Get Updates
Get notified of breaking news, exclusive insights, and must-see stories!

ಮೈಲಾರಲಿಂಗೇಶ್ವರ ಕಾರ್ಣಿಕ 2026: 'ಸಂಪಾದಿತಲೇ ಪರಾಕ್' ಎಂದು ಭವಿಷ್ಯ ನುಡಿದ ಗೊರವಯ್ಯ

Mylara Lingeshwara Karnika 2026: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಡೆಂಕನಮರಡಿಯಲ್ಲಿ ನಡೆದ ಮೈಲಾರ ಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ 2026ನೇ ಸಾಲಿನ ಕಾರ್ಣಿಕ ಹೊರಬಿದ್ದಿದೆ. ಪರಂಪರೆಯಂತೆ ನಡೆದ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಅವರು "ಸಂಪಾಯಿತಲೇ ಪರಾಕ್" ಎಂಬ ದೇವವಾಣಿಯನ್ನು ನುಡಿದರು. ಈ ಮಹತ್ವದ ಕ್ಷಣಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಬಂದ ಅಪಾರ ಸಂಖ್ಯೆಯ ಭಕ್ತರು ಸಾಕ್ಷಿಯಾದರು.

ಈ ಕಾರ್ಣಿಕ ನುಡಿಯ ಅರ್ಥದಂತೆ, ಪ್ರಸಕ್ತ ವರ್ಷ ರಾಜ್ಯದಲ್ಲಿ ಮಳೆಯ ಪ್ರಮಾಣ ಉತ್ತಮವಾಗಿರಲಿದೆ, ಉತ್ತಮ ಬೆಳೆಗಳು ಹಾಗೂ ಜನಜೀವನ ಸುಗಮವಾಗಿರಲಿದೆ ಎಂಬ ನಂಬಿಕೆ ವ್ಯಕ್ತವಾಗಿದೆ. ಜೊತೆಗೆ ಯಾವುದೇ ದೊಡ್ಡ ಮಟ್ಟದ ಅಶಾಂತಿ ಅಥವಾ ತಲ್ಲಣಗಳು ಉಂಟಾಗುವ ಸಾಧ್ಯತೆ ಕಡಿಮೆ ಎನ್ನುವ ಸಂದೇಶವೂ ಇದರಲ್ಲಿ ಅಡಗಿದೆ ಎಂದು ಭಕ್ತರು ಹೇಳುತ್ತಾರೆ.

Mylara Lingeshwara Karnika 2026 Goravayya s Prophecy Sampaditale Parak Revealed in Denkanamaradi

ಪ್ರತಿವರ್ಷ ನಡೆಯುವ ಮೈಲಾರ ಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಕಾರ್ಣಿಕೋತ್ಸವವನ್ನು ಭಕ್ತರು ಭವಿಷ್ಯದ ಸೂಚಕವಾಗಿ ಪರಿಗಣಿಸುತ್ತಾರೆ. ಈ ಬಾರಿ ಹೊರಬಿದ್ದ ಕಾರ್ಣಿಕ ನುಡಿ ಜನರಲ್ಲಿ ಆಶಾಭಾವನೆ ಮೂಡಿಸಿದ್ದು, ಕೃಷಿಕರು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಸಂತಸ ವ್ಯಕ್ತವಾಗಿದೆ.

ಈ ವರ್ಷದ ಜಾತ್ರಾ ಮಹೋತ್ಸವ ಜನವರಿ 25ರಿಂದ ಫೆಬ್ರವರಿ 5ರವರೆಗೆ ನಡೆದಿದ್ದು,ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಜಾತ್ರೆಯ ಪ್ರಮುಖ ಆಕರ್ಷಣೆಯಾದ ಕಾರ್ಣಿಕೋತ್ಸವ ಬುಧವಾರ ಸಂಜೆ ನಡೆಯಿತು. ಈ ಸಂದರ್ಭದಲ್ಲಿ ಗೊರವಯ್ಯ ರಾಮಜ್ಜನವರು ಪರಂಪರೆಯಂತೆ ಭವಿಷ್ಯವಾಣಿ ನುಡಿದರು. ಮೈಲಾರ ಜಾತ್ರಾ ಮಹೋತ್ಸವವು ಶತಮಾನಗಳ ಇತಿಹಾಸ ಹೊಂದಿದ್ದು, ಧಾರ್ಮಿಕ ಆಚರಣೆಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಹೆಸರಾಗಿದೆ. ಪ್ರತಿವರ್ಷದಂತೆ ಈ ಬಾರಿ ಕೂಡ ಜಾತ್ರೆ ಸಂಭ್ರಮದಿಂದ ನಡೆಯಿತು.

ಮೈಲಾರ ಕಾರ್ಣಿಕದ ಮಹತ್ವ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಡೆಂಕನಮರಡಿಯಲ್ಲಿ ಪ್ರತಿವರ್ಷ ನಡೆಯುವ ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವವು ರಾಜ್ಯದ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವದ ಭಾಗವಾಗಿ ನಡೆಯುವ ಈ ಕಾರ್ಣಿಕೋತ್ಸವಕ್ಕೆ ಕರ್ನಾಟಕದ ವಿವಿಧ ಜಿಲ್ಲೆಗಳಷ್ಟೇ ಅಲ್ಲದೆ, ನೆರೆಯ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ಪರಂಪರೆ ಜನರ ಜೀವನದೊಂದಿಗೆ ಆಳವಾಗಿ ಬೆಸೆದುಕೊಂಡಿದೆ.

ಕಾರ್ಣಿಕೋತ್ಸವದ ಕೇಂದ್ರಬಿಂದುವಾಗಿರುವುದು ಗೊರವಯ್ಯ ಅವರು ನುಡಿಯುವ ದೇವವಾಣಿ. ಈ ನುಡಿಯನ್ನು ಭಕ್ತರು ಭವಿಷ್ಯದ ಸೂಚಕವಾಗಿ ಪರಿಗಣಿಸುತ್ತಾರೆ. ಮಳೆ, ಬೆಳೆ, ಕೃಷಿ ಪರಿಸ್ಥಿತಿ, ಜನಜೀವನ ಹಾಗೂ ಸಮಾಜದ ಸ್ಥಿತಿಗತಿಗಳ ಬಗ್ಗೆ ಕಾರ್ಣಿಕ ನುಡಿಯಲ್ಲಿ ಸಂದೇಶ ಅಡಗಿರುತ್ತದೆ ಎಂಬ ನಂಬಿಕೆ ಇದೆ. ಅದಕ್ಕಾಗಿ ಈ ಕ್ಷಣಕ್ಕಾಗಿ ಭಕ್ತರು ವರ್ಷಪೂರ್ತಿ ಕಾಯುತ್ತಾರೆ.

ಕಾರ್ಣಿಕ ನಡೆಯುವ ದಿನ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತವೆ. ದೇವಾಲಯದ ಆವರಣ ಭಕ್ತಿಭಾವದಿಂದ ತುಂಬಿ ಹೋಗುತ್ತದೆ. ಜಾತ್ರಾ ದಿನಗಳಲ್ಲಿ ಜನಪದ ಕಲಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಪ್ರದರ್ಶನಗಳು ನಡೆಯುವ ಮೂಲಕ ಗ್ರಾಮೀಣ ಸಂಸ್ಕೃತಿಗೆ ಜೀವ ತುಂಬಲಾಗುತ್ತದೆ. ಮೈಲಾರ ಕಾರ್ಣಿಕೋತ್ಸವವು ಧಾರ್ಮಿಕ ಆಚರಣೆಯೊಂದಿಗೆ ಜನರನ್ನು ಒಂದೆಡೆ ಸೇರಿಸುವ ಮಹತ್ವದ ವೇದಿಕೆಯಾಗಿದ್ದು, ಪರಂಪರೆ ಮತ್ತು ನಂಬಿಕೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+