ಗಾಲಿ ಜನಾರ್ಧನ ರೆಡ್ಡಿ ಬಿಜೆಪಿಗೆ ಮರುಸೇರ್ಪಡೆ?

Posted By:
Subscribe to Oneindia Kannada

ವಿಜಯಪುರ, ನವೆಂಬರ್ 02 : ಗಾಲಿ ಜನಾರ್ಧನ ರೆಡ್ಡಿ ಅವರನ್ನು ಮತ್ತೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುತ್ತಾರೆ ಎಂಬ ವಿಷಯದ ಬಗ್ಗೆ ಗುಸುಗುಸು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲೇ ಶ್ರೀರಾಮಲು ಅದಕ್ಕೆ ಪುಷ್ಟಿ ನೀಡುವ ವಿಚಾರವೊಂದನ್ನು ಹೊರಗೆಡವಿದ್ದಾರೆ.

ವಿಜಯಪುರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಸಂಸದ ಶ್ರೀರಾಮಲು, ಜನಾರ್ಧನ ರೆಡ್ಡಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಬೇಕೆಂದು ಪಕ್ಷದ ವರಿಷ್ಠರಿಗೆ ನಾವು ಮನವಿ ಮಾಡುತ್ತಿದ್ದೇವೆ, ಈ ಕುರಿತು ಅವರು ಚಿಂತಿಸುತ್ತಿದ್ದಾರೆ ಎಂದಿದ್ದಾರೆ.

ಸಿದ್ದರಾಮಯ್ಯ ಅಯೋಗ್ಯ ಮುಖ್ಯಮಂತ್ರಿ: ಗಾಲಿ ರೆಡ್ಡಿ ವಾಗ್ದಾಳಿ

ಜನಾರ್ಧನ ರೆಡ್ಡಿ ಅವರ ಮೇಲೆ ಗಣಿ ಹಗರಣ ಆರೋಪ ಬಂದಾಗ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು.

Sriramulu gives hint about Janardhana Reddy joinig BJP again

ಗಾಲಿ ಜನಾರ್ಧನ ರೆಡ್ಡಿ ಪಕ್ಷಕ್ಕೆ ಸೇರ್ಪಡೆ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು ಎಂದಿರುವ ಅವರು ಈ ಕುರಿತು ಹೈಕಮಾಂಡ್‌ಗೆ ಕೆಲವು ಗೊಂದಲಗಳಿದ್ದು, ಅವು ಮುಗಿದ ನಂತರ ರೆಡ್ಡಿ ಅವರು ಪಕ್ಷಕ್ಕೆ ಪುನರ್ ಸೇರ್ಪಡೆ ಆಗಬಹುದು ಎಂಬ ಆಶಾವಾಧ ವ್ಯಕ್ತಪಡಿಸಿದ್ದಾರೆ.

ಕೇಂದ್ರ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಅವರಿಗೆ ಜನಾರ್ಧನ ರೆಡ್ಡಿ ಆತ್ಮೀಯರಾಗಿದ್ದು, ಸುಷ್ಮಾ ಸ್ವರಾಜ್ ಜನಾರ್ಧನ್ ರೆಡ್ಡಿ ಪರ ನಿಂತದ್ದೇ ಆದಲ್ಲಿ ಅವರು ಮತ್ತೆ ಪಕ್ಷ ಸೇರುವುದು ಕಷ್ಟವೇನಲ್ಲ.

ಮುಂದುವರೆದು ಮಾತನಾಡಿ ಕಾಂಗ್ರೆಸ್ ಮೇಲೆ ಹರಿಹಾಯ್ದ ಸಂಸದ ಶ್ರೀರಾಮುಲು ಅವರು 'ಜಟ್ಟಿ ಬಿದ್ದರು ಮೀಸೆ ಮಣ್ಣಾಗಲ್ಲ' ಎಂಬ ರೀತಿಯಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಿದ್ದಾರೆ. ಚುನಾವಣೆಗಳು ಹತ್ತಿರ ಬಂದಾಗ ಅವರಿಗೆ ದೇವಸ್ಥಾನಗಳು ನೆನಪಾಗಿದೆ ಎಂದರು.

ಸಿದ್ದರಾಮಯ್ಯ ಅವರ ಬಗ್ಗೆಯೂ ಟೀಕೆಗಳ ಸುರಿಮಳೆ ಸುರಿಸಿದ ಅವರು 'ಸಿದ್ದರಾಮಯ್ಯ ಹಿಟ್ಲರ್ ತರ ವರ್ತಿಸುತ್ತಿದ್ದಾರೆ, ರಾಜ್ಯದಲ್ಲಿ ದುರಾಡಳಿತ ಹೆಚ್ಚಾಗಿದೆ ಪ್ರಧಾನಿ ಬಗ್ಗೆ ಸಿದ್ದರಾಮಯ್ಯ ಕೇವಲವಾಗಿ ಮಾತನಾಡುವುದು ಅವ್ರಿಗೆ ಶೋಭೆ ತರಲ್ಲ ಎಂದು ಗುಡುಗಿದರು.

'ಮೋದಿಯನ್ನು ಬೈದರೆ ದೊಡ್ಡವರಾಗ್ತಿವಿ ಅಂತಾ ತಿಳಿದು ಸಿದ್ದರಾಮಯ್ಯ ಮೋದಿ ಅವರ ಬಗ್ಗೆ ಏಕವಚನೆದಲ್ಲಿ ಮಾತಾಡುತಿದ್ದಾರೆ, ಇದು ಅವರ ಅಂತ್ಯಕಾಲ, ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೆ ಕಾಂಗ್ರೆಸ್ ಧೂಳಿ ಪಟವಾಗಲಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sriramulu gave hint about Janardhan Reddy rejoining BJP. he said matter of Janardhan reddy's rejoining is on High command table. we are requesting them about the issue. hope we will see Janardhan Reddy in BJP soon.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