ಹೆಂಡತಿ ಮಕ್ಕಳನ್ನೂ ನಂಬೋಲ್ಲ ಎಂದ ರೆಬೆಲ್ ಎಂ ಬಿ ಪಾಟೀಲ!
Recommended Video

ಎಂ ಬಿ ಪಾಟೀಲ್, ರೆಬೆಲ್ ಸ್ಟಾರ್ ಇಂಥಾ ಹೇಳಿಕೆ ಕೊಡಲು ಕಾರಣವೇನು? | Oneindia Kannada
ವಿಜಯಪುರ, ಜೂನ್ 12: ಕಾಂಗ್ರೆಸ್ ಮಟ್ಟಿಗೆ ರೆಬೆಲ್ ಸ್ಟಾರ್ ಆಗಿರುವ ಎಂ ಬಿ ಪಾಟೀಲ, 'ತಾವು ತಮ್ಮ ಹೆಂಡತಿ ಮಕ್ಕಳನ್ನೂ ನಂಬೋಲ್ಲ' ಎಂಬ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಮೇಲಿನ ತಮ್ಮ ಮುನಿಸನ್ನು ಈ ರೀತಿ ಹೊರಹಾಕಿದ್ದಾರೆ!
ವಿಜಯಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಪಾಟೀಲ,
ಹೈಕಮಾಂಡ್ ಸೂಚಿಸಿದ್ದರಿಂದ ನಾನು ದೆಹಲಿಗೆ ತೆರಳಿದ್ದೆನೇ ಹೊರತು ಯಾವುದೇ ಸಚಿವ ಸ್ಥಾನದ ಬೇಡಿಕೆ ಇಟ್ಟು ತೆರಳಿರಲಿಲ್ಲ. ನಾನು ಯಾವ ಸಚಿವ ಸ್ಥಾನವನ್ನಾಗಲೀ, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನಾಗಲೀ ಕೇಳಿಲ್ಲ ಎಂದರು.
ಕಾಂಗ್ರೆಸ್ ಪಕ್ಷಕ್ಕಾಗಿ ನಾನು ಏನೆಲ್ಲ ಕೆಲಸ ಮಾಡಿದ್ದೇನೆ ಎಂಬುದನ್ನು ಪಕ್ಷದ ರಾಷ್ಟ್ರಾಧ್ಯಕ್ಷರಾದ ರಾಹುಲ್ ಗಾಂಧಿಯವರಿಗೆ ತಿಳಿಸಿದ್ದೇನೆ. ನನ್ನ ಕೆಲಸವನ್ನೇ ಮಾನದಂಡವನ್ನಾಗಿಟ್ಟುಕೊಂಡು ಸೂಕ್ತ ಸ್ಥಾನ ನೀಡಬೇಕೆಂದು ಮನವಿ ಮಾಡಿದ್ದೇನಷ್ಟೆ ಎಂದು ಅವರು ಹೇಳಿದರು.

ನನಗೆ ನಂಬಿದ ಜಾಗದಲ್ಲೇ ಅನ್ಯಾಯವಾಗಿದೆ ಎಂಬುದು ಬೇಸರದ ಸಂಗತಿ. ನಾನು ಇನ್ನು ಮುಂದೆ ನನ್ನ ಹೆಂಡತಿ ಮಕ್ಕಳನ್ನೂ ನಂಬೋಲ್ಲ ಎಂದು ಅವರು ತಮ್ಮ ಆಕ್ರೋಶ ಹೊರಹಾಕಿದರು!












Click it and Unblock the Notifications