ವಿಜಯಪುರ: ಕುಡಿದು ಶಾಲೆಯಲ್ಲಿ ನಿದ್ರಿಸುತ್ತಿದ್ದ ಶಿಕ್ಷಕನಿಗೆ ಗೂಸಾ
ವಿಜಯಪುರ, ಡಿಸೆಂಬರ್ 12: ಕಂಠ ಪೂರ್ತಿ ಕುಡಿದು ಶಾಲೆಗೆ ಬಂದ ಶಿಕ್ಷಕನನ್ನು ಗ್ರಾಮಸ್ಥರು ಬಡಿದು, ಅಮಾನತು ಮಾಡಿಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಸಿಂಧಗಿ ತಲ್ಲೂಕಿನ ಬೊಮ್ಮನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಎಸ್.ಎಂ.ಲೋಣಿ ಕಂಠಪೂರ್ತಿ ಕುಡಿದು ನಶೆಯಲ್ಲಿ ಅರೆ ಬೆತ್ತಲಾಗಿ ಶಾಲೆಯಲ್ಲಿ ರಾಜಾರೋಷವಾಗಿ ನಿದ್ರಿಸುತ್ತಿದ್ದ, ಶಾಲಾ ಮಕ್ಕಳಿಂದ ವಿಷಯ ತಿಳಿದ ಗ್ರಾಮಸ್ಥರು ಶಾಲೆಗೆ ನುಗ್ಗಿ ಬೇಜವಾಬ್ದಾರಿಯುತ ಶಿಕ್ಷಕನಿಗೆ ಥಳಿಸಿದ್ದಾರೆ.

ಅರೆ ಬೆತ್ತಲಾಗಿ ಮಲಗಿದ್ದ ಶಿಕ್ಷಕನನ್ನು ಶಾಲೆಗೆ ಹೊರಗೆ ಎಳೆತಂದು, ಥಳಿಸಿ ಊರಿನಲ್ಲಿ ಅರೆಬೆತ್ತಲಾಗೇ ಮೆರವಣಿಗೆ ಮಾಡಿದ್ದಾರೆ, ಗ್ರಾಮಸ್ಥರ ಏಟಿಗೆ ನಶೆ ಇಳಿದಿದ್ದ ಶಿಕ್ಷಕ ಇನ್ನೊಮ್ಮೆ ಮಾಡುವುದಿಲ್ಲವೆಂದು ಗ್ರಾಮಸ್ಥರಲ್ಲಿ ಕೈ ಮುಗಿದು ಅಂಗಲಾಚಿದ ಆದರೆ ಗ್ರಾಮಸ್ಥರು ಜಿಲ್ಲೆಯ ಶಿಕ್ಷಾಧಿಕಾರಿಗಳಿಗೆ ಕರೆ ಮಾಡಿ ಶಿಕ್ಷಕನ ಬಗ್ಗೆ ದೂರು ನೀಡಿ ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.












Click it and Unblock the Notifications