ತಾಲ್ಲೂಕು ಘೋಷಣೆ ಮಾಡದಿದ್ದರೆ ರಾಜಿನಾಮೆ: ಕಾಂಗ್ರೆಸ್ ಶಾಸಕ
ವಿಜಯಪುರ, ಡಿಸೆಂಬರ್ 16: ತಾಳಿಕೋಟೆಯನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡದಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಮುದ್ದೆಬಿಹಾಳ ಕಾಂಗ್ರೆಸ್ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದ್ದಾರೆ.
ಮುದ್ದೇಬಿಹಾಳದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ತಾಳಿಕೋಟೆ ಪಟ್ಟಣ ತಾಲ್ಲೂಕಾಗದಿದ್ದರೆ ನಾನು ರಾಜಕೀಯದಲ್ಲಿ ಮುಂದುವರೆಯುವುದಿಲ್ಲ ಎಂದಿದ್ದಾರೆ.
Recommended Video


ಡಿಸೆಂಬರ್ 20 ರಂದು ಮುದ್ದೇಬಿಹಾಳಕ್ಕೆ ಮುಖ್ಯಮಂತ್ರಿಗಳು ಆಗಮಿಸಲಿದ್ದು, ಅವರಿಗೆ ಶಿಷ್ಟಾಚಾರದ ಅನ್ವಯ ಸನ್ಮಾನ ಕಾರ್ಯಕ್ರಮ ಮಾಡಿ ಅಲ್ಲಿಯೇ ತಾಳಿಕೋಟೆ ತಾಲ್ಲೂಕು ಕೇಂದ್ರ ಘೋಷಣೆಯ ಮನವಿ ಸಲ್ಲಿಸಲಾಗುವುದು. ತಾಳಿಕೋಟೆ ತಾಲ್ಲೂಕು ಅಸ್ತಿತ್ವದ ಕುರಿತು ಮುಖ್ಯಮಂತ್ರಿಗಳಿಂದ ಸ್ಪಷ್ಟ ಭರವಸೆ ಸಿಗದಿದ್ದರೆ ಅಂದೇ ರಾಜಿನಾಮೆ ಸಲ್ಲಿಸಿ ಕಾಂಗ್ರೆಸ್ ಪಕ್ಷದಿಂದ ಹೊರ ನಡೆಯುತ್ತೇನೆ ಎಂದು ಅವರು ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲ್ಲೂಕಿನ ತಾಳಿಕೋಟೆ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಬೇಕೆಂದು ಹಲವು ಸಮಯದಿಂದ ಅಲ್ಲಿನ ನಾಗರೀಕರು ಒತ್ತಾಯ ಮಾಡುತ್ತಲೇ ಬರುತ್ತಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ಗಮನವಹಿಸಿಲ್ಲ.












Click it and Unblock the Notifications