Vastu Tips for Women: ಲಕ್ಷ್ಮೀ ಕೋಪಕ್ಕೆ ಕಾರಣವಾಗುವ ಮಹಿಳೆಯರ ಈ ಅಭ್ಯಾಸಗಳು
ಮಹಿಳೆಯರು ಮನೆಯಲ್ಲಿ ಮಾಡುವ ಕೆಲವು ಸಣ್ಣ ಪುಟ್ಟ ತಪ್ಪುಗಳು ಕುಟುಂಬದ ಆರ್ಥಿಕ ಸ್ಥಿತಿ ಹಾಗೂ ಮನೆಯ ವಾತಾವರಣದ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಲಕ್ಷ್ಮೀದೇವಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮಹಿಳೆಯರು ಮನೆಯ ವಾಸ್ತು ನಿಯಮಗಳನ್ನು ಪಾಲಿಸುವುದು ಅತ್ಯಂತ ಮುಖ್ಯ ಎಂದು ನಂಬಲಾಗಿದೆ. ಮನೆಗೆ ಆರ್ಥಿಕ ಸಮೃದ್ಧಿ, ಶಾಂತಿ ಮತ್ತು ಧನಲಾಭ ಆಗಬೇಕೆಂದರೆ ಕೆಲವು ಅನಗತ್ಯವಾದ ತಪ್ಪುಗಳನ್ನು ಮಾಡಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಸೂರ್ಯೋದಯದ ಬಳಿಕ ಹೆಚ್ಚು ಹೊತ್ತು ನಿದ್ರೆ ಮಾಡಬೇಡಿ
ವಾಸ್ತು ಪ್ರಕಾರ ಮಹಿಳೆಯರು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಪೂಜೆ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಸೂರ್ಯೋದಯದ ಬಳಿಕವೂ ಹೆಚ್ಚು ಹೊತ್ತು ನಿದ್ರೆ ಮಾಡುವುದರಿಂದ ಮನೆಯ ಅಭಿವೃದ್ಧಿಗೆ ತೊಂದರೆ ಆಗುತ್ತದೆ ಎಂದು ಹೇಳಲಾಗುತ್ತದೆ. ಬೇಗ ಎದ್ದು ಸ್ನಾನ, ಪೂಜೆ ಅಭ್ಯಾಸದಿಂದ ಮನೆಗೆ ಸಮೃದ್ಧಿ ತರುತ್ತದೆ ಎಂಬ ನಂಬಿಕೆಯಿದೆ.

ಕಸಬರಿಗೆ/ಪೊರಕೆ ಕಾಲಿನಿಂದ ತುಳಿಯಬಾರದು
ವಾಸ್ತು ಶಾಸ್ತ್ರದ ಪ್ರಕಾರ ಕಸಬರಿಗೆಯಲ್ಲಿ ಲಕ್ಷ್ಮೀದೇವಿ ವಾಸವಿರುತ್ತಾಳೆ ಎಂದು ನಂಬಲಾಗುತ್ತದೆ. ಇದು ಮನೆಯಲ್ಲಿನ ದೂಳು ಮತ್ತು ನಕಾರಾತ್ಮಕತೆಯನ್ನು ಹೊರಹಾಕಿ, ಶುಚಿತ್ವವನ್ನು ತರುತ್ತದೆ ಆದ್ದರಿಂದ ಅದನ್ನು ಗೌರವದಿಂದ ಕಾಣಬೇಕು. ಕಸಬರಿಗೆಯನ್ನು ಕಾಲಿನಿಂದ ತುಳಿಯುವುದು ಅಥವಾ ಅಜಾಗರೂಕತೆಯಿಂದ ಎಸೆಯುವುದು ಅಶುಭವೆಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ವಾಸ್ತು ದೋಷ ಉಂಟಾಗಿ ಆರ್ಥಿಕ ಸಮಸ್ಯೆಗಳು ಎದುರಾಗಬಹುದು.
