ವಿಜಯಪುರದಲ್ಲಿ ಪೊಲೀಸ್ ಮೇಲೆ ಹಲ್ಲೆ, ಪ್ರತಿಯಾಗಿ ಗುಂಡಿನ ದಾಳಿ

ವಿಜಯಪುರ, ಮಾರ್ಚ್‌12: ವಿಜಯಪುರ ಜಿಲ್ಲೆಯಲ್ಲಿ ಇಂದು ನಸುಕಿನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿದ್ದು, ಪ್ರತಿಯಾಗಿ ಪೊಲೀಸರು ಆರೋಪಿ ಮೇಲೆ ಗುಂಡಿನ ದಾಳಿ ನಡೆಸಿ ಗಾಯಗೊಳಿಸಿದ್ದಾರೆ.

307 ಕೇಸಿನಲ್ಲಿ ಬೇಕಾಗಿದ್ದ ಆರೋಪಿ ಯೂನಸ್ ಪಟೇಲ್‌ ಎಂಬಾತನನ್ನು ಬಂಧಿಸಲು ಆತನ ನಿವಾಸ ನವಬಾಗ್ ಗೆ ತೆರಳಿದ್ದಾಗ ಮೊದಲಿಗೆ ಒಬ್ಬ ಕಾನ್ಸ್ಟೇಬಲ್‌ ಅನ್ನು ತಳ್ಳಿಹಾಕಿ ಓಡಲು ಪ್ರಯತ್ನಿಸಿದ್ದಾನೆ. ಆ ವೇಳೆ ಪಿಎಸ್‌ಐ ಆರೀಫ್ ಆತನನ್ನು ಹಿಡಯಲು ಪ್ರಯತ್ನಿಸಿದ್ದಾರೆ ಆಗ ಆತ ಚಾಕುವಿನಿಂದ ಆರೀಫ್ ಕೈಗೆ ಚುಚ್ಚಿದ್ದಾನೆ ಆಗ ಆರೀಫ್ ಗಾಳಿಯಲ್ಲಿ ಗುಂಡು ಹಾರಿಸಿ ಹೆದರಿಸುವ ಪ್ರಯತ್ನ ಮಾಡಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಆಗಲೂ ಆತ ಮತ್ತೊಬ್ಬ ಕಾನ್ಸ್ಟೇಬಲ್ ಮದನ್‌ ಶೆಟ್ಟಿ ಮೇಲೆ ಹಲ್ಲೆ ನಡೆಸಿ ಓಡುವ ಪ್ರಯತ್ನ ಮಾಡಿದಾಗ ಪಿಎಸ್‌ಐ ಅವರು ಆರೋಪಿಯ ಕಾಲಿಗೆ ಫೈರ್ ಮಾಡಿದ್ದಾರೆ. ನಂತರ ಆತನನ್ನು ವಿಜಯಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

Vijayapura: accused attack on Police, PSI fires in self defense

ಪಿಎಸ್‌ಐ ಆರೀಫ್ ಮತ್ತು ಮದನ್‌ ಶೆಟ್ಟಿ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾರ ಜೀವನಕ್ಕೂ ಅಪಾಯವಾಗಿಲ್ಲ ಎಂದು ವಿಜಯಪುರ ಪೊಲೀಸ್ ಎಸ್‌ಪಿ ತಿಳಿಸಿದ್ದಾರೆ. ಆರೋಪಿ ಯೂನಸ್ ಪಟೇಲ್‌ ಮೇಲೆ ಗಾಂಧಿ ನಗರ ಠಾಣೆ ಒಂದರಲ್ಲೇ ನಾಲ್ಕು ಪ್ರಕರಣಗಳು ದಾಖಲಾಗಿವೆ.

Vijayapura: accused attack on Police, PSI fires in self defense
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+