ವಿಜಯಪುರ : ಹೆರಿಗೆ ಮಾಡಿಸಿದ ಆಂಬುಲೆನ್ಸ್ ಸಿಬ್ಬಂದಿ

ವಿಜಯಪುರ, ಡಿಸೆಂಬರ್ 06 : ಆಂಬುಲೆನ್ಸ್ ಸಿಬ್ಬಂದಿಯೇ ಪ್ರಸೂತಿ ತಜ್ಞರಾಗಿ ಗರ್ಭಿಣಿಯೋರ್ವರಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿರುವ ಘಟನೆ ವಿಜಯಪುರದ ಮುದ್ದೆಬಿಹಾಳದಲ್ಲಿ ನಡೆದಿದೆ.

ಕೋಳೂರು ಗ್ರಾಮದ ಗರ್ಭಿಣಿ ಮಹಿಳೆ ಸವಿತಾ ನಾಗರಾಳ ಅವರು ಆಸ್ಪತ್ರೆಗೆ ಹೋಗಲೆಂದು ತಾಳಿಕೋಟೆಯಿಂದ ಮುದ್ದೆಬಿಹಾಳಕ್ಕೆ ಬಸ್ಸಿನಲ್ಲಿ ತೆರಳುತ್ತಿದ್ದರು ಅದೇ ಸಮಯದಲ್ಲಿ ಅವರಿಗೆ ಹೆರಿಗೆ ವೇದನೆ ಕಾಣಿಸಿಕೊಂಡಿದೆ. ಕೂಡಲೆ ಬಸ್ಸಿನ ನಿರ್ವಾಹಕ 108 ಗೆ ಕರೆ ಮಾಡಿ ಆಂಬುಲೆನ್ಸ್ಗೆ ಬರ ಹೇಳಿದ್ದಾನೆ.

Pregnant Lady deliver baby in Ambulence

ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಆಂಬುಲೆನ್ಸ್ ಸವಿತಾ ಅವರನ್ನು ಕರೆದುಕೊಂಡು ಮುದ್ದೆಬಿಹಾಳದ ಕಡೆ ಪ್ರಯಾಣ ಬೆಳೆಸಿದೆ. ಆದರೆ ಆಸ್ಪತ್ರೆ ಮಾರ್ಗಮಧ್ಯದಲ್ಲಿ ಸವಿತಾ ಅವರಿಗೆ ತೀರ್ವ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಮಾರ್ಗ ಮಧ್ಯದಲ್ಲಿ ಆಂಬುಲೆನ್ಸ್ ಸಿಬ್ಬಂದಿಯೇ ಸವಿತಾ ಅವರಿಗೆ ಸಾಮಾನ್ಯ ಹೆರಿಗೆ ಮಾಡಿಸಿದ್ದಾರೆ. ಸವಿತಾ ಅವರಿಗೆ ಗಂಡು ಮಗು ಜನಿಸಿದೆ.

ತಾಯಿ ಮಗುವನ್ನು ಆಂಬುಲೆನ್ಸ್ ಸಿಬ್ಬಂದಿ ಮುದ್ದೆಬಿಹಾಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವಶ್ಯ ಚಿಕಿತ್ಸೆ ನೀಡಿರುವ ಆಸ್ಪತ್ರೆ ವೈದ್ಯರು ತಾಯಿ, ಮಗು ಕ್ಷೇಮವಾಗಿರುವುದಾಗಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+