• search
  • Live TV
ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂಡಿ ಶಾಸಕರ ಹೆಸರಲ್ಲಿ 8 ನಕಲಿ ಫೇಸ್‌ಬುಕ್ ಖಾತೆ, ದೂರು ದಾಖಲು

|

ವಿಜಯಪುರ, ನವೆಂಬರ್ 13 : ಇಂಡಿ ಕ್ಷೇತ್ರದ ಕಾಂಗ್ರಸ್ ಶಾಸಕರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆಯಲಾಗಿದೆ. ದೇಣಿಗೆ ನೀಡುವಂತೆ ಖಾತೆಯಲ್ಲಿ ಪೋಸ್ಟ್ ಹಾಕಲಾಗಿದ್ದು, ಈ ಕುರಿತು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ.

ಇಂಡಿ ಶಾಸಕ ಯಶವಂತರಾಯಗೌಡ ವಿ.ಪಾಟೀಲ್ ಅವರ ಹೆಸರಿನಲ್ಲಿ 8 ನಕಲಿ ಫೇಸ್‌ಬುಕ್ ಖಾತೆ ತೆರೆಯಲಾಗಿದೆ ಎಂದು ಶಾಸಕರ ಆಪ್ತ ಸಹಾಯಕ ಎಸ್‌.ಸಿ.ರುದ್ರೇಶ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಸೈಬರ್‌ ಕ್ರೈಂ ಕೇಸುಗಳಲ್ಲಿ ಬೆಂಗಳೂರಿಗೆ 2ನೇ ಸ್ಥಾನ

ಶಾಸಕರೇ ಫೇಸ್‌ಬುಕ್ ಖಾತೆ ನಿರ್ವಹಣೆ ಮಾಡುವಂತೆ ಅವರ ಫೋಟೋಗಳನ್ನು ಹಾಕಿ ನಕಲಿ ಖಾತೆ ತೆರೆಯಲಾಗಿದೆ. ಒಂದು ಖಾತೆಯಲ್ಲಿ 5 ಸಾವಿರ ಡಾಲರ್ ದೇಣಿಗೆ ನೀಡುವಂತೆ ಸಂದೇಶ ಹಾಕಲಾಗಿದೆ. ಎರಡು ಪಟ್ಟು ಹಣವನ್ನು ವಾಪಸ್ ನೀಡುವುದಾಗಿ ತಿಳಿಸಲಾಗಿದೆ.

ಸೈಬರ್ ಕ್ರೈಂ ತಡೆಗೆ ಬೆಂಗಳೂರಲ್ಲಿ 8 ಸೈಬರ್ ವಿಶೇಷ ಠಾಣೆ

ಸೈಬರ್ ಕ್ರೈಂ ಪೊಲೀಸರು ರುದ್ರೇಶ್ ಅವರ ದೂರಿನ ಅನ್ವಯ ಐಟಿ ಸೆಕ್ಷನ್ 66ರ ಪ್ರಕಾರ ದೂರು ದಾಖಲು ಮಾಡಿಕೊಂಡು ಅನಾಮಿಕ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ. ಖಾತೆ ತೆರೆದ ವ್ಯಕ್ತಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ವಿಜಯಪುರ ಬೆಚ್ಚಿ ಬೀಳಿಸಿದ್ದ ಚಡಚಣ ಸಹೋದರರ ಹತ್ಯೆಗೆ 1 ವರ್ಷ

ನಕಲಿ ಖಾತೆ ತೆರೆದ ವ್ಯಕ್ತಿಗಳನ್ನು ಹುಡುಕಿ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಬೇಕು ಮತ್ತು ಫೇಸ್‌ಬುಕ್ ಖಾತೆಗಳನ್ನು ಡಿಲೀಟ್ ಮಾಡಬೇಕು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಲಾಗಿದೆ.

ಪೊಲೀಸರು ಯಾವ ಐಪಿ ಅಡ್ರೆಸ್ ಮೂಲಕ ಖಾತೆ ತೆರೆಯಲಾಗಿದೆ ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ಖಾತೆಗಳನ್ನು ಡಿಲೀಟ್ ಮಾಡಲು ತಂತ್ರಜ್ಞರ ಮೂಲಕ ಪ್ರಯತ್ನ ನಡೆಸಿದ್ದಾರೆ.

English summary
The Cyber Crime police registered the complaint and lookout for the accused who created Facebook accounts in the name of Indi constituency Congress MLA Yashavantharayagouda V.Patil seeking a contribution of 5,000 dollars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X