ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರಳ ವಿವಾಹ ಸುಂದರ ವೈವಾಹಿಕ ಜೀವನಕ್ಕೆ ನಾಂದಿ: ರಾಮಲಿಂಗಾರೆಡ್ಡಿ

|
Google Oneindia Kannada News

ಸಿಂಧಗಿ, ಮಾರ್ಚ್ 5: ಸರಳ ವಿವಾಹದಂತಹ ಆದರ್ಶಗಳನ್ನು ಯುವ ಜನತೆ ಮೈಗೂಡಿಸಿಕೊಳ್ಳಬೇಕು, ಆ ಹಣವನ್ನು ಉಳಿಸಿ ಬಡಕುಟುಂಬಗಳಿಗೆ ಆದರೆ ಸಹಾಯವನ್ನು ಮಾಡಿ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಕಿವಿಮಾತು ಹೇಳಿದರು.

ಸಿಂದಗಿ ತಾಲೂಕು ಕ್ರೀಡಾಂಗಣದಲ್ಲಿ ಡಾ. ಮಂಜುಳಾ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಬಡತನದ ಬೇಗೆಯಲ್ಲಿ ಬಳಲುತ್ತಿದ್ದರು ಸಾಲ ಸೋಲ ಮಾಡಿ ಮದುವೆ ಮಾಡುವ ಸಂಧರ್ಭದಲ್ಲಿ ತಮ್ಮ ಮದುವೆಯ ಹಣವನ್ನು ಉಳಿಸಿ ಬಡ ಜನರ ಮದುವೆಗೆ ಖರ್ಚು ಮಾಡುತ್ತಿರುವ ಶ್ರೀಮತಿ ಮಂಜುಳಾ ಗೋವರ್ಧನ್ ಅವರ ಕ್ರಮ ಆದರ್ಶಪ್ರಾಯ ಎಂದರು.

ವಿಡಿಯೋ: 'ತೀಟೆ ಸುಬ್ಬ' ಮದುಮಗನಿಗೆ ಕ್ವಾಟ್ಲೆ ಕೊಟ್ಟ ಸ್ನೇಹಿತರುವಿಡಿಯೋ: 'ತೀಟೆ ಸುಬ್ಬ' ಮದುಮಗನಿಗೆ ಕ್ವಾಟ್ಲೆ ಕೊಟ್ಟ ಸ್ನೇಹಿತರು

ಸಾರಿಗೆ ಸಚಿವ ಎಚ್.ಎಂ ರೇವಣ್ಣ ಮಾತನಾಡಿ, ತಮ್ಮ ಮದುವೆಯ ಹಣ ಉಳಿಸಿ ಬೇರೆ ಜೋಡಿಗಳ ಬದುಕಿನಲ್ಲಿ ನಂದಾದೀಪವಾಗಿದ್ದಾರೆ. ಅಲ್ಲದೆ, ಕಳೆದ ಮೂರು ವರ್ಷಗಳಲ್ಲಿ ಸಿಂದಗಿ ಮತಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ.

Minister Ramalinga reddy opines Youth should follow simple marriage

ತಮ್ಮ ರಾಜಕೀಯ ಶಕ್ತಿಯಿಂದ ವಿವಿಧ ಇಲಾಖೆಗಳಿಂದ ನೂರಾರು ಕೋಟಿ ರೂಪಾಯಿಗಳ ಅನುದಾನ ಈ ಕ್ಷೇತ್ರಕ್ಕೆ ಹರಿದು ಬರುವಂತೆ ಮಾಡಿದ್ದಾರೆ. ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆಯನ್ನು ಹೊಂದಿದ್ದು, ಇಲ್ಲಿನ ಜನರ ಆಶಯದಂತೆ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆಮಾಡುವುದಾಗಿ ಹೇಳಿದರು.

Minister Ramalinga reddy opines Youth should follow simple marriage

ಡಾ. ಮಂಜುಳಾ ಮಾತನಾಡಿ, ದುವೆ ಎಂಬುದು ಎಲ್ಲಾ ಜನರ ಬದುಕಿನ ಪ್ರಮುಖ ಘಟ್ಟ. ಈ ಘಟ್ಟವನ್ನು ಸರಿಯಾದ ರೀತಿಯಲ್ಲಿ ಹೊಂದಲು ಹಲವಾರು ಜನರಿಗೆ ಸಾಧ್ಯವಿಲ್ಲ. ಅದರಲ್ಲೂ ಪ್ರಮುಖವಾಗಿ ಆರ್ಥಿಕತೆ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದಂತಹ ಜನರ ಬದುಕಿನಲ್ಲಿ ಬೆಳಕನ್ನು ಮೂಡಿಸುವ ಉದ್ದೇಶ ನಮ್ಮದಾಗಿದೆ. ನಾನು ಹಾಗೂ ನನ್ನ ಪತಿ ನಮ್ಮ ಮದುವೆಯ ಹಣವನ್ನು ಉಳಿಸಿ ಇಂದು ಮದುವೆಯಾಗುತ್ತಿರುವ 25 ಜೋಡಿಗಳ ಮದುವೆಯಲ್ಲಿ ಸಂತಸವನ್ನು ಕಾಣುತ್ತಿದ್ದೇವೆ ಎಂದು ನುಡಿದರು.

English summary
Home minister Ramalinga reddy said that Youth generation should concentrate on simple marriage system. He was participated in public marriage ceremony in Sindhagi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X