ವಿಜಯಪುರ, ಡಿಸೆಂಬರ್ 22 : ವಿಜಯಪುರದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ಮನೆಗೆ ಸಿಐಡಿ ತಂಡ ಭೇಟಿ ನೀಡಿ ಪೋಷಕರ ಬಳಿ ಮಾಹಿತಿ ಕಲೆ ಹಾಕಿದೆ.
ಆ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಐಪಿಎಸ್ ಅಧಿಕಾರಿಆನಂದ್ ಕುಮಾರ್ ಮಾತನಾಡಿ, ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ಮಾಡಲಾಗುವುದು. ಮೂವರು ಡಿಎಸ್ಪಿ, ಒಂದು ಎಸ್ ಪಿ ನೇತೃತ್ವದಲ್ಲಿ ಹನ್ನೆರೆಡು ಜನರ ತಂಡ ತನಿಖೆ ನಡೆಸಿದೆ ಪ್ರಕರಣ ನಡೆದ ಸ್ಥಳ, ಆರೋಪದ ಕುರಿತು ಒಂದೊಂದಾಗಿ ಕೂಲಂಕುಷ ತನಿಖೆ ಮಾಡುತ್ತೇವೆ, ಮರಣೋತ್ತರ ಪರೀಕ್ಷೆ ವರದಿ, ಎಲ್ಲಾ ವಿವರ ಪಡೆದು ಪ್ರಕರಣವನ್ನು ತನಿಖೆ ಮಾಡುತ್ತೇವೆ ಎಂದು ಹೇಳಿದರು.
ಸಿಐಡಿ ತಂಡವು ಘಟನಾ ಸ್ಥಳಕ್ಕೆ, ಬಾಲಕಿಯ ಮನೆ ಹಾಗೂ ಪ್ರಕರಣದ ಆರೋಪಿಗಳ ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಕಲೆ ಹಾಕಿತು. ಬಾಲಕಿ ಮನೆಗೆ ಭೇಟಿ ನೀಡಿದಾಗ ಅಧಿಕಾರಿಗಳ ಕಾಲುಗಳಿಗೆ ಬಿದ್ದು ನ್ಯಾಯ ಕೊಡಿಸುವಂತೆ ಬಾಲಕಿ ತಂದೆ ಮನವಿ ಮಾಡಿದರು. ಬಾಲಕಿ ತಂದೆಯನ್ನು ಸಮಾಧಾನ ಪಡಿಸಿ ಮನೆಯೊಳಗೆ ಕರೆದುಕೊಂಡು ಹೋಗಿ ಪ್ರಕರಣದ ಕುರಿತು ಮಾಹಿತಿ ಪಡೆದರು.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!