ಸಂಜೆ ಸಮಯದಲ್ಲಿ ಕಸ ಗುಡಿಸುವುದು
ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ನಂತರ ಮನೆ ಕಸ ಗುಡಿಸುವುದು ಅಶುಭ. ಸಂಜೆ ಲಕ್ಷ್ಮಿ ದೇವಿಯ ಆಗಮನದ ಸಮಯವಾದ್ದರಿಂದ, ಈ ವೇಳೆ ಕಸ ಹೊರಹಾಕಿದರೆ ಮನೆಯ ಐಶ್ವರ್ಯ ಮತ್ತು ಸಕಾರಾತ್ಮಕ ಶಕ್ತಿ ಕಡಿಮೆಯಾಗಿ ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆ ಎಂಬ ನಂಬಿಕೆಯಿದೆ. ಅನಿವಾರ್ಯವಾದರೆ ಮಾತ್ರ ಗುಡಿಸಿ, ಆದರೆ ಕಸವನ್ನು ಹೊರಹಾಕದೆ ಒಂದು ಮೂಲೆಯಲ್ಲಿಟ್ಟು ಮರುದಿನ ವಿಲೇವಾರಿ ಮಾಡಬೇಕು.
ರಾತ್ರಿ ಪಾತ್ರೆಗಳನ್ನು ತೊಳೆಯದೇ ಬಿಡಬೇಡಿ
ಅಡುಗೆಮನೆಯಲ್ಲಿ ಅನ್ನಪೂರ್ಣೇಶ್ವರಿ ದೇವಿಯ ವಾಸವಿರುತ್ತದೆ ಎಂದು ನಂಬಲಾಗಿದೆ. ರಾತ್ರಿ ಪಾತ್ರೆಗಳನ್ನು ಹಾಗೆ ಬಿಡುವುದು ಮನೆಯ ಸಂತೋಷ ಮತ್ತು ಶಾಂತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಹೀಗಾಗಿ ರಾತ್ರಿ ಬಳಸಿದ ಪಾತ್ರೆಗಳನ್ನು ಹಾಗೆಯೇ ಬಿಡುವುದು ಒಳ್ಳೆಯದಲ್ಲ. ಇದು ಮನೆಯಲ್ಲಿನ ಸಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಬೆಳಿಗ್ಗೆ ಅಶುದ್ಧ ಪಾತ್ರೆಗಳನ್ನು ನೋಡುವುದು ದಾರಿದ್ರ್ಯಕ್ಕೆ ಕಾರಣವಾಗಬಹುದು ಎಂಬ ನಂಬಿಕೆಯೂ ಇದೆ.
ಬಾಗಿಲಿಗೆ ಕಾಲಿನಿಂದ ಒದೆಯುವುದು
ಮನೆಯ ಬಾಗಿಲನ್ನು ಕಾಲಿನಿಂದ ತಳ್ಳುವುದು ಅಥವಾ ಒದೆಯುವುದು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ, ಬಾಗಿಲಿನ ಕಡೆಗೆ ಕಾಲು ಚಾಚಿ ಮಲಗುವುದು ಸಹ ಒಳ್ಳೆಯದಲ್ಲ. ಹೀಗೆ ಮಾಡುವುದರಿಂದ ಲಕ್ಷ್ಮೀದೇವಿ ಮನೆಯಿಂದ ದೂರವಾಗಬಹುದು ಎಂದು ವಾಸ್ತು ನಂಬಿಕೆ ಹೇಳುತ್ತದೆ. ಇದರಿಂದ ಹಣಕಾಸಿನ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಮನೆಯ ಹೊಸ್ತಿಲಿನಲ್ಲಿ ಕುಳಿತು ಊಟ ಮಾಡಬೇಡಿ
ಮನೆಯ ಹೊಸ್ತಿಲು ಧನಾತ್ಮಕ ಮತ್ತು ನಕಾರತ್ಮಕ ಶಕ್ತಿಗಳ ನಡುವಿನ ಗಡಿಯಾಗಿದೆ, ಇಲ್ಲಿ ಕುಳಿತುಕೊಳ್ಳುವುದರಿಂದ ನಕಾರಾತ್ಮಕ ಶಕ್ತಿಯ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಮನೆಯ ಬಾಗಿಲಿನ ಹೊಸ್ತಿಲಿನಲ್ಲಿ ಕುಳಿತು ಊಟ ಮಾಡುವುದು ಮಾಡುವುದು ಒಳ್ಳೆಯದಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ವಿಶೇಷವಾಗಿ ವಿವಾಹಿತ ಮಹಿಳೆಯರು ಈ ಅಭ್ಯಾಸವನ್ನು ತಪ್ಪಿಸಬೇಕು ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಆರ್ಥಿಕ ಸ್ಥಗಿತ ಮತ್ತು ಅಶಾಂತಿ ಉಂಟಾಗಬಹುದು.














Click it and Unblock the Notifications