ವಿಜಯಪುರದಲ್ಲಿ ರಾಖಿ ಕಟ್ಟಿದ ABVP ಸಂಘಟನೆ ಯುವತಿಯರಿಗೆ ಸಚಿವ ಎಂ.ಬಿ.ಪಾಟೀಲ್ ಕೊಟ್ಟ ದಕ್ಷಿಣೆ ಎಷ್ಟು ಗೊತ್ತಾ?
ವಿಜಯಪುರ, ಆಗಸ್ಟ್, 30: ಇಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮೀ ಯೋಜನೆ ಚಾಲನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದೇ ರೀತಿಯಾಗಿ ವಿಜಯಪುರದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಗಮಸಿದ ಸಚಿವ ಎಂ.ಪಿ.ಪಾಟೀಲ್ ಅವರಿಗೆ ಎಬಿವಿಪಿ ಸಂಘಟನೆ ಯುವತಿಯರು ರಾಖಿ ಕಟ್ಟಿ ಗಮನ ಸೆಳೆದಿದ್ದಾರೆ.
ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಗೃಹಲಕ್ಷ್ಮೀ ಯೋಜನೆ ಚಾಲನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಸಚಿವ ಎಂ.ಪಿ.ಪಾಟೀಲ್ ಆಗಮಿಸಿದ್ದಾರೆ. ರಕ್ಷಾ ಬಂಧನ ಹಬ್ಬ ಹಿನ್ನೆಲೆ ಇದೇ ವೇಳೆ ಸಚಿವ ಎಂಬಿ ಪಾಟೀಲ್ ಅವರಿಗೆ ಎಬಿವಿಪಿ ಸಂಘಟನೆ ಯುವತಿಯರು ರಾಖಿ ಕಟ್ಟಿದ್ದು, ಇನ್ನು ರಾಖಿ ಕಟ್ಟಿದ ಯುವತಿಯರಿಗೆ ಎಂ.ಬಿ. ಪಾಟೀಲ್ ಆಪ್ತ ಸಹಾಯಕರಿಂದ 500 ರೂಪಾಯಿ ದಕ್ಷಿಣೆ ನೀಡಿದ್ದಾರೆ.

ಅಷ್ಟೇ ಅಲ್ಲದೆ ಎಬಿವಿಪಿ ಸಂಘಟನೆ ಯುವತಿಯರು ಜಿಲ್ಲಾಧಿಕಾರಿ, ಎಸ್‌ಪಿ, ಜಿಲ್ಲಾ ಪಂಚಾಯತ್ ಸಿಇಒಗೂ ರಾಖಿ ಕಟ್ಟಿದ್ದಾರೆ.
ಬಿಜೆಪಿ ವಿರುದ್ಧ ಜಗದೀಶ್ ಶೆಟ್ಟರ್ ವಾಗ್ದಾಳಿ
ಚುನಾವಣೆ ಹೊಸ್ತಿಲಲ್ಲಿ ಸಿಲೆಂಡರ್ ಬೆಲೆ ಇಳಿಸಿದ್ದು ಚುನಾವಣೆ ಗಿಮಿಕ್ ಅಲ್ವಾ? ಕಾಂಗ್ರೆಸ್ ಚುನಾವಣೆಗಿಂತ ಮುಂಚೆನೇ ಗ್ಯಾರೆಂಟಿ ಅನೌನ್ಸ್ ಮಾಡಿತ್ತು. ಬಜೆಟ್‌ನಲ್ಲಿ ಘೋಷಣೆ ಕೂಡ ಮಾಡಿತ್ತು. 1.20 ಕೋಟಿ ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಫಲಾನುಭವಿಗಳ ಸಮಾವೇಶ ಮಾಡಿದ್ದು, ಅದು ಗಿಮಿಕ್ ಅಲ್ವಾ. ಈ ರೀತಿ ಗಿಮಿಕ್ ಅನ್ನೋದನ್ನು ಬಿಡಿ. ಕೇವಲ ಟೀಕೆ ಮಾಡೋದಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಟೀಕೆ ಮಾಡುವ ಮುಂಚೆ ನಿಮ್ಮ ಪಕ್ಷದ ಅವಸ್ಥೆ ಏನಿದೆ ಅಂತಾ ತಿಳಿದುಕೊಳ್ಳಿ. ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಲಾಗಿಲ್ಲ. ಅವರಿಗೆ ಸಹಿಸಲು ಆಗುತ್ತಿಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ಎಫೆಕ್ಟ್ ಆಗುತ್ತಿದ್ದು, ಬಿಜೆಪಿಯವರಿಗೆ ಢವಢವ ಶುರುವಾಗಿದೆ. ಏನಾದರೂ ಮಾಡಬೇಕು ಅಂತಾ ಮಾತನಾಡೋಕೆ ಶುರು ಮಾಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಕ್ಲಬ್, ಬಾರ್‌ಗಳಿಗೆ ಇಡೀ ರಾತ್ರಿ ಪರವಾನಿಗೆ ನೀಡಲಾಗಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಸಾಮಾನ್ಯವಾಗಿ ಇರುವ ಸಮಯವನ್ನೇ ಈಗಲೂ ಮುಂದುವರೆಸಲಾಗಿದೆ. ಟೀಕೆ ಮಾಡುವ ಸಲುವಾಗಿ ಹೀಗೆಲ್ಲ ಹೇಳಿದರೇ ಹೇಗೆ? ನಿಮ್ಮ ಸರ್ಕಾರದಲ್ಲಿ ನಡೆದಿಲ್ವಾ ಹೀಗೆಲ್ಲ.? ಸರ್ಕಾರದ ಅವ್ಯವಸ್ಥೆಯನ್ನು ಎಲ್ಲಿಲ್ಲಿ ಹೇಳಬೇಕಿದೆ ಅಲ್ಲಿ ಹೇಳಿದ್ದೀವಿ. ಅವತ್ತು ಮಾಡಿದ ತಪ್ಪನ್ನು ಇವತ್ತು ಸಹ ಹೇಳಲು ಧೈರ್ಯ ಇದೆ ಎಂದು ಹೇಳಿದರು.
