ಚಡಚಣ ಹತ್ಯೆ ಬಗ್ಗೆ ಭಾರೀ ಚರ್ಚೆ, ರಜೆ ಮೇಲೆ ತೆರಳಿದ ಐಜಿಪಿ
ವಿಜಯಪುರ, ಜೂನ್ 19 : ಗಂಗಾಧರ ಚಡಚಣ ಕೊಲೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈ ಸಮಯದಲ್ಲಿಯೇ ಉತ್ತರ ವಲಯ ಐಜಿಪಿ ಅಲೋಕ್ ಕುಮಾರ್ 10 ದಿನಗಳ ರಜೆ ಮೇಲೆ ತೆರಳಿದ್ದಾರೆ.
ಉತ್ತರ ವಲಯ ಐಜಿಪಿ ಅಲೋಕ್ ಕುಮಾರ್ 10 ದಿನಗಳ ಕಾಲ ರಜೆ ಪಡೆದಿದ್ದಾರೆ. ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಪೊಲೀಸರ ಪಾತ್ರವಿದೆ ಎಂಬುದನ್ನು ಮೊದಲು ಪತ್ತೆ ಹಚ್ಚಿದ್ದು ಅವರು. ಈಗ ಈ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ.
ಅಲೋಕ್ ಕುಮಾರ್ ಅವರಿಗೆ ಮೊದಲು ಅಭಿನಂದನೆ ಸಲ್ಲಿಸಬೇಕು. ಇಲಾಖೆಯೊಳಗೆ ನಡೆದ ತಪ್ಪನ್ನು ನಿಸ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರ ಬಂಧನಕ್ಕೆ ಮಾರ್ಗದರ್ಶನ ನೀಡಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳು ಅಲೋಕ್ ಕುಮಾರ್ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ.

ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಪಿಎಸ್‌ಐ ಸೇರಿ ಮೂವರು ಪೊಲೀಸ್ ಪೇದೆಗಳನ್ನು ಬಂಧಿಸಲಾಗಿದೆ. ಸಿಐಡಿ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ.
ಸುಮಾರು ಆರು ದಶಕಗಳ ಹಿಂದೆ ಭೈರಗೊಂಡ-ಚಡಚಣ ಕುಟುಂಬಗಳ ನಡುವೆ ಆರಂಭಗೊಂಡ ದ್ವೇಷ ಇಂದಿಗೂ ಮುಂದುವರೆದಿದೆ. ಎರಡೂ ಕಡೆಯ ಹಲವಾರು ಜನರು ಈಗಾಗಲೇ ಹತ್ಯೆಯಾಗಿದ್ದಾರೆ. ಇದೀಗ ಧರ್ಮರಾಜ, ಗಂಗಾಧರ ಚಡಚಣ ಹತ್ಯೆ ಪ್ರಕರಣದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಪೊಲೀಸ್ ಅಧಿಕಾರಿಗಳು ಸಹ ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದು ಜನರ ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications