• search
  • Live TV
ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರ ಖಂಡಾಲಾ ಘಾಟ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಿಎಂ ಸಾಂತ್ವನ

|

ವಿಜಯಪುರ, ಡಿಸೆಂಬರ್ 25: ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಖಂಡಾಲಾ ಘಾಟ್ ಬಳಿ ಬಸ್ ದುರಂತದಲ್ಲಿ ಮೃತರಾಗಿದ್ದ ವಿಜಯಪುರ ತಾಲೂಕಿನ ಮದಭಾವಿ ತಾಂಡಾಕ್ಕೆ ಭೇಟಿ ನೀಡಿ ಸಿಎಂ ಕುಮಾರಸ್ವಾಮಿ ಸಾಂತ್ವನ ಹೇಳಲಿದ್ದಾರೆ.

ವಿಜಯಪುರ ಜಿಲ್ಲೆಯ ಕೂಲಿಕಾರ್ಮಿಕರು ದುಡಿಯಲು ಮಹಾರಾಷ್ಟ್ರ ರಾಜ್ಯಕ್ಕೆ ಹೋಗುವ ಸಂದರ್ಭದಲ್ಲಿ ಖಂಡಾಲಾ ಘಾಟ್ (ಪುಣೆ-ಸಾತಾರಾ ಹೆದ್ದಾರಿ ರಸ್ತೆ) ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಟ್ಟು 17ಜನ ಮೃತಪಟ್ಟಿದ್ದರು.

ಮಂಡ್ಯ ಭೀಕರ ದುರಂತ: ದುರಂತದಲ್ಲಿ ಮೃತಪಟ್ಟ 25 ಜನರ ಹೆಸರುಗಳು

ಈ ಎಲ್ಲ ಸಂತ್ರಸ್ಥ ಕುಟುಂಬ ವರ್ಗದವರಿಗೆ ಈಗಾಗಲೇ ಮಾನ್ಯ ಪ್ರಧಾನಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ.ದಂತೆ ಒಟ್ಟು 34 ಲಕ್ಷ ರೂ. ಬಿಡುಗಡೆಯಾಗಿದೆ. ಸಂಬಂಧಪಟ್ಟ ತಹಶೀಲ್ದಾರರು ಸಂತ್ರಸ್ಥ ಕುಟುಂಬದವರಿಗೆ ಪರಿಹಾರದ ಮೊತ್ತವನ್ನು ಸಹ ತಲುಪಿಸಿದ್ದಾರೆ. ಮೃತಪಟ್ಟಿರುವ ಜಿಲ್ಲೆಯ 17 ಜನರ ವಿವರ ಈ ಕೆಳಗಿನಂತಿದೆ.

ಮಂಡ್ಯ ಬಸ್ ಅಪಘಾತ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ

ವಿಜಯಪುರ ತಾಲೂಕಿನ ವಿಠ್ಠಲ ಖಿರು ರಾಠೋಡ, ಶ್ರೀಮತಿ ಕಲಾವತಿ ವಿಠ್ಠಲ ರಾಠೋಡ, ಕಿರಣ ವಿಠ್ಠಲ ರಾಠೋಡ, ಪ್ರಿಯಾಂಕಾ ಪುತ್ತು ರಾಠೋಡ, ಶ್ರೀಮತಿ ದೇವಿಬಾಯಿ ಮೋಹನ ರಾಠೋಡ, ರೇಖು ಶಂಕರ ಚವ್ಹಾಣ, ಸಂತೋಷ ಕಾಶಿನಾಥ ನಾಯಕ, ಮಂಗಲಾಬಾಯಿ ಚಂದು ನಾಯಕ, ಶ್ರೀಮತಿ ಮಹಾದೇವಿ ಅನಿಲ ರಾಠೋಡ, ಮಹಿಬೂಬ ರಾಜೇಸಾಬ ಅತ್ತಾರ, ಮಾಜೀದ ಮಹಿಬೂಬ ಅತ್ತಾರ, ಬಸವನಬಾಗೇವಾಡಿ ತಾಲೂಕಿನ ಅರ್ಜುಣ ರಮೇಶ ಚವ್ಹಾಣ, ಶ್ರೀಕಾಂತ ಬಾಸು ರಾಠೋಡ, ಸುಭಾಸ ಬಾಸು ರಾಠೋಡ, ಇಂಡಿ ತಾಲೂಕಿನ ಕೃಷ್ಣ ಸೋಮು ಪವಾರ, ಸಂಗೀತಾ ಕಿರಣ ರಾಠೋಡ, ಕುಮಾರ ತನವೀರ ಕಿರಣ ರಾಠೋಡ ಮೃತಪಟ್ಟಿದ್ದರು.

English summary
Chief minister HD Kumaraswamy will visit to Vijayapura and will speak with Khandala ghat accident diseased family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X