ಮತ್ತೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಜಪ ಮಾಡಿದ ಎಂ.ಬಿ.ಪಾಟೀಲ್
ವಿಜಯಪುರ, ಜುಲೈ 16: ಚುನಾವಣೆ ನಂತರ ತಣ್ಣಗಾಗಿದ್ದ ಲಿಂಗಾಯತ ಪ್ರತ್ಯೇಕ ಧರ್ಮ ಹೊರಾಟಕ್ಕೆ ಮತ್ತೆ ಜೀವ ತುಂಬುತಿದ್ದಾರೆ ಹೋರಾಟದ ಮುಂಚೂಣಿಯಲ್ಲಿ ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ.
ವಿಜಯಪುರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವರು, ಲಿಂಗಾಯತ ಪ್ರತ್ಯೇಕ ಧರ್ಮ ಹೊರಾಟ ನಿಲ್ಲದು, ಯಾವ ಜಗದ್ಗುರುಗಳು ಅಡ್ಡ ಬಂದರೂ ಹೋರಾಟ ನಡೆಯುತ್ತಲೇ ಇರುತ್ತದೆ ಎಂದು ಅವರು ಹೇಳಿದ್ದಾರೆ.
ಲಿಂಗಾಯತ ಹೋರಾಟ ನೆಲಕಚ್ಚಲು ಇಪ್ಪತ್ತೆಂಟು ಕಾರಣಗಳು
ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ತಳಹಂತದಿಂದ ಹೋರಾಟ ಮಾಡಲಾಗುವುದು ಎಂದಿರುವ ಅವರು, ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ ಬಸವ ತತ್ವ ವಿಶ್ವದೆಲ್ಲೆಡೆ ಪಸರಿಸಬೇಕೆಂಬುದಷ್ಟೆ ನಮ್ಮ ಗುರಿ ಎಂದು ಅವರು ಹೇಳಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾದ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಈ ಹಿಂದೆ ಬೆಂಬಲ ಕೊಟ್ಟಿದ್ದ ಕಾಂಗ್ರೆಸ್ ನಾಯಕರೇ ಈಗ ಅಂತರ ಕಾಯ್ದುಕೊಂಡಿದ್ದು, ಎಂಬಿ ಪಾಟೀಲ್ ಒಬ್ಬಂಟಿಯಾಗಿದ್ದಾರೆ.

ಹಿಂದೂ ಧರ್ಮ ಒಡೆಯುವುದಿಲ್ಲ
ಲಿಂಗಾಯತ ಪ್ರತ್ಯೇಕ ಧರ್ಮವಾದರೆ ಹಿಂದೂ ಧರ್ಮ ಒಡೆಯುವುದಿಲ್ಲ ಎಂದಿರುವ ಅವರು, ಈ ವಿಷಯದ ಬಗ್ಗೆ ತಳ ಹಂತದಿಂದ ಪ್ರಚಾರ ಮಾಡಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
ಲಿಂಗಾಯತ ಹಿಂದೂ ಧರ್ಮದ ಅವಿಭಾಜ್ಯ ಅಂಗ : ಕೇಂದ್ರದ ಅಫಿಡವಿಟ್

ಸಮಿತಿಯ ಶಿಫಾರಸ್ಸು
ಸಿದ್ದರಾಮಯ್ಯ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ ದಾಸ್ ಸೇರಿದಂತೆ 9 ಜನ ತಜ್ಞರ ಸಮಿತಿ ರಚಿಸಿ ವರದಿಗೆ ಕೋರಿತ್ತು. ಸಮಿತಿಯು ಲಿಂಗಾಯತ ಪ್ರತ್ಯೇಕ ಧರ್ಮವಾಗುವಂತೆ ವರದಿ ನೀಡಿತ್ತು. ವರದಿಯಂತೆ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಸಭೆಯಲ್ಲಿ ಶಿಫಾರಸ್ಸು ಮಾಡಿ ಪ್ರಸ್ತಾವನೆಯನ್ನು ಕಳುಹಿಸಿದ್ದರು.
ಲಿಂಗಾಯತರಿಗೆ ಮಹಾರಾಷ್ಟ್ರ ಸರ್ಕಾರದಿಂದಲೂ ಶಾಕ್

ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವನ್ನು ಕಳೆದ ಸರ್ಕಾರ ಇದ್ದಾಗ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಿ ಕೇಂದ್ರಕ್ಕೆ ಪ್ರಸ್ತಾವಣೆ ಕಳುಹಿಸಲಾಗಿತ್ತು. ಆದರೆ ಈ ಕೇಂದ್ರವು ಲಿಂಗಾಯತವು ಹಿಂದೂ ಧರ್ಮದ ಅವಿಭಾಜ್ಯ ಅಂಗ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಶಿವನೇ ಸಿದ್ದಾರೂಢ: ಲಿಂಗಾಯತ ಪ್ರತ್ಯೇಕ ಧರ್ಮನೂ ಆಗಿಲ್ಲ, ಎಂ ಬಿ ಪಾಟೀಲ್ರು ಸಚಿವರೂ ಆಗಿಲ್ಲ

ಲಿಂಗಾಯತ ಹೋರಾಟದಿಂದ ಕಾಂಗ್ರೆಸ್‌ಗೆ ಹಿನ್ನಡೆ
ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಸಿದ್ದರಾಮಯ್ಯ ಸರ್ಕಾರ ಬೆಂಬಲ ಕೊಟ್ಟ ಕಾರಣದಿಂದಲೇ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಭಾರಿ ಹಿನ್ನೆಡೆಯಾಯಿತು ಎಂದು ವಿಶ್ಲೇಷಿಸಲಾಗಿದೆ. ಅಲ್ಲದೆ ಎಂಬಿ.ಪಾಟೀಲ್ ಹೊರತುಪಡಿಸಿ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಯಾವೊಬ್ಬ ನಾಯಕರೂ ಚುನಾವಣೆ ಗೆಲ್ಲಲಿಲ್ಲ.

ಜೆಡಿಎಸ್ ಈಗ ಯಾರ ಪರ ನಿಲ್ಲುತ್ತದೆ
ಲಿಂಗಾಯತ ಪ್ರತ್ಯೇಕ ಧರ್ಮ ವರದಿಗೆ ಕಾಂಗ್ರೆಸ್ ಸರ್ಕಾರ ಒಪ್ಪಿಗೆ ನೀಡಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದಾಗ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಆದರೆ ಈಗ ಜೆಡಿಎಸ್ ಪಕ್ಷವು ಕಾಂಗ್ರೆಸ್ ಜೊತೆಗೆ ಮೈತ್ರಿಯಲ್ಲಿದ್ದು ಈಗ ಮತ್ತೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟವನ್ನು ಎಂಬಿ.ಪಾಟೀಲ್ ಮುನ್ನೆಲೆಗೆ ತರುತ್ತಿದ್ದಾರೆ. ಈಗ ಕುಮಾರಸ್ವಾಮಿ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಎಂಬಿ ಪಾಟೀಲ್‌ಗೆ ಮುಂಚಿನ ಬಲ ಇಲ್ಲ
ಕಳೆದ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಎಂಬಿ.ಪಾಟೀಲರಿಗೆ ಈ ಸಚಿವ ಸ್ಥಾನ ನಿರಾಕರಿಸಲಾಗಿದೆ. ಹಾಗಾಗಿ ಅವರ ಬಲ ಕುಗ್ಗಿದೆ. ಕಳೆದ ಬಾರಿ ಹೋರಾಟದಲ್ಲಿ ಅವರ ಜೊತೆಗಿದ್ದ ವಿನಯ್ ಕುಲಕರ್ಣಿ ಸೇರಿ ಹಲವರು ಚುನಾವಣೆಯಲ್ಲಿ ಸೋತಿದ್ದಾರೆ ಹಾಗಾಗಿ ಅವರ ಬಲ ಕುಗ್ಗಿದ್ದು ಕಾಂಗ್ರೆಸ್ ಮುಖಂಡರೂ ಕೂಡ ಪ್ರತ್ಯೇಕ ಧರ್ಮ ಹೊರಾಟದ ಬಗ್ಗೆ ಭ್ರಮನೀರಸಗೊಂಡಿದ್ದಾರೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !