ಆಸ್ತಿಗಾಗಿ ಅಪ್ಪ, ಅವ್ವ ಮತ್ತು ಅಕ್ಕಳನ್ನೆ ಕೊಂದ ಕಿರಾತಕ
ಬೆಂಗಳೂರು,
ಮಾ. 13: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಹೆತ್ತವರನ್ನೆ ಪಾಪಿ ಪುತ್ರನೊಬ್ಬ ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ. ಆಸ್ತಿ ವಿವಾದಕ್ಕೆ ಮೂವರನ್ನು ವ್ಯಕ್ತಿ ಬಲಿ ತೆಗೆದುಕೊಂಡಿದ್ದಾನೆ. ಹೆತ್ತ ತಂದೆ-ತಾಯಿ ಹಾಗೂ ಒಡಹುಟ್ಟಿದ ಅಕ್ಕಳನ್ನು ಕೊಂದಿರುವ ದುರ್ಘಟನೆ ಕರ್ನಾಟಕ- ಮಹಾರಾಷ್ಟ್ರದ ಗಡಿ ಭಾಗದಲ್ಲಿ ನಡೆದಿದೆ. id="toptextpromo"> id='are-slot-1' class='oiad oi-axt oiadv'>id='top-searched-articles'>
ಮಹಾರಾಷ್ಟ್ರ
ರಾಜ್ಯದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಉಮದಿಯ ತೋಟದ ಮನೆಯಲ್ಲಿ ನಡೆದಿರುವ ಮಾರಣ ಹೋಮದಲ್ಲಿ ತಂದೆ ಗುರುಲಿಂಗಪ್ಪ ಅರಕೇರಿ(82), ತಾಯಿ ನಾಗವ್ವ ಅರಕೇರಿ(75) ಹಾಗೂ ಅಕ್ಕ ಸಮುದ್ರಾಬಾಯಿ(60) ಕೊಲೆಯಾದ ದುರ್ದೈವಿ ಗಳಾಗಿದ್ದಾರೆ. ಸಿದ್ದಪ್ಪ ಅರಕೇರಿ ಕೊಲೆ ಮಾಡಿದ ಪಾಪಿ ಪುತ್ರನಾಗಿದ್ದು ಕೊಲೆ ಮಾಡಿದ ಬಳಿಕ ಠಾಣೆಗೆ ಬಂದು ಶರಣಾಗಿದ್ದಾನೆ. ಉಮದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.











Click it and Unblock the Notifications