ಕೊನೆಯ ಮೂರನಾಲ್ಕು ತಿಂಗಳಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನು ಮಂಜೂರು ಮಾಡಿದರು, ಟೆಂಡರ್ ಕರೆದರು. ಅದಕ್ಕೆ ಹಣಕಾಸು ಇಲಾಖೆಯ ಒಪ್ಪಿಗೆನೇ ಇರಲಿಲ್ಲ. ಸಿದ್ದರಾಮಯ್ಯ ಎಲ್ಲಾ ರೀತಿಯಾಗಿ ಲೆಕ್ಕಾಚಾರ ಮಾಡಿ 14ನೇ ಬಜೆಟ್ ಮಂಡನೆ ಮಾಡಿದ್ದಾರೆ. ಧಾರವಾಡ ಜಿಲ್ಲೆ ಅಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ ಬಿಜೆಪಿಗೆ ಮನೆಯ ಯಜಮಾನನಿಲ್ಲ. ನಾನು ಪ್ರವಾಸ ಹೋದಲ್ಲೆಲ್ಲ ಬಿಜೆಪಿಯ ನೊಂದಂತಹವರು ನನಗೆ ವ್ಯಯಕ್ತಿಕವಾಗಿ ಭೇಟಿ ಆಗಿದ್ದಾರೆ. ಏನು ಮಾಡಬೇಕು ಅಂತಾ ಗೊಂದಲದಲ್ಲಿದ್ದಾರೆ ಎಂದರು.
ಮುನೇನಕೊಪ್ಪ ಅವರೊಂದಿಗೆ ವ್ಯಯಕ್ತಿಕವಾಗಿ ಚರ್ಚೆ ಮಾಡಿಲ್ಲ. ಚರ್ಚೆ ಮಾಡದೇ ಅವರ ನಿರ್ಧಾರ ನಾವು ಹೇಳೋಕೆ ಸಾಧ್ಯ ಇಲ್ಲ. ಇಡೀ ರಾಜ್ಯದಲ್ಲಿ ಇದೆ ಪರಿಸ್ಥಿತಿ ಇದೆ. ಅವರೊಂದಿಗೆ ಮಾತುಕತೆ ಮಾಡಿ ನೋಡೋಣ. ಬಿಜೆಪಿ ಅದೋಗತಿಗೆ ಹೋಗುತ್ತಿದೆ. ಅಸ್ತಿತ್ವ ಕಳೆದುಕೊಳ್ಳುವಂತಾಗಿದೆ. ಚುನಾವಣೆಯಲ್ಲಿ ಸಾಕಷ್ಟು ಬಾರಿ ಸೊತ್ತಿದ್ದೇವೆ. ಆದರೆ ಈ ರೀತಿ ಸ್ಮಶಾನ ಮೌನ ಇರಲಿಲ್ಲ. ಮುನೇನಕೊಪ್ಪ ಅವರಿಗೆ ಇಡಿ ಮೂಲಕ ಹೆದರಿಸುತ್ತಾ ಇದ್ದಾರಾ ಅನ್ನೋ ಪ್ರಶ್ನೆಗೆ ಆ ಬಗ್ಗೆ ಮಾಹಿತಿ ಇಲ್ಲ ಎಂದು ಶೆಟ್ಟರ್ ಹೇಳಿದರು.












Click it and Unblock the Notifications