿಜಯಪುರದಲ್ಲಿರುವ ಸಮಸ್ಯೆಗಳು

ಐದು ನದಿ ಹರಿಯುವ ಜಿಲ್ಲೆಯೆಂದು ಹೆಸರಾಗಿದ್ದ ವಿಜಯಪುರದ ಬಹುದೊಡ್ಡ ಸಮಸ್ಯೆ, ನೀರನ ಕೊರತೆ. ಬರಗಾಲ ಬಂತೆಂದರೆ ಗುಳೆ ಹೋಗುವವರ ಸಂಖ್ಯೆ ವಿಜಯಪುರದಲ್ಲಿ ಹೆಚ್ಚು. ಜೋಳ, ಸಜ್ಜೆ, ಶೆಂಗಾ, ಸೂರ್ಯಕಾಂತಿ, ಚಿಕ್ಕು ಹಣ್ಣುಗಳು ಇಲ್ಲಿನ ಪ್ರಧಾನ ಬೆಳೆಗಳು ಆದರೆ ನೀರಿಲ್ಲದ ಬೇಸಗೆಯ ಸಮಯದಲ್ಲಿ ರೈತರು ಕಂಗಾಲಾಗುವುದು ತಪ್ಪಿಲ್ಲ. ಎಷ್ಟೆ ಸರ್ಕಾರಗಳು ಬದಲಾದರೂ ಸಹ ಶಾಶ್ವತವಾಗಿ ನೀರಿನ ವ್ಯವಸ್ಥೆ ಮಾಡಲು ಇನ್ನೂ ಸಾಧ್ಯವಾಗಿಲ್ಲ.

ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಸಮಸ್ಯೆಗಳು ಮುನ್ನೆಲೆಗೆ ಬಂದು ಅದರ ಆಧಾರದ ಮೇಲೆ ಮತಚಲಾವಣೆ ಆಗುತ್ತದೆಯೇ ಅಥವಾ ಪಕ್ಷಗಳು, ನಾಯಕರು ಅವರ ಪ್ರಭಾವಗಳು, ಜಾತಿ, ಧರ್ಮಗಳ ಆಧಾರದ ಮೇಲೆ ಮತಚಲಾವಣೆ ಆಗುತ್ತದೆಯೋ ನೋಡಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